ಪೆರ್ಲ: ಎಣ್ಮಕಜೆ ಗ್ರಾ.ಪಂ.ಮಟ್ಟದ ಜಲಜೀವನ್ ಮಿಷನ್ ಗ್ರಾಮೀಣ ಶುದ್ಧಜಲ ವಿತರಣ ಯೋಜನೆ ಕಾರ್ಯಗಾರ ಪಂಚಾಯತಿ ಹಾಲ್ ನಲ್ಲಿ ಜರಗಿತು.ಕೇರಳ ಸತ್ಯಸಾಯಿ ಅನಾಥಲಯ ಟ್ರಸ್ಟ್ ಸಹಕಾರದಲ್ಲಿ ನಡೆದ ಕಾರ್ಯಗಾರವನ್ನು ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿದರು. ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಸೌಧಾಬಿ ಹನೀಫ್, ಪಂ.ಸದಸ್ಯರಾದ ಕುಸುಮಾವತಿ,ಇಂದಿರಾ,ರಮ್ಲ,ರೂಪವಾಣಿ ಆರ್. ಭಟ್,ಪಂ.ಕಾರ್ಯದರ್ಶಿ ಅಚ್ಚುತ ಮಣಿಯಾಣಿ, ಕೇರಳ ವಾಟರ್ ಆಥೋರಿಟಿ ಎಕ್ಸಿಟಿವ್ ಇಂಜಿನಿಯರ್ ಪದ್ಮನಾಭನ್, ಅಸಿಸ್ಟೆಂಟ್ ಇಂಜಿನಿಯರ್ ಡೈಸಿ ಸಭೆಯಲ್ಲಿ ಉಪಸ್ಥಿತರಿದ್ದರು. ದೀಪ್ತಿ ಎಸ್.ಕುಂಜತ್ತೂರು ಸಂಪನ್ಮೂಲ ವ್ಯಕ್ತಿಯಾಗಿ ತರಗತಿ ನಡೆಸಿದರು.




