ಕಾಸರಗೋಡು: ಪೆರಿಯ ಕಲ್ಯೋಟ್‍ನ ಅವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂನ ಮಾಜಿ ಶಾಸಕ ಸೇರಿದಂತೆ 24ಮಂದಿಗೆ ನ್ಯಾಯಾಲಯ ನೋಟೀಸು ಜಾರಿಗೊಳಿಸಿದೆ. ಮಾಜಿ ಶಾಸಕ, ಸಿಪಿಎಂ ಮುಖಂಡ ಕೆ.ವಿ ಕುಞÂರಾಮನ್, ಕಾಞಂಗಾಡು ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಣಿಕಂಠನ್, ಸ್ಥಳೀಯ ಮುಖಂಡರಾದ ರಾಘವನ್, ಭಾಸ್ಕರನ್, ಬಾಲಕೃಷ್ಣನ್, ಮಣಿ ಕೆ.ವಿ, ಗೋಪನ್, ಸಂದೀಪ್ ಸೇರಿದಂತೆ 24ಮಂದಿಗೆ ನೋಟೀಸು ಜಾರಿಗೊಳಿಸಿದ್ದು, ಆರೋಪಿಗಳಿಗೆ ಈ ನೋಟೀಸನ್ನು ತಕ್ಷಣ ತಲುಪಿಸಲಾಗುವುದು ಎಂದು ಸಿಬಿಐ ತಿಳಿಸಿದೆ.
ಯುವಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು ಶರತ್‍ಲಾಲ್ ಕೊಲೆ ಪ್ರಕರಣದ ಆರೋಪಿಗಳಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ರೀತಿಯಲ್ಲಿ ಇವರು ಸಹಕರಿಸಿರುವುದಾಗಿ ಸಿಬಿಐ ಕೇಸು ದಾಖಲಿಸಿಕೊಂಡಿದೆ. ಇದುವರೆಗೆ 19ಮಂದಿ ಆರೋಫಿಗಳನ್ನು ಬಂಧಿಸಲಾಗಿದ್ದು, ಇವರಲ್ಲಿ ಮೂವರಿಗೆ ಜಾಮೀನು ಮಂಜೂರುಗೊಳಿಸಿದೆ. ಐದು ಮಂದಿಯ ಜಾಮೀನು ಅರ್ಜಿಯನ್ನು ಶುಕ್ರವಾರ ನ್ಯಾಯಾಲಯ ತಿರಸ್ಕರಿಸಿತ್ತು.




