HEALTH TIPS

ದೇಶದಾದ್ಯಂತದ ಪ್ರಯಾಣ ಸೂಚ್ಯಂಕ: ವಿಶ್ವದ ಅಗ್ರ 10 ದೇಶಗಳಲ್ಲಿ ಸ್ಥಾನ ಪಡೆದ ಭಾರತ

              ದೇಶದಾದ್ಯಂತದ ಪ್ರಯಾಣಕ್ಕೆ ಅತ್ಯುತ್ತಮ ಎನಿಸಿರುವ ವಿಶ್ವದ ಅಗ್ರ 10 ದೇಶಗಳ ಸೂಚ್ಯಾಂಕ ಪಟ್ಟಿಯಲ್ಲಿ ಭಾರತವೂ ಸ್ಥಾನಪಡೆದಿದೆ. ಜಗತ್ತಿನ 118 ದೇಶಗಳನ್ನು ಈ ಸೂಚ್ಯಾಂಕ ಸಮೀಕ್ಷೆಯಲ್ಲಿ ಅಧ್ಯಯನ ನಡೆಸಲಾಗಿದೆ ಎಂದು ಪ್ರವಾಸಿಗರಿಗೆ ವಸತಿ ಸೌಕರ್ಯ ಕಲ್ಪಿಸುವ ಸಂಸ್ಥೆ 'ಹಾಲಿಡು' ಹೇಳಿದೆ.

            ರಸ್ತೆ ಮೂಲಕ ಪ್ರವಾಸ ನಡೆಸಲು ಯೋಜನೆ ಹಾಕಿಕೊಂಡವರಿಗೆ ಅಗತ್ಯವಾಗಿರುವ ಹಲವು ಪ್ರಮುಖ ಅಂಶಗಳನ್ನು ಪರಿಗಣಿಸಿ ಈ ಸೂಚ್ಯಾಂಕ ಸಿದ್ಧಪಡಿಸಲಾಗಿದೆ. ಯುನೆಸ್ಕೋ ವಿಶ್ವ ಪಾರಂಪರಿಕ ತಾಣ, ವನ್ಯಜೀವಿಗಳು, ಪ್ರಾಕೃತಿಕ ಸವಲತ್ತುಗಳು, ಭೂದೃಶ್ಯಗಳ ವ್ಯಾಪ್ತಿ, ಕಾಸ್ಮೊಪೊಲಿಟನ್ ನಗರಗಳ ಸಂಖ್ಯೆ, ರಸ್ತೆಗಳ ಗುಣಮಟ್ಟ, ಇಂಧನ ದರ, ಪ್ರವಾಸಿಗರ ವಸತಿ ವ್ಯವಸ್ಥೆಯ ಸರಾಸರಿ ಬಾಡಿಗೆ ದರ ಇತ್ಯಾದಿಗಳನ್ನು ಆಧರಿಸಿ ಈ ಸೂಚ್ಯಾಂಕ ತಯಾರಿಸಲಾಗಿದೆ.

ಈ ಸೂಚ್ಯಾಂಕ ಪಟ್ಟಿಯಲ್ಲಿ ಅಮೆರಿಕಕ್ಕೆ ಅಗ್ರಸ್ಥಾನವಿದ್ದರೆ, ಮೆಕ್ಸಿಕೊ, ಕೆನಡಾ ಮತ್ತು ಮಲೇಶ್ಯಾ ಆ ಬಳಿಕದ ಸ್ಥಾನದಲ್ಲಿವೆ. ಭಾರತ 10ನೇ ಸ್ಥಾನದಲ್ಲಿದ್ದು ಸಾಂಪ್ರದಾಯಿಕವಾಗಿ ಜನಪ್ರಿಯ ಪ್ರವಾಸೀ ತಾಣ ಎನಿಸಿರುವ ಫ್ರಾನ್ಸ್, ಜರ್ಮನಿ, ಜಪಾನ್, ಟರ್ಕಿ ಮತ್ತು ಸ್ಪೇನ್‌ಗಿಂತ ಮುಂದಿದೆ. ದೇಶದಲ್ಲಿರುವ ಆಕರ್ಷಣೀಯ ತಾಣಗಳು, ಭೂಗಾತ್ರ, ಕಶೇರುಕ ಜಾತಿಗಳ ಸಂಖ್ಯೆ, ಬೀಚ್, ಪಾರ್ಕ್ ಇತ್ಯಾದಿ ಪ್ರಾಕೃತಿಕ ಸವಲತ್ತುಗಳು, ಮಳೆಕಾಡುಗಳು, ಅರಣ್ಯಗಳು, ಬೆಟ್ಟಗುಡ್ಡಗಳು, ಮರುಭೂಮಿಗಳು, ಹಿಮನದಿಗಳು, ಕಾಡುಗಳು ಹಾಗೂ ಅತ್ಯುತ್ತಮ ನಗರಗಳ ಸಂಖ್ಯೆ- ಇವನ್ನು ಆಧರಿಸಿ ಸೂಚ್ಯಾಂಕ ತಯಾರಿಸಲಾಗಿದೆ.

ಭಾರತದಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪ್ರೇಕ್ಷಣೀಯ ಸ್ಥಳದ ಪಟ್ಟಿಯಲ್ಲಿರುವ ಸುಮಾರು 40 ಸ್ಥಳಗಳಿವೆ. ಜತೆಗೆ ಸುಮಾರು 1,900 ವಿಧದ ತಳಿಗಳ ಜೀವಿಗಳಿವೆ ಮತ್ತು ವಿಶ್ವದ 100 ಅತ್ಯುತ್ತಮ ಮೆಟ್ರೋ ನಗರಗಳ ಪಟ್ಟಿಯಲ್ಲಿರುವ ಕನಿಷ್ಟ 2 ನಗರಗಳು( ಮುಂಬೈ ಮತ್ತು ದಿಲ್ಲಿ) ಇವೆ. ಜತೆಗೆ ಭಾರತದ ರಸ್ತೆಗಳ ಗುಣಮಟ್ಟ, ಇಂಧನ ದರ ಹಾಗೂ ದೇಶದಾದ್ಯಂತ ಪ್ರವಾಸೀ ತಾಣಗಳಲ್ಲಿ ವಾಸ್ತವ್ಯಕ್ಕೆ ಸರಾಸರಿ ವಾರದ ಬಾಡಿಗೆ ದರ 13,000 ರೂ.ಗಿಂತ ಕಡಿಮೆಯಾಗಿರುವುದು ಭಾರತ ವಿಶ್ವದ ಅಗ್ರ 10 ದೇಶಗಳ ಸಾಲಿನಲ್ಲಿ ಕಾಣಿಸಿಕೊಳ್ಳಲು ಕಾರಣವಾಗಿದೆ ಎಂದು ವರದಿ ಹೇಳಿದೆ.

        ಕೊರೋನೋತ್ತರ ಅವಧಿಯಲ್ಲಿ ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಮರುಸ್ಥಾಪಿಸಲು ಮತ್ತು ಮಾರ್ಕೆಟಿಂಗ್ ಅಭಿಯಾನಕ್ಕೆ ಈ ಸೂಚ್ಯಾಂಕವನ್ನು ಮೂಲಾಧಾರವನ್ನಾಗಿ ಭಾರತ ಬಳಸಿಕೊಳ್ಳಬೇಕು ಎಂದು ಭಾರತದ ಪ್ರವಾಸೋದ್ಯಮ, ಪ್ರಯಾಣ ಮತ್ತು ಆತಿಥ್ಯ ಉದ್ಯಮ ಕ್ಷೇತ್ರದ ಪ್ರತಿನಿಧಿಗಳ ಒಕ್ಕೂಟ 'ಫೈದ್' ಸಲಹೆ ನೀಡಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries