ಮಂಜೇಶ್ವರ : ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಅಕಾಡೆಮಿಯು, ಕನ್ನಡ ವಿಭಾಗ ಭಾಷಾ ಅಧ್ಯಯನ ಕೇಂದ್ರ ಕಣ್ಣೂರು ವಿಶ್ವವಿದ್ಯಾನಿಲಯ ಕಾಸರಗೋಡು, ಯಕ್ಷಗಾನ ಸಂಶೋಧನಾ ಕೇಂದ್ರ ಸರಕಾರಿ ಕಾಲೇಜು ಕಾಸರಗೋಡು ಇವರ ಸಹಯೋಗದೊಂದಿಗೆ 2020ರಲ್ಲಿ ಕಾಸರಗೋಡಿನಲ್ಲಿ ನಡೆಸಿದ ‘ಪಾರ್ತಿಸುಬ್ಬ ಬದುಕು ಬರಹ’ ಎರಡುದಿನಗಳ ವಿಚಾರ ಸಂಕಿರಣದಲ್ಲಿ ಮಂಡಿಸಿದ ವಿದ್ವಾಂಸರ ಪ್ರಬಂಧ ಸಂಕಲನ ‘ಪಾರ್ತಿ ಸುಬ್ಬ ಬದುಕು ಬರಹ’, ಸಂಪಾದಕರು ಎಂ ಎ ಹೆಗಡೆ ಹಾಗೂ ಯೋಗೀಶ ರಾವ್ ಚಿಗುರುಪಾದೆ, ಡಾ.ರಮಾನಂದ ಬನಾರಿಯವರ ‘ಯಕ್ಷಗಾನ ಸಂವಾದ ಭೂಮಿಕೆ’ , ತುಳು ಯಕ್ಷಗಾನ ಪ್ರಸಂಗ ಸಂಪುಟ ಕದ್ರಿ ನವನೀತ ಶೆಟ್ಟಿ ಸಂಪಾದಿತ 7 ಪ್ರಸಂಗಗಳು ಜನವರಿ 22ನೇ ಶನಿವಾರ ಬೆಳಿಗ್ಗೆ 10.30ಕ್ಕೆ ಗೋವಿಂದಾಸ ಕಾಲೇಜು ಸುರತ್ಕಲ್ ನಲ್ಲಿ ಬಿಡುಗಡೆಗೊಳ್ಳಲಿದೆ.
ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ ಎಲ್.ಹೆಗಡೆ ಕುಮಟಾ ವಹಿಸಲಿದ್ದಾರೆ. ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿಗಳಾದ ಪೆÇ್ರ.ಪಿ ಎಸ್ ಎಡಪಡಿತ್ತಾಯ ಕೃತಿ ಬಿಡುಗಡೆ ಗೊಳಿಸಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಾ.ವೈ.ಭರತ್ ಶೆಟ್ಟಿ, ಗೋವಿಂದಾಸ್ ಕಾಲೇಜು ಪ್ರಾಂಶುಪಾಲ ಪೆÇ್ರ.ಕೃಷ್ಣ ಮೂರ್ತಿ ಪಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಪ್ರಸಂಗಕರ್ತ ಪೆÇಳಲಿ ನಿತ್ಯಾನಂದ ಕಾರಂತ, ಅರ್ಥಧಾರಿ ಸದಾಶಿವ ಆಳ್ವ ತಲಪಾಡಿ, ಉಪನ್ಯಾಸಕಿ ಡಾ.ಸುಧಾರಾಣಿ ಕೃತಿ ಪರಿಚಯ ಗೈಯಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ಜಿ ಎಸ್ ಶಿವರುದ್ರಪ್ಪ, ಕಾರ್ಯಕ್ರಮದ ಸದಸ್ಯ ಸಂಚಾಲಕರಾದ ನವನೀತ ಶೆಟ್ಟಿ ಕದ್ರಿ, ಯೋಗೀಶ ರಾವ್ ಚಿಗುರುಪಾದೆ ಹಾಗೂ ಅಕಾಡೆಮಿ ಸದಸ್ಯರು ಉಪಸ್ಥಿತರಿರುವರು.

