HEALTH TIPS

2022-23ರಲ್ಲಿ ಶೇ. 8-8.5 ರಷ್ಟು ಜೆಡಿಪಿ ಬೆಳವಣಿಗೆ ನಿರೀಕ್ಷೆ: ಆರ್ಥಿಕ ಸಮೀಕ್ಷೆ ಅಂದಾಜು

        ನವದೆಹಲಿ: ಪ್ರಸ್ತುತ ಆರ್ಥಿಕ ವರ್ಷದಲ್ಲಿ ದೇಶದ ಜೆಡಿಪಿ ಶೇ. 9.2 ರಷ್ಟು ಬೆಳವಣಿಗೆಯಾಗಿದ್ದರೂ 2022-23 ರಲ್ಲಿ ನೈಜ ಜೆಡಿಪಿ ಬೆಳವಣಿಗೆ ದರ ಶೇ. 8 ರಿಂದ 8-5 ರಷ್ಟು ಇರಲಿದೆ ಎಂದು ಆರ್ಥಿಕ ಸಮೀಕ್ಷೆ ವರದಿ ಅಂದಾಜಿಸಿದೆ.

        ದೇಶಾದ್ಯಂತ ವ್ಯಾಪಕ ರೀತಿಯಲ್ಲಿ ಕೋವಿಡ್ ಲಸಿಕೆ ನೀಡಿಕೆ, ನಿಯಮಗಳ ಸರಾಗಗೊಳಿಸುವಿಕೆ, ದೃಢವಾದ ರಫ್ತು ಬೆಳವಣಿಗೆ ಮತ್ತು ಬಂಡವಾಳದ ವೆಚ್ಚವನ್ನು ಹೆಚ್ಚಿಸಲು ಹಣಕಾಸಿನ ಸ್ಥಳಾವಕಾಶದ ಲಭ್ಯತೆ 2022-23ರಲ್ಲಿ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡಲಿವೆ. 2022-23ರ ಬೆಳವಣಿಗೆಯ ದೃಷ್ಟಿಕೋನದಲ್ಲಿ ಆರ್ಥಿಕತೆಯ ಪುನರುಜ್ಜೀವನಕ್ಕೆ ಬೆಂಬಲವನ್ನು ಒದಗಿಸಲು ಖಾಸಗಿ ವಲಯದ ಹೂಡಿಕೆ ಹೆಚ್ಚಿಸಲು  ಮುಂಬರುವ ವರ್ಷವು ಆಯ್ಕೆಗೆ ಸಿದ್ಧವಾಗಿದೆ ಎಂದು ಆರ್ಥಿಕ ಸಮೀಕ್ಷೆ ವರದಿಯು  ಹೇಳಿದೆ.

        ಒಂದು ಎಚ್ಚರಿಕೆಯೊಂದಿಗೆ ಈ ನಿರೀಕ್ಷೆ ಮಾಡಲಾಗಿದೆ. ಮುಂದೆ ಸಾಂಕ್ರಾಮಿಕ ಸಬಂಧಿತ ಆರ್ಥಿಕ ಹೊಡೆತಗಳು ಇರುವುದಿಲ್ಲ, ಮಾನ್ಸೂನ್ ಸಾಮಾನ್ಯವಾಗಿರುತ್ತದೆ, ಪ್ರಮುಖ ಕೇಂದ್ರೀಯ ಬ್ಯಾಂಕುಗಳಿಂದ ಜಾಗತಿಕ ದ್ರವ್ಯತೆ ಹಿಂತೆಗೆದುಕೊಳ್ಳುವಿಕೆಯು ವಿಶಾಲವಾಗಿ ಕ್ರಮಬದ್ಧವಾಗಿರುತ್ತದೆ, ತೈಲ ಬೆಲೆಗಳು 70 -75 ಬಿಲಿಯನ್ ಅಮೆರಿಕನ್ ಡಾಲರ್ ವ್ಯಾಪ್ತಿಯಲ್ಲಿರುತ್ತದೆ. ಜಾಗತಿಕ ಪೂರೈಕೆ ಸರಪಳಿ ಅಡಚಣೆಗಳು ವರ್ಷದ ಅವಧಿಯಲ್ಲಿ ಸ್ಥಿರವಾಗಿ ಸರಾಗವಾಗುತ್ತವೆ ಎಂದು ವರದಿ ಹೇಳುತ್ತದೆ.

               2022-23 ರಲ್ಲಿ ಭಾರತದಲ್ಲಿನ ಆರ್ಥಿಕ ಬೆಳವಣಿಗೆ ಶೇ. 8.7 ರಿಂದ ಶೇ. 7.5 ರಷ್ಟು ಇರಲಿದೆ ಎಂದು ವಿಶ್ವ ಬ್ಯಾಂಕ್ ಮತ್ತು ಏಷಿಯನ್ ಅಭಿವೃದ್ಧಿ ಬ್ಯಾಂಕ್ ಇತ್ತೀಚಿಗೆ ಅಂದಾಜಿಸಿತ್ತು.  ಐಎಂಎಫ್  ನ ಇತ್ತೀಚಿನ ವಿಶ್ವ ಆರ್ಥಿಕ ನೋಟದ ಪ್ರಕಾರ 2022-23 ಮತ್ತು 2023-24ರಲ್ಲಿ ಭಾರತದಲ್ಲಿನ ಬೆಳವಣಿಗೆ ದರ ಕ್ರಮವಾಗಿ ಶೇ. 9 ಮತ್ತು ಶೇ.7. 1 ಎಂದು ಹೇಳಲಾಗಿತ್ತು. 

                         ಪ್ರಮುಖ ಅಂಶಗಳು: 

       ದೇಶದಲ್ಲಿ ಪ್ರಮುಖ ಜಿಡಿಪಿ ಬೆಳವಣಿಗೆ ದರ ಶೇ. 8-85

ಉತ್ತಮ ಆರ್ಥಿಕತೆಯೊಂದಿಗೆ 2022-23ರಲ್ಲಿ ಸವಾಲುಗಳನ್ನು ಎದುರಿಸಬಹುದು

ಖಾಸಗಿ ಕ್ಷೇತ್ರದ ಹೂಡಿಕೆಯೊಂದಿಗೆ ಆರ್ಥಿಕತೆ ಪುನರುಜ್ಜೀವನಕ್ಕೆ ಬೆಂಬಲ


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries