HEALTH TIPS

15-18 ವರ್ಷದೊಳಗಿನ 2 ಕೋಟಿ ಮಕ್ಕಳಿಗೆ ಕೋವಿಡ್-19 ಮೊದಲ ಡೋಸ್ ಲಸಿಕೆ ನೀಡಿಕೆ: ಮಾಂಡವೀಯಾ

          ನವದೆಹಲಿ: ದೇಶದಲ್ಲಿನ 15 ರಿಂದ 18 ವರ್ಷದೊಳಗಿನ ಸುಮಾರು ಎರಡು ಕೋಟಿ ಮಕ್ಕಳಿಗೆ ಕೋವಿಡ್-19 ಮೊದಲ ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಶನಿವಾರ ಹೇಳಿದ್ದಾರೆ.


           ಈ ಗುಂಪಿನ ಮಕ್ಕಳಿಗೆ ಲಸಿಕೆ ನೀಡಿಕೆ ಅಭಿಯಾನ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಇನ್ನೂ ವಾರ ಕಳೆದಿಲ್ಲ, ಈಗಾಗಲೇ 15ರಿಂದ 18 ವರ್ಷದೊಳಗಿನ ಸುಮಾರು 2 ಕೋಟಿ ಮಕ್ಕಳು ಲಸಿಕೆ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ. 

           ನಿನ್ನೆ ದಿನ 150 ಕೋಟಿಗೂ ಅಧಿಕ  ಡೋಸ್ ಲಸಿಕೆ ನೀಡಿದ ಸಾಧನೆಗೆ ದೇಶ ಪಾತ್ರವಾಗಿತ್ತು. ಇಲ್ಲಿಯವರೆಗೂ ಶೇಕಡಾ 90 ರಷ್ಟು ವಯಸ್ಕರು ಕೋವಿಡ್-19 ಲಸಿಕೆ ಪಡೆದಿದ್ದಾರೆ. ಕಳೆದ 24 ಗಂಟೆಗಳಲ್ಲಿ ಶೇ.90 ಲಕ್ಷ ಕ್ಕೂ ಅಧಿಕ ಡೋಸ್ ಲಸಿಕೆ ನೀಡಲಾಗಿದ್ದು, ಶನಿವಾರ ಬೆಳಗ್ಗೆ 7 ಗಂಟೆಯವರೆಗೂ 150.61 ಕೋಟಿ ಲಸಿಕೆ ಹಾಕಲಾಗಿದೆ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries