ಪಟ್ನಾ: ಬಿಹಾರದಲ್ಲಿ ವೃದ್ಧನೋರ್ವ 11 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ವಿಚಿತ್ರ ಘಟನೆ ವರದಿಯಾಗಿದೆ. ಆದರೆ 12ನೇ ಬಾರಿಗೆ ಲಸಿಕೆ ಹಾಕಿಸಿಕೊಳ್ಳಲು ತೆರಳಿದಾಗ ತೆರಳಿದಾಗ ಸಿಬ್ಬಂದಿ ಅವರನ್ನು ಗುರುತಿಸಿದ್ದರು.
0
samarasasudhi
ಜನವರಿ 06, 2022
ಪಟ್ನಾ: ಬಿಹಾರದಲ್ಲಿ ವೃದ್ಧನೋರ್ವ 11 ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡಿರುವ ವಿಚಿತ್ರ ಘಟನೆ ವರದಿಯಾಗಿದೆ. ಆದರೆ 12ನೇ ಬಾರಿಗೆ ಲಸಿಕೆ ಹಾಕಿಸಿಕೊಳ್ಳಲು ತೆರಳಿದಾಗ ತೆರಳಿದಾಗ ಸಿಬ್ಬಂದಿ ಅವರನ್ನು ಗುರುತಿಸಿದ್ದರು.
'ಇಂಡಿಯಾ ಟುಡೇ' ವರದಿ ಪ್ರಕಾರ ಮಾದೇಪುರ ಜಿಲ್ಲೆಯ ಉರೈ ಗ್ರಾಮದ ನಿವಾಸಿ 84 ವರ್ಷದ ಬ್ರಹ್ಮದೇವ್ ಮಂಡಲ್ ಎಂಬವರೇ ಇಂತಹದೊಂದು ಸಾಹಸಕ್ಕೆ ಮುಂದಾಗಿದ್ದರು.
'ನಾನು ಲಸಿಕೆಯಿಂದ ಸಾಕಷ್ಟು ಪ್ರಯೋಜನ ಪಡೆದಿದ್ದೇನೆ. ಅದಕ್ಕಾಗಿಯೇ ಪದೇ ಪದೇ ಲಸಿಕೆ ಹಾಕಿಸಿಕೊಳ್ಳುತ್ತಿದ್ದೇನೆ. ಸರ್ಕಾರವು ಅತ್ಯುತ್ತಮ ಕೆಲಸವನ್ನೇ ಮಾಡಿದೆ' ಎಂದು ಮಂಡಲ್ ಪ್ರತಿಕ್ರಿಯಿಸಿದ್ದಾರೆ.
ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಮಂಡಲ್, ಲಸಿಕೆ ಹಾಕಿಸಿಕೊಳ್ಳಲು ಎಂಟು ಬಾರಿ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಮತ್ತು ಮೂರು ಬಾರಿ ವೋಟರ್ ಐಡಿ ಹಾಗೂ ಪತ್ನಿ ಮೊಬೈಲ್ ನಂಬರ್ ಬಳಸಿದ್ದಾರೆ ಎಂದು ವರದಿ ತಿಳಿಸಿದೆ.
ಇಷ್ಟೊಂದು ಸಲ ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹೇಗೆ ಸಾಧ್ಯವಾಯಿತು? ಮತ್ತು ಎಲ್ಲಿ ಲೋಪ ಸಂಭವಿಸಿತು ಎಂಬುದರ ಬಗ್ಗೆ ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲೆಯ ಸಿವಿಲ್ ಸರ್ಜನ್ ಅಮರೇಂದ್ರ ಪ್ರತಾಪ್ ಶಾಹಿ ತಿಳಿಸಿದ್ದಾರೆ.