HEALTH TIPS

126 ವರ್ಷದ ಅಪರೂಪದ 'ಬಾಬಾ'ಗೆ ಒಲಿದು ಬಂದ ಪದ್ಮಶ್ರೀ: ಇವರ ದಿನಚರಿ ಹೀಗಿದೆ ನೋಡಿ.

               ವಾರಣಾಸಿ : ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಪದ್ಮ' ಪ್ರಕಟವಾಗಿದೆ. ಈ ಬಾರಿಯೂ ಕಳೆದ ಕೆಲ ವರ್ಷಗಳಂತೆ ಯಾರ ಕಣ್ಣಿಗೂ ಕಾಣದ, ಯಾವುದೇ ಮೂಲೆಯಲ್ಲಿ ತಮ್ಮದೇ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸುತ್ತಿರುವ ಅಪರೂಪದ ಗಣ್ಯರಿಗೆ ಈ ಪ್ರಶಸ್ತಿ ದೊರೆತಿದೆ.

          ಇವರ ಪೈಕಿ ಒಬ್ಬರು ವಾರಣಾಸಿಯ ಸ್ವಾಮಿ ಶಿವಾನಂದ ಬಾಬಾ. ಶಿವನ ಅಪ್ಪಟ ಆರಾಧಕರಾಗಿರುವ ಶಿವಾನಂದ ಬಾಬಾರ ವಯಸ್ಸು ಬರೋಬ್ಬರಿ 126 ವರ್ಷ! ಇವರಿಗೆ ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ. ಇವರ ಜೀವನವೇ ವಿಶಿಷ್ಟವಾದುದು. ಸಮೀಪದ ಒಂದಿಷ್ಟು ಜನರಿಗೆ ಪರಿಚಯವಾಗಿ ಸಮಾಜದ ಮುಖ್ಯ ವಾಹಿನಿಯಿಂದ ದೂರವೇ ಉಳಿದಿದ್ದ ಈ ಬಾಬಾರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದಿದ್ದು, ಅವರ ಬಗ್ಗೆ ಒಂದಿಷ್ಟು ಕುತೂಹಲದ ಮಾಹಿತಿ ಇಲ್ಲಿದೆ.

           ಉತ್ತರ ಪ್ರದೇಶದ ಕಬೀರ್​​​ ನಗರದಲ್ಲಿರುವ ಚಿಕ್ಕ ಕೋಣೆವೊಂದರಲ್ಲಿ ಅವರ ವಾಸ. 1896ರ ಆಗಸ್ಟ್‌ 8ರಂದು ಬಾಂಗ್ಲಾದೇಶದ ಸಿಲ್ಹೆಟ್​​ ಜಿಲ್ಲೆಯ ಹರಿಪುರ ಗ್ರಾಮದಲ್ಲಿ ಜನಿಸಿರುವ ಇವರು, ಬ್ರಹ್ಮಚಾರಿ. ದಿನವೂ ಬೆಳಗ್ಗೆ 3 ಗಂಟೆಗೆ ಏಳುತ್ತಾರೆ. ಬಾಬಾರ ಆರೋಗ್ಯದ ಗುಟ್ಟು ಕೂಡ ಇದರ ಜತೆಗೆ ಯೋಗ, ಪ್ರಾಣಾಯಾಮ ಮತ್ತು ಮನೆಯಲ್ಲಿ ತಯಾರಿಸುವ ಔಷಧಿಗಳ ಸೇವನೆ.

           ಹಾಲು, ಸಕ್ಕರೆ ಮತ್ತು ಎಣ್ಣೆಯಿಂದ ತಯಾರಿಸುವ ಪದಾರ್ಥ ನಿಷಿದ್ಧ. ದಿನವೂ ಬೇಯಿಸಿದ ತರಕಾರಿ ಸೇವಿಸುತ್ತಾರೆ. ಬೆಳಗ್ಗೆ 3 ಗಂಟೆಗೆ ಎದ್ದ ನಂತರ ನಿತ್ಯಕರ್ಮ ಮುಗಿಸಿ ಅವರು ಮಾಡುವ ಮೊದಲ ಕೆಲಸ ಶಿವನ ಮಂತ್ರ ಪಠಣೆ. ಬೆಳಗ್ಗೆ 5ರಿಂದ 6 ಗಂಟೆಯವರೆಗೆ ಯೋಗಾಸನ ಮಾಡಿದ ಮೇಲೆ 6:30ಕ್ಕೆ ಒಂದು ಲೋಟ ನೀರು ಸೇವನೆ ಮಾಡ್ತಾರೆ. ಇದಾದ ಬಳಿಕ ಶ್ರೀ ಕೃಷ್ಣನ ಮಂತ್ರ ಪಠಣ ಮಾಡುತ್ತಾರೆ.

          ಬಾಬಾರನ್ನು ನೋಡಲು ಯಾರೇ ಬರುವುದಿದ್ದರೂ ಬರಿಗೈಯಲ್ಲಿ ಬರಬೇಕು. ಆದರೆ, ಊಟ ಮಾಡದೆ ಆಶ್ರಮದಿಂದ ಯಾರೂ ವಾಪಸಾಗುವಂತಿಲ್ಲ. ವಿಶೇಷವೆಂದರೆ ಬಂದವರಿಗೆಲ್ಲರಿಗೂ 126 ವರ್ಷದ ಬಾಬಾ ಅವರೇ ತಮ್ಮ ಕೈಯಿಂದಲೇ ಊಟ ತಯಾರಿಸಿ ಉಣಬಡಿಸುತ್ತಾರೆ. ಯೋಗದಿಂದ ಎಲ್ಲ ಕಾಯಿಲೆಗಳಿಂದಲೂ ದೂರ ಇರಬಹುದು ಎನ್ನುವುದು ಇವರ ಮಾತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries