HEALTH TIPS

ಭಾರತೀಯ ಪಾಸ್‌ಪೋರ್ಟ್‌ಗೆ ಇನ್ನಷ್ಟು ಬಲ: 60 ದೇಶಗಳಿಗೆ ವೀಸಾ ಇಲ್ಲದೆ ಪ್ರಯಾಣಿಸಿ

            2022 ರಲ್ಲಿ ವಿಶ್ವದ ಅತ್ಯಂತ ಪ್ರಬಲ ಪಾಸ್‌ಪೋಟ್‌ಗಳ ಪೈಕಿ ಭಾರತದ ಶ್ರೇಯಾಂಕವು ಏಳು ಸ್ಥಾನಗಳಿಗೆ ಸುಧಾರಿಸಿ 83 ನೇ ಸ್ಥಾನಕ್ಕೆ ತಲುಪಿದೆ. ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಈಗ ವೀಸಾ ಇಲ್ಲದೆ ಪ್ರಪಂಚದ 60 ದೇಶಗಳಿಗೆ ಭೇಟಿ ನೀಡಬಹುದಾಗಿದೆ. ಭಾರತವು 2022 ರಲ್ಲಿ ತನ್ನ ಪಾಸ್‌ಪೋರ್ಟ್ ಬಲವನ್ನು ಸುಧಾರಿಸಿಕೊಂಡಿದ್ದು, ಕಳೆದ ವರ್ಷದ 90 ನೇ ಸ್ಥಾನದಿಂದ ಏಳು ಸ್ಥಾನಗಳನ್ನು ಮೇಲೇರಿ ಈಗ 83 ನೇ ಸ್ಥಾನಕ್ಕೆ ತಲುಪಿದೆ. ಈಗ ಪೂರ್ವ ವೀಸಾ ಅಗತ್ಯವಿಲ್ಲದ 60 ದೇಶಗಳಿಗೆ ಭಾರತೀಯರು ಪ್ರಯಾಣ ಮಾಡಬಹುದಾಗಿದೆ.

             ಈ ಹಿಂದೆ 2021 ರಲ್ಲಿ 58 ದೇಶಗಳಿಗೆ ವೀಸಾ ಮುಕ್ತ ಪ್ರಯಾಣವನ್ನು ಮಾಡಲು ಅವಕಾಶವಿತ್ತು. ಆದರೆ ಈ ಪಟ್ಟಿಗೆ ಈಗ ಮತ್ತೆರಡು ರಾಷ್ಟ್ರಗಳು ಸೇರ್ಪಡೆ ಆಗಿದ್ದು, ಈಗ ಭಾರತೀಯ ಪಾಸ್‌ಪೋರ್ಟ್ ಮೂಲಕ ವೀಸಾ ಪಡೆಯದೇ 60 ದೇಶಗಳಿಗೆ ಪ್ರಯಾಣ ಮಾಡಬಹುದಾಗಿದೆ. ಈ ಹಿಂದಿನ ಪಟ್ಟಿಗೆ ಹೊಸದಾಗಿ ಓಮನ್ ಮತ್ತು ಅರ್ಮೇನಿಯಾ ಸೇರ್ಪಡೆ ಆಗಿದೆ. ವೀಸಾ-ಮುಕ್ತ ಪ್ರವೇಶದ ವಿಷಯದಲ್ಲಿ ಟರ್ಕಿ ಉತ್ತಮ ಸ್ಥಾನವನ್ನು ಹೊಂದಿಲ್ಲ, ಆದರೆ ಈ ಸಂದರ್ಭದಲ್ಲಿ ಟರ್ಕಿ ಶ್ರೇಯಾಂಕ ಸುಧಾರಣೆ ಕಂಡಿದೆ.
              ಭಾರತ ಮತ್ತು ವಿದೇಶಗಳಲ್ಲಿ ಪಾಸ್‌ಪೋರ್ಟ್ ವಿತರಣಾ ಪ್ರಾಧಿಕಾರಗಳು (ಪಿಐಎ) 2019 ರಲ್ಲಿ 12.8 ಮಿಲಿಯನ್ ಪಾಸ್‌ಪೋರ್ಟ್‌ಗಳನ್ನು ನೀಡಿದೆ. ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ನಂತರ ಭಾರತವನ್ನು ಜಾಗತಿಕವಾಗಿ ಮೂರನೇ ಅತಿದೊಡ್ಡ ಪಾಸ್‌ಪೋರ್ಟ್ ವಿತರಕರನ್ನಾಗಿ ಪರಿಗಣಿಸಲಾಗಿದೆ. ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ನ ಮಾಹಿತಿ ಪ್ರಕಾರ ಪ್ರಪಂಚದ ಎಲ್ಲಾ ಪಾಸ್‌ಪೋರ್ಟ್‌ಗಳನ್ನು ಪೂರ್ವ ವೀಸಾ ಇಲ್ಲದೆ ಪ್ರವೇಶಿಸಬಹುದಾದ ಸ್ಥಳಗಳ ಸಂಖ್ಯೆಗೆ ಅನುಗುಣವಾಗಿ ಶ್ರೇಣೀಕರಿಸಲಾಗುತ್ತದೆ. ಒಬ್ಬ ವ್ಯಕ್ತಿಯು, ಸರಾಸರಿ, 2006 ರಲ್ಲಿ ವೀಸಾ-ಮುಕ್ತವಾಗಿ 57 ದೇಶಗಳಿಗೆ ಭೇಟಿ ನೀಡಲಾಗುತ್ತಿತ್ತು. ಆದರೆ ಈಗ ಅದರ ಸಂಖ್ಯೆ 107 ಕ್ಕೆ ಏರಿದೆ. ಸ್ವೀಡನ್ ಮತ್ತು ಯುಎಸ್‌ನಂತಹ ದೇಶಗಳ ಪ್ರಜೆಗಳು 180 ಕ್ಕೂ ಹೆಚ್ಚು ಸ್ಥಳಗಳಿಗೆ ವೀಸಾ-ಮುಕ್ತವಾಗಿ ಭೇಟಿ ನೀಡಬಹುದಾಗಿದೆ.
               ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್ ಯಾವುದು?
          ಅಗ್ರ-ಶ್ರೇಯಾಂಕದ ರಾಷ್ಟ್ರಗಳಾದ ಜಪಾನ್ ಮತ್ತು ಸಿಂಗಪುರದ ಪಾಸ್‌ಪೋರ್ಟ್ ಅತ್ಯಂತ ಪ್ರಭಾವಶಾಲಿ ಪಾಸ್‌ಪೋರ್ಟ್ ಆಗಿದೆ. ಈ ಪಾಸ್‌ಪೋರ್ಟ್‌ನಲ್ಲಿ ದಾಖಲೆ ಮಟ್ಟದ ಸ್ವಾತಂತ್ರ್ಯವಿದೆ. ಪ್ರಸ್ತುತ ತಾತ್ಕಾಲಿಕ ಕೋವಿಡ್-ಸಂಬಂಧಿತ ನಿರ್ಬಂಧಗಳನ್ನು ಗಣನೆಗೆ ತೆಗೆದುಕೊಳ್ಳದೆಯೇ, ಎರಡು ಏಷ್ಯಾದ ರಾಷ್ಟ್ರಗಳ ಪಾಸ್‌ಪೋರ್ಟ್ ಹೊಂದಿರುವವರು ಈಗ ವಿಶ್ವದಾದ್ಯಂತ 192 ದೇಶಗಳಿಗೆ ವೀಸಾ ಇಲ್ಲದೆಯೇ ಪ್ರಯಾಣ ಮಾಡಬಹುದು. 
             ಕೋವಿಡ್‌ನಿಂದ ಜಾಗತಿಕ ಅಸಮಾನತೆ ಏರಿಕೆ
          ಜರ್ಮನಿ ಮತ್ತು ದಕ್ಷಿಣ ಕೊರಿಯಾ ಇತ್ತೀಚಿನ ಶ್ರೇಯಾಂಕದಲ್ಲಿ ಜಂಟಿ ಎರಡನೇ ಸ್ಥಾನವನ್ನು ಹೊಂದಿದ್ದು, ಪಾಸ್‌ಪೋರ್ಟ್ ಹೊಂದಿರುವವರು 190 ದೇಶಗಳಿಗೆ ವೀಸಾ-ಮುಕ್ತವಾಗಿ ಪ್ರವೇಶಿಸಲು ಅವಕಾಶವಿದೆ. ಆದರೆ ಫಿನ್‌ಲ್ಯಾಂಡ್, ಇಟಲಿ, ಲಕ್ಸೆಂಬರ್ಗ್ ಮತ್ತು ಸ್ಪೇನ್ 189 ಅಂಕಗಳೊಂದಿಗೆ 3 ನೇ ಸ್ಥಾನವನ್ನು ಹಂಚಿಕೊಂಡಿವೆ. ಇನ್ನು ಯುಎಸ್‌ ಹಾಗೂ ಯುಕೆ 2020 ರಲ್ಲಿ 8 ನೇ ಸ್ಥಾನಕ್ಕೆ ಕುಸಿದ ನಂತರ ಪಾಸ್‌ಪೋರ್ಟ್‌ಗಳು ತಮ್ಮ ಹಿಂದಿನ ಪ್ರಾಬಲ್ಯವನ್ನು ಈಗ ಮರಳಿ ಪಡೆದಿದೆ. ಈ ಎರಡು ದೇಶಗಳ ವೀಸಾ ಮುಕ್ತ ಭೇಟಿಯ ರ್‍ಯಾಂಕಿಂಗ್‌ 186 ಆಗಿದ್ದು, ಎರಡೂ ದೇಶಗಳು ಈಗ 6 ನೇ ಸ್ಥಾನದಲ್ಲಿವೆ. 
         ಏನಿದು ಗೋಲ್ಡನ್ ವೀಸಾ? 
            ಹೆಚ್ಚುತ್ತಿರುವ ಅಸಮಾನತೆಯ ಹಿನ್ನೆಲೆಯಲ್ಲಿ, ಹೆಚ್ಚಿನ ನಿವ್ವಳ ಮೌಲ್ಯದ ಹೂಡಿಕೆದಾರರು ಮತ್ತು ವಾಣಿಜ್ಯೋದ್ಯಮಿಗಳು ಹೂಡಿಕೆ ವಲಸೆ ಕಾರ್ಯಕ್ರಮಗಳ ಮೂಲಕ ಬಂಡವಾಳವನ್ನು ರಚನೆ ಮಾಡಲು ಬಯಸುತ್ತಾರೆ. ಆರೋಗ್ಯ ಭದ್ರತೆ ಮೊದಲಾದವುಗಳನ್ನು ಗಮನದಲ್ಲಿಟ್ಟುಕೊಂಡು ಅವರು ಮತ್ತು ಅವರ ಕುಟುಂಬಗಳು ಎಲ್ಲಿ ಆರಾಮವಾಗಿ ಇರಬಹುದು ಎಂಬುವುದನ್ನು ನೋಡುತ್ತಾರೆ. ಸ್ವಾಭಾವಿಕವಾಗಿ, ಹೂಡಿಕೆ ಕಾರ್ಯಕ್ರಮಗಳ ಮೂಲಕ ನಿವಾಸ ಮತ್ತು ಪೌರತ್ವವನ್ನು ನೀಡುವ ದೇಶಗಳು ಹೆನ್ಲಿ ಪಾಸ್‌ಪೋರ್ಟ್ ಇಂಡೆಕ್ಸ್‌ನಲ್ಲಿ ಬಲವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿದೆ. ಡೊಮಿನಿಕಾದ ಇತ್ತೀಚಿನ ವೀಸಾ ಮನ್ನಾ ಒಪ್ಪಂದವು ಆ ಯಶಸ್ಸಿನ ಪ್ರಮುಖ ಉದಾಹರಣೆಯಾಗಿದೆ. ಈ ವೀಸಾದ ಮುಖ್ಯ ಪ್ರಯೋಜನವೆಂದರೆ ಭವಿಷ್ಯದ ಭದ್ರತೆ. ಗೋಲ್ಡನ್ ವೀಸಾವನ್ನು ಸಾಮಾನ್ಯವಾಗಿ ಬಂಡವಾಳ ಹೂಡಿದವರು, ಉದ್ಯಮಿಗಳು, ಅತ್ಯುತ್ತಮ ಪ್ರತಿಭೆ ಹೊಂದಿರುವ ವ್ಯಕ್ತಿಗಳು, ಸಂಶೋಧಕರು, ಡಾಕ್ಟರ್ಸ್ ಮತ್ತು ಸರ್ಜನ್ಸ್, ವಿಜ್ಞಾನಿಗಳು, ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. 
              ಭಾರತೀಯರು ಗೋಲ್ಡನ್‌ ವೀಸಾ ಪಡೆಯಬಹುದೇ?
             2019 ಮತ್ತು 2020 ರ ನಡುವೆ ಹೆನ್ಲಿ ಮತ್ತು ಪಾಲುದಾರರ ಮೂಲಕ ಹೂಡಿಕೆ ವಲಸೆ ಕಾರ್ಯಕ್ರಮಗಳಲ್ಲಿ ಭಾರತೀಯರು ಭಾಗಿಯಾಗುವ ಶೇಕಡ 21ರಷ್ಟು ಅಧಿಕವಾಗಿದೆ. 2020 ಕ್ಕೆ ಹೋಲಿಸಿದರೆ ಗೋಲ್ಡನ್ ವೀಸಾಗಳನ್ನು ಆಯ್ಕೆ ಮಾಡಿದ ಭಾರತೀಯ ಪ್ರಜೆಗಳ ಸಂಖ್ಯೆಯಲ್ಲಿ ಶೇಕಡ 200ಕ್ಕಿಂತ ಹೆಚ್ಚಿನ ಹೆಚ್ಚಳವಾಗಿದೆ. 2021 ರಲ್ಲಿ ಗಮನಾರ್ಹವಾಗಿ ಏರಿಕೆಯಾಗಿದೆ. ಕೋವಿಡ್‌ಗೂ ಮುಂಚಿತವಾಗಿ ಗೋಲ್ಡನ್‌ ವೀಸಾದ ಅಂಕಿ ಅಂಶವನ್ನು ಹೋಲಿಕೆ ಮಾಡಿದಾಗ 2019 ಮತ್ತು 2021 ರ ನಡುವಿನಲ್ಲಿ ಗೋಲ್ಡನ್‌ ವೀಸಾ ಹೆಚ್ಚಳವು ಶೇಕಡ 264ರಷ್ಟಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries