HEALTH TIPS

ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆಗೆ ಸಂಸತ್ ಒಪ್ಪಿಗೆ: ರಾಜ್ಯಸಭೆ ಸೂಚಿಸಿದ ತಿದ್ದುಪಡಿಗೆ ಲೋಕಸಭೆಯಲ್ಲಿ ಸಮ್ಮತಿ

          ನವದೆಹಲಿ: ರಾಜ್ಯಸಭೆ ಸೂಚಿಸಿದ ತಿದ್ದುಪಡಿಯೊಂದಿಗೆ ಬಾಡಿಗೆ ತಾಯ್ತನ (ತಿದ್ದುಪಡಿ) ಮಸೂದೆ 2019ನ್ನು ಲೋಕಸಭೆ ಶುಕ್ರವಾರ ಅಂಗೀಕರಿಸಿದೆ. ರಾಜ್ಯಸಭೆಯಲ್ಲಿ ಇದು ಡಿ.14ರಂದು ಅಂಗೀಕಾರವಾಗಿತ್ತು. ಈ ಮಸೂದೆ ಅಂಗೀಕಾರವಾಗುವ ವೇಳೆ ವಿಪಕ್ಷ ಸದಸ್ಯರು ಕಲಾಪದಲ್ಲಿ ಭಾಗಿ ಆಗದೆ ಪ್ರತಿಭಟನೆ ಮುಂದುವರಿಸಿದ್ದರು.

          ಲಖಿಂಪುರಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದ ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು. ಈ ಗದ್ದಲದ ಕಾರಣ ಲೋಕಸಭೆ ಕಲಾಪ ಸೋಮವಾರಕ್ಕೆ ಮುಂದೂಡಲ್ಪಟ್ಟಿತ್ತು.

            ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಅವರು ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ 2019ನ್ನು ಮಂಡಿಸಿದ್ದರು.ರಾಜ್ಯಸಭೆಯಲ್ಲಿ ಕಳೆದ ವಾರ ಇದು ಮಂಡನೆಯಾಗಿದ್ದು, ಕೆಲವು ತಿದ್ದುಪಡಿಗಳನ್ನು ಸೂಚಿಸಲಾಗಿತ್ತು. ಇದರೊಂದಿಗೆ ಇದು ಡಿ.14ರಂದು ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ಲೋಕಸಭೆಗೆ ರವಾನೆ ಆಗಿತ್ತು. ಲೋಕಸಭೆಯಲ್ಲಿ ಈ ಮಸೂದೆ ಶುಕ್ರವಾರ ಅಪರಾಹ್ನ ಅಂಗೀಕಾರವಾಗಿದೆ. ಬಳಿಕ ಕಲಾಪ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.

ಕಾನೂನು ಆಯೋಗ ಹೇಳಿದ್ದೇನು?: ಭಾರತದಲ್ಲಿ ನಿರ್ಬಂಧಿತ ಬಾಡಿಗೆ ತಾಯ್ತನಕ್ಕೆ ಮಾತ್ರ ಅವಕಾಶ ನೀಡಬೇಕು. ವಾಣಿಜ್ಯ ಬಾಡಿಗೆ ತಾಯ್ತನವನ್ನು ನಿಷೇಧಿಸಬೇಕು ಎಂದು ಕಾನೂನು ಆಯೋಗ ತನ್ನ 228ನೇ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

            ನಿರ್ಬಂಧಿತ ಅವಕಾಶ: ಕಾನೂನು ಬದ್ಧವಾಗಿ ವಿವಾಹವಾಗಿರುವ ಭಾರತದ ದಂಪತಿ ಕನಿಷ್ಠ 5 ವರ್ಷ ದಾಂಪತ್ಯದ ಬಳಿಕ ಬಾಡಿಗೆ ತಾಯ್ತನವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಲ್ಲೂ ಯಾವ ದಂಪತಿಗೆ ಮಗು ಆಗುವ ಸಾಧ್ಯತೆ ಕಡಿಮೆ ಇದೆಯೋ ಅಂಥವರಿಗೆ ಮಾತ್ರ ಇದನ್ನು ಬಳಸುವ ಅವಕಾಶ. ದಂಪತಿ ಪೈಕಿ ಮಹಿಳೆಗೆ 23-50 ವರ್ಷ, ಪುರುಷನಿಗೆ 26-55 ವರ್ಷದ ವಯೋಮಿತಿ ನಿಗದಿ ಆಗಿದೆ. ಈ ಅಂಶಗಳು ಮಸೂದೆಯಲ್ಲಿವೆ.

           ಮಸೂದೆಯಲ್ಲೇನಿದೆ?: ನ್ಯಾಷನಲ್ ಸರೋಗಸಿ ಬೋರ್ಡ್, ಸ್ಟೇಟ್ ಸರೋಗಸಿ ಬೋರ್ಡ್​ಗಳ ಸ್ಥಾಪನೆ, ಉನ್ನತಾಧಿಕಾರಿಗಳ ನೇಮಕ, ನಿಯಮಗಳ ಚೌಕಟ್ಟು ಇತ್ಯಾದಿ ಅಂಶಗಳು ಮಸೂದೆಯಲ್ಲಿದೆ. 2019ರ ಅಗಸ್ಟ್ 5ರಂದು ಇದು ಲೋಕಸಭೆಯಲ್ಲಿ ಒಮ್ಮೆ ಅಂಗೀಕಾರವಾಗಿತ್ತು. ಆದರೆ ರಾಜ್ಯಸಭೆಯಲ್ಲಿ ತಿದ್ದುಪಡಿ ಅಂಶಗಳು ಸೂಚಿತವಾದ್ದರಿಂದ ಬಾಕಿ ಉಳಿದಿತ್ತು.

          ಮೂರು ಮಸೂದೆ ಮಂಡನೆ: ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಕಲಾಪ ಮತ್ತೆ ಶುರುವಾದಾಗ ದ ನ್ಯಾಷ ನಲ್ ಆಂಟಿ-ಡೋಪಿಂಗ್ ಬಿಲ್ 2021, ದ ವೈಲ್ಡ್ ಲೈಫ್ (ಪ್ರೊಟೆಕ್ಷನ್) ಅಮೆಂಡಮೆಂಟ್ ಬಿಲ್ 2021, ದ ಚಾರ್ಟರ್ಡ್ ಅಕೌಂಟಂಟ್ಸ್, ದ ಕಾಸ್ಟ್ ಆಂಡ್ ವರ್ಕ್ಸ್ ಅಕೌಂಟಂಟ್ಸ್ ಆಂಡ್ ದ ಕಂಪನಿ ಸೆಕ್ರಟರೀಸ್ (ಅಮೆಂಡಮೆಂಟ್) ಬಿಲ್ 2021ಗಳು ಮಂಡನೆ ಆಗಿವೆ. ಇದಕ್ಕೂ ಮುನ್ನ ವಿವಿಧ ವರದಿಗಳು ಮತ್ತು ಸಮಾಲೋಚನಾ ಪತ್ರಗಳು ಮಂಡನೆ ಆಗಿದ್ದವು.

            ಆಂಟಿ ಡೋಪಿಂಗ್ ಮಸೂದೆ: ನ್ಯಾಷನಲ್ ಆಂಟಿ ಡೋಪಿಂಗ್ ಏಜೆನ್ಸಿ (ಎನ್​ಎಡಿಎ) ಮತ್ತು ನ್ಯಾಷನಲ್ ಡೋಪ್ ಟೆಸ್ಟಿಂಗ್ ಲ್ಯಾಬೊರೇಟರಿ (ಎನ್​ಡಿಟಿಎಲ್)ಗಳಿಗೆ ಶಾಸಕಬದ್ಧ ಚೌಕಟ್ಟಿನಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ನಿಡುವ ಆಂಟಿ ಡೋಪಿಂಗ್ ಮಸೂದೆಯನ್ನು ಲೋಕಸಭೆಯಲ್ಲಿ ಸರ್ಕಾರ ಮಂಡಿಸಿದೆ. ಇದು ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಡ್ರಗ್ಸ್ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಮಹತ್ವದ್ದು ಎನಿಸಿಕೊಂಡಿದೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ಮಸೂದೆಯನ್ನು ವಿಪಕ್ಷ ಸದಸ್ಯರ ಪ್ರತಿಭಟನೆಯ ನಡುವೆ ಮಂಡಿಸಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries