HEALTH TIPS

ಖಾಯಂ ವರ್ಕ್ ಫ್ರಮ್‌ ಹೋಮ್‌ ಮಾಡಿದರೆ ಸಂಬಳ ಕಡಿತ: ಶೀಘ್ರ ಕಾರ್ಮಿಕ ಸಚಿವಾಲಯ ಆದೇಶ!

             ನವದೆಹಲಿ: ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ನಡುವೆ ಕೆಲವು ಖಾಯಂ ಆಗಿ ಮನೆಯಿಂದಲೇ ಕೆಲಸ ಮಾಡಲು ಉದ್ಯೋಗಿಗಳು ಮುಂದಾಗಿದ್ದಾರೆ. ಈ ಬಗ್ಗೆ ಕೆಲವು ಉದ್ಯೋಗಿಗಳು ತಮ್ಮ ಸಂಸ್ಥೆಯಲ್ಲಿ ಪ್ರಸ್ತಾಪ ಕೂಡಾ ಮಾಡಿದ್ದಾರೆ. ಖಾಯಂ ಆಗಿ ವರ್ಕ್ ಫ್ರಮ್‌ ಹೋಮ್‌ ಮಾಡಲು ಮುಂದಾಗುವವರು ತಮ್ಮ ಸಂಬಳದಲ್ಲಿ ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ)ಯಲ್ಲಿ ಕಡಿತ ಸೇರಿದಂತೆ ಅವರ ಕೆಲವು ಬದಲಾವಣೆಗಳನ್ನು ಎದುರಿಸಬೇಕಾಗುತ್ತದೆ. ಈ ವಿಚಾರದಲ್ಲಿ ಕಾರ್ಮಿಕ ಸಚಿವಾಲಯವು ಶೀಘ್ರದಲ್ಲೇ ಆದೇಶವನ್ನು ಹೊರಡಿಸಲು ಮುಂದಾಗಿದೆ. ಆದ್ದರಿಂದಾಗಿ ವರ್ಕ್ ಫ್ರಮ್‌ ಮಾಡಲು ಬಯಸುವವರ ಸಂಬಳದಲ್ಲಿ ಶೀಘ್ರವೇ ಕೆಲವು ಬದಲಾವಣೆಗಳು ಆಗಲಿದೆ.

           ಎಕನಾಮಿಕ್ ಟೈಮ್ಸ್ ವರದಿಯ ಪ್ರಕಾರ, ಕಾರ್ಮಿಕ ಸಚಿವಾಲಯವು ಮನೆಯಿಂದಲೇ ಶಾಶ್ವತವಾಗಿ ಕೆಲಸ ಮಾಡಲು ಬಯಸುವ ಉದ್ಯೋಗಿಗಳ ವೇತನ ರಚನೆಯಲ್ಲಿ ಬದಲಾವಣೆ ಮಾಡಲು ಉದ್ಯೋಗದಾತರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಈ ಕ್ರಮವು ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ಹಾಗೂ ಮೂಲಸೌಕರ್ಯ ಅಡಿಯಲ್ಲಿ ಆಗುವ ಮರುಪಾವತಿಯ ಕಡಿತಕ್ಕೆ ಕಾರಣವಾಗಲಿದೆ.

           ವರದಿಯ ಪ್ರಕಾರ, ಉದ್ಯೋಗಿಗಳು ವಿದ್ಯುತ್ ಮತ್ತು ವೈಫೈನಂತಹ ಕೆಲವು ಮೂಲಸೌಕರ್ಯ ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಇದನ್ನು ಉದ್ಯೋಗದಾತರು ನೀಡುವುದಿಲ್ಲ. ಇದಲ್ಲದೆ, ಉದ್ಯೋಗಿಯೊಬ್ಬರು ತಮ್ಮ ಊರಿಗೆ ಸ್ಥಳಾಂತರಗೊಳ್ಳುವ ಕಾರಣ ನೀಡಿ ವರ್ಕ್ ಫ್ರಮ್‌ ಮಾಡಲು ಮುಂದಾದರೆ ಅವರ ಸಂಬಳದಲ್ಲಿಯೂ ಕಡಿತ ಉಂಟಾಗಲಿದೆ. ಇನ್ನು "ಕಾರ್ಮಿಕ ಸಚಿವಾಲಯವು ಎಲ್ಲಾ ವಿಚಾರವನ್ನು ಚರ್ಚೆ ನಡೆಸಲಿದೆ. ಶೀಘ್ರದಲ್ಲಿಯೇ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.
           ವೇತನ ರಚನೆಯಲ್ಲಿ ಬದಲಾವಣೆ ಆದರೆ ಏನು ಕಡಿತ ಆಗಲಿದೆ? ವೇತನ ರಚನೆಯಲ್ಲಿ ಬದಲಾವಣೆ ಆದಲ್ಲಿ ಮೊದಲು ಅತ್ಯಂತ ಮಹತ್ವವಾದ ಹೆಚ್‌ಆರ್‌ಎ ಕಡಿತ ಆಗುವ ಸಾಧ್ಯತೆ ಇದೆ. ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ, ಎಚ್‌ಆರ್‌ಎಯಲ್ಲಿ ಮೂರು ಅಂಶಗಳು ಒಳಗೊಳ್ಳುತ್ತದೆ. ಉದ್ಯೋಗದಾತರಿಂದ ಪಡೆದ ನಿಜವಾದ ಹೆಚ್‌ಆರ್‌ಎ ಕಡಿತ, ಮೆಟ್ರೋ ನಗರಗಳಲ್ಲಿ ವಾಸಿಸುವವರಿಗೆ ಮೂಲ ವೇತನದ ಶೇಕಡ 50 ಹಾಗೂ ತುಟ್ಟಿಭತ್ಯೆ, ಮೆಟ್ರೋಯೇತರ ಪ್ರದೇಶದಲ್ಲಿ ವಾಸಿಸುವವರಿಗೆ ಮೂಲ ವೇತನದ ಶೇಕಡ 40 ರಷ್ಟು ಕಡಿತ, ಹಾಗೆಯೇ ಮೂಲ ವೇತನದಿಂದ ಶೇಕಡ 10 ರಷ್ಟು ಹಾಗೂ ಡಿಎ ಕಡಿತ ಮಾಡುವ ಮೂರು ಅಂಶಗಳು ಈ ಎಚ್‌ಆರ್‌ಎ ಮಾರ್ಗಸೂಚಿಯಲ್ಲಿ ಇದೆ. ಇನ್ನು ಒಂದು ವೇಳೆ ವರ್ಕ್ ಫ್ರಮ್‌ ಹೋಮ್‌ ಇದ್ದರೂ ಉದ್ಯೋಗಿಗಳ ಎಚ್‌ಆರ್‌ಎ ಕಡಿತ ಮಾಡದರಿದ್ದರೆ ಅಥವಾ ತೆರಿಗೆ ರಿಯಾಯಿತಿ ಲಭ್ಯವಿದ್ದರೆ, ಉದ್ಯೋಗಿಯ ತೆರಿಗೆಯು ಅಧಿಕವಾಗುವ ಸಾಧ್ಯತೆ ಇದೆ. ಇಷ್ಟು ಮಾತ್ರವಲ್ಲದೇ ಎಚ್‌ಆರ್‌ಎ ಕಡಿತ ಆಗುವುದರಿಂದಾಗಿ ತೆರಿಗೆ ಕಡಿತ ಹೆಚ್ಚಾಗಬಹುದು. ಹಾಗೆಯೇ ನೌಕರರ ಭವಿಷ್ಯ ನಿಧಿಗಾಗಿ ಹೆಚ್ಚು ಹಣ ಕಡಿತ ಆಗಬಹುದು. ಇವೆಲ್ಲದರ ಪರಿಣಾಮವಾಗಿ ಉದ್ಯೋಗಿಗಳಿಗೆ ಲಭ್ಯವಾಗುವ ಸಂಬಳವು ಹೆಚ್ಚು ಕಡಿಮೆ ಆಗಬಹುದು.
            ಕೊರೊನಾ ವೈರಸ್‌ ಸೋಂಕು ಸಂದರ್ಭದಲ್ಲಿ ಲಾಕ್‌ಡೌನ್‌ ಆದಾಗ ಎಲ್ಲಾ ಸಂಸ್ಥೆಗಳು ವರ್ಕ್ ಫ್ರಮ್‌ ಹೋಮ್‌ ಅನ್ನು ಅನಿವಾರ್ಯವಾಗಿ ಆರಂಭ ಮಾಡಬೇಕಾದ ಪರಿಸ್ಥತಿ ಉಂಟಾಯಿತು. ಲಾಕ್‌ಡೌನ್‌ ನಿಯಮವನ್ನು ಸಡಿಲಿಕೆ ಮಾಡಿದ ಬಳಿಕ ಕೆಲವೊಂದು ಸಂಸ್ಥೆಗಳು ಕಚೇರಿಯನ್ನು ತೆರೆದಿದೆ. ಆದರೆ ಪ್ರಸ್ತುತ ಕೋವಿಡ್‌ ಲಸಿಕೆಯನ್ನು ಎಲ್ಲಾ ಸಿಬ್ಬಂದಿಗಳು ಪಡೆದಿರುವುದು ಅತ್ಯವಶ್ಯಕವಾಗಿದೆ. ಈ ನಡುವೆ ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ವಿಶ್ವದ ಹಲವಾರು ದೇಶಗಳಲ್ಲಿ ಕಾಣಿಸಿಕೊಂಡಿದೆ. ಭಾರತದಲ್ಲಿಯೂ ಓಮಿಕ್ರಾನ್‌ ಪ್ರಕರಣಗಳು ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಿಂದಾಗಿ ಹಲವಾರು ಮಂದಿ ತಮ್ಮ ಖಾಯಂ ಆಗಿ ವರ್ಕ್ ಫ್ರಮ್‌ ಹೋಮ್‌ ನೀಡುವಂತೆ ತಮ್ಮ ಸಂಸ್ಥೆಗಳಿಗೆ ಮವನಿ ಮಾಡುತ್ತಿದ್ದಾರೆ. ಏತನ್ಮಧ್ಯೆ ಕಾರ್ಮಿಕ ಇಲಾಖೆಯು ಸಂಬಳ ಕಡಿತದ ಹೊಸ ಕ್ರಮ ಕೈಗೊಳ್ಳಲು ಚಿಂತನೆ ನಡೆಸುತ್ತಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries