HEALTH TIPS

ಜನವರಿ 7 ರಿಂದ 13ರ ಅವಧಿಯಲ್ಲಿ ಕೋವಿಡ್‌ ಪ್ರಸರಣ ಸೂಚ್ಯಂಕ 2.2ಕ್ಕೆ ಇಳಿಕೆ

              ನವದೆಹಲಿ: ದೇಶದಲ್ಲಿ ಕೋವಿಡ್‌-19 ಎಷ್ಟು ವೇಗವಾಗಿ ಪ್ರಸರಣಗೊಳ್ಳುತ್ತದೆ ಎಂಬುದರ ಸೂಚ್ಯಂಕವಾದ 'ಆರ್‌-ವ್ಯಾಲ್ಯೂ' ಜ. 7 ರಿಂದ 13ರ ಮಧ್ಯೆ 2.2ರಷ್ಟು ದಾಖಲಾಗಿತ್ತು. ಹಿಂದಿನ ಎರಡು ವಾರಗಳ ಅವಧಿಗೆ ಹೋಲಿಸಿದಾಗ ಈ ಸೂಚ್ಯಂಕದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಐಐಟಿ-ಮದ್ರಾಸ್‌ನ ಸಂಶೋಧಕರು ಹೇಳಿದ್ದಾರೆ.

          ಈ ಕುರಿತು ಪ್ರಾಥಮಿಕ ವಿಶ್ಲೇಷಣೆ ನಡೆಸಿದ್ದು, ಜ. 7ಕ್ಕೂ ಹಿಂದಿನ ಎರಡು ವಾರಗಳ ಅವಧಿಯಲ್ಲಿ ಈ ಸೂಚ್ಯಂಕ ಕ್ರಮವಾಗಿ 4 (ಜ.1 ರಿಂದ 6) ಹಾಗೂ 2.9 (ಡಿಸೆಂಬರ್ 25-31)) ಇತ್ತು ಎಂದು ಸಂಶೋಧಕರು ಹೇಳಿದ್ದಾರೆ.

          ಐಐಟಿಯ ಗಣಿತ ವಿಭಾಗದ ಪ್ರಾಧ್ಯಾಪಕರಾದ ನೀಲೇಶ್ ಎಸ್‌.ಉಪಾಧ್ಯೆ ಹಾಗೂ ಎಸ್‌.ಸುಂದರ್‌ ನೇತೃತ್ವದ ತಂಡ ಈ ವಿಶ್ಲೇಷಣೆ ನಡೆಸಿದೆ.

          ಕೋವಿಡ್‌ ಪೀಡಿತರು ಎಷ್ಟು ಜನರಿಗೆ ಸೋಂಕನ್ನು ಪ್ರಸರಣ ಮಾಡುತ್ತಾರೆ ಎಂಬುದನ್ನು 'ಆರ್‌-ವ್ಯಾಲ್ಯೂ' ಸೂಚಿಸುತ್ತದೆ. ಈ 'ಆರ್‌-ವ್ಯಾಲ್ಯೂ' 1ಕ್ಕಿಂತ ಕಡಿಮೆಯಾದರೆ, ಪಿಡುಗು ಕೊನೆಯಾಯಿತು ಎಂಬುದಾಗಿ ಪರಿಗಣಿಸಲಾಗುತ್ತದೆ.

          'ಪ್ರಸರಣದ ಸಂಭವನೀಯತೆ, ಇತರರು ಸೋಂಕಿತನೊಂದಿಗೆ ಸಂಪರ್ಕಕ್ಕೆ ಬರುವ ದರ ಹಾಗೂ ಸೋಂಕು ತಗುಲಲು ಬೇಕಾದ ಸಮಯವನ್ನು ಈ ಆರ್‌ ವ್ಯಾಲ್ಯೂ ಅವಲಂಬಿಸಿರುತ್ತದೆ' ಎಂದು ಗಣಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಜಯಂತ್ ಝಾ ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries