ಪೆರ್ಲ: ಪೆರಿಯ ಕಲ್ಯೋಟ್ ನ ಯುವ ಕಾಂಗ್ರೆಸ್ ನೇತಾರರಾದ ಕೃಪೇಶ್ ಹಾಗೂ ಶರತ್ ಲಾಲ್ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಮಾಜಿ ಶಾಸಕ, ಸಿಪಿಐಎಂ ಜಿಲ್ಲಾ ಮುಂದಾಳು ಕೆ.ವಿ.ಕುಂಞÂ್ಞ ರಾಮನ್ ರನ್ನು ಶೀಘ್ರ ಬಂಧಿಸಿ ತನಿಖೆಗೊಳಪಡಿಸುವಂತೆ ಒತ್ತಾಯಿಸಿ ಎಣ್ಮಕಜೆ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಪೆರ್ಲ ಪೇಟೆಯಲ್ಲಿ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಕಚೇರಿ ಪರಿಸರದಿಂದ ಆರಂಭಗೊಂಡ ಪ್ರತಿಭಟನೆ ಕೆಳಗಿನ ಪೇಟೆಯಲ್ಲಿ ಸಮಾಪ್ತಿಗೊಂಡಿತು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್.ಉದ್ಘಾಟಿಸಿದರು. ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಸಭೆಯ ಅಧ್ಯಕ್ಷತೆವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ವಿಲ್ಫ್ರೆಡ್ ಡಿಸೋಜ,ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ರಸಾಕ್ ನಲ್ಕ,ಮಂಡಲ ಕಾರ್ಯದರ್ಶಿ ಕರಿಂ ಕಾಟುಕುಕ್ಕೆ, ಯೂತ್ ಕಾಂಗ್ರೆಸ್ ಎಣ್ಮಕಜೆ ಮಂಡಲಾಧ್ಯಕ್ಷ ನಿಸಾರ್ ಬಣ್ಪುತ್ತಡ್ಕ, ಹಾರಿಸ್ ಎಂ.ಎಚ್,ಅಬ್ದುಲ್ಲ ಮೊದಲಾದವರು ಪಾಲ್ಗೊಂಡರು.




