ಲಡಾಖ್‍ನಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಕಳೆದ ವರ್ಷ ಉಂಟಾದ ಉದ್ವಿಗ್ನತೆಯ ವಾತಾವರಣದ ನಂತರ ಭಾರತ ಸರಕಾರ ಹಲವಾರು ಚೀನೀ ಆಯಪ್‍ಗಳಿಗೆ ನಿಷೇಧ ಹೇರಿದೆ. ಆದರೆ ಚೀನಾದಿಂದ ಆಮದು ಮಾಡುವ ವಸ್ತುಗಳ ಮೇಲೆ ಯಾವುದೇ ನಿಯಂತ್ರಣ ಹೇರುವ ಗೋಜಿಗೆ ಹೋಗಿಲ್ಲ.
0
samarasasudhi
ಜನವರಿ 26, 2022
ಲಡಾಖ್‍ನಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಕಳೆದ ವರ್ಷ ಉಂಟಾದ ಉದ್ವಿಗ್ನತೆಯ ವಾತಾವರಣದ ನಂತರ ಭಾರತ ಸರಕಾರ ಹಲವಾರು ಚೀನೀ ಆಯಪ್‍ಗಳಿಗೆ ನಿಷೇಧ ಹೇರಿದೆ. ಆದರೆ ಚೀನಾದಿಂದ ಆಮದು ಮಾಡುವ ವಸ್ತುಗಳ ಮೇಲೆ ಯಾವುದೇ ನಿಯಂತ್ರಣ ಹೇರುವ ಗೋಜಿಗೆ ಹೋಗಿಲ್ಲ.
ಚೀನಾದ ಜನರಲ್ ಅಡ್ಮಿನಿಸ್ಟ್ರೇಶನ್ ಆಫ್ ಕಸ್ಟಮ್ಸ್ ಅಂಕಿಅಂಶಗಳ ಪ್ರಕಾರ ಚೀನಾ 2021ರಲ್ಲಿ ಭಾರತಕ್ಕೆ 97.52 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತುಗೊಳಿಸಿದ್ದರೆ, ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರ 125.66 ಬಿಲಿಯನ್ ಡಾಲರ್ ಆಗಿದೆ.
ಭಾರತಕ್ಕೆ ರಫ್ತುಗೊಳಿಸಲಾಗಿರುವ ಉತ್ಪನ್ನಗಳಲ್ಲಿ ಗರಿಷ್ಠ ಉತ್ಪನ್ನಗಳು ಇಲೆಕ್ಟ್ರಿಕ್ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನಗಳು, ಸ್ಮಾರ್ಟ್‍ಫೋನ್‍ಗಳು, ಟೆಲಿಕಾಂ ಉತ್ಪನ್ನಗಳು, ಆಟೋ ಬಿಡಿಭಾಗಗಳು, ಸೇರಿವೆ.
ಭಾರತದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಮಾಹಿತಿ ಪ್ರಕಾರ 2021ರ ಮೊದಲ ಎಂಟು ತಿಂಗಳುಗಳಲ್ಲಿ ಚೀನಾದಿಂದ ಆಮದು ಮಾಡಲಾದ ಉತ್ಪನ್ನಗಳಲ್ಲಿ ಕಚ್ಛಾ ಪೆಟ್ರೋಲಿಯಂ, ಪೆಟ್ರೋಲಿಯಂ ಉತ್ಪನ್ನಗಳು, ಮುತ್ತುಗಳು, ಬೆಲೆಬಾಳುವ ಹರಳುಗಳು, ಕಲ್ಲಿದ್ದಲು, ಸೇರಿವೆ. ಇವುಗಳ ಒಟ್ಟು ಮೊತ್ತ 60 ಬಿಲಿಯನ್ ಡಾಲರ್ ಆಗಿದೆ.
ಎರಡು ದೇಶಗಳ ನಡುವೆ ಉದ್ವಿಗ್ನತೆಯ ಹೊರತಾಗಿಯೂ ಭಾರತಕ್ಕೆ ಚೀನೀ ಉತ್ಪನ್ನಗಳ ಅವಲಂಬನೆಯನ್ನು ಕಡಿಮೆಗೊಳಿಸಲು ಸಾಧ್ಯವಾಗುತ್ತಿಲ್ಲ ಎಂಬುದಕ್ಕೆ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟಿನಲ್ಲಿ ಏರಿಕೆಯೇ ಸಾಕ್ಷಿ ಎಂದು ಚೀನಾದ ಸರಕಾರಿ ಸುದ್ದಿ ಸಂಸ್ಥೆ ಗ್ಲೋಬಲ್ ಟೈಮ್ಸ್ ಹೇಳಿದೆ.
ಭಾರತದಿಂದ ಚೀನಾಗೆ ರಫ್ತು ಕೂಡ ಏರಿಕೆಯಾಗಿದೆ. 2021ರಲ್ಲಿ ಈ ಮೊತ್ತ 24 ಬಿಲಿಯನ್ ಡಾಲರ್ ಆಗಿದ್ದರೆ 2020ರಲ್ಲಿ ಈ ಮೊತ್ತ 19 ಬಿಲಿಯನ್ ಡಾಲರ್ ಆಗಿತ್ತು.