ತಿರುವನಂತಪುರ: ರಾಜ್ಯದಲ್ಲಿ ಇಂದು 76 ಮಂದಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ತ್ರಿಶೂರ್ 15, ಪತ್ತನಂತಿಟ್ಟ 13, ಆಲಪ್ಪುಳ 8, ಕಣ್ಣೂರು 8, ತಿರುವನಂತಪುರ 6, ಕೊಟ್ಟಾಯಂ 6, ಮಲಪ್ಪುರಂ 6, ಕೊಲ್ಲಂ 5, ಕೋಝಿಕ್ಕೋಡ್ 4, ಕಾಸರಗೋಡು 2, ಎರ್ನಾಕುಳಂ 1 ಮತ್ತು ವಯನಾಡ್ 1 ಎಂಬಂತೆ ಒಮಿಕ್ರಾನ್ ಖಚಿತಪಡಿಸಲಾಗಿದೆ.
ತಮಿಳುನಾಡಿನ ಒಬ್ಬ ವ್ಯಕ್ತಿಗೂ ಒಮಿಕ್ರಾನ್ ಸೋಂಕು ತಗುಲಿದೆ. 59 ಮಂದಿ ಕಡಿಮೆ ಅಪಾಯದ ದೇಶಗಳಿಂದ ಮತ್ತು 7 ಮಂದಿ ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು. 9 ಮಂದಿ ಸಂಪರ್ಕದಿಂದ ಓಮಿಕ್ರಾನ್ ಸೋಂಕಿಗೆ ಒಳಗಾಗಿದ್ದಾರೆ. ತ್ರಿಶೂರ್ 3, ಪತ್ತನಂತಿಟ್ಟ, ಆಲಪ್ಪುಳ ಮತ್ತು ಕೊಟ್ಟಾಯಂ 2 ಎಂಬಂತೆ ಸಂಪರ್ಕದಿಂದ ಸೋಂಕು ಬಾಧಿಸಿದೆ. ಪತ್ತನಂತಿಟ್ಟದ ಖಾಸಗಿ ನಸಿರ್ಂಗ್ ಕಾಲೇಜಿನಲ್ಲಿ ಓಮಿಕ್ರಾನ್ ಕ್ಲಸ್ಟರ್ ನ್ನು ರಚಿಸಲಾಗಿದೆ. ವಿದೇಶಿ ಸಂಪರ್ಕದಲ್ಲಿದ್ದ ವಿದ್ಯಾರ್ಥಿಯಿಂದ ಇದು ಹರಡಿರುವ ಶಂಕೆ ವ್ಯಕ್ತವಾಗಿದೆ.
ತ್ರಿಶೂರ್ ನಲ್ಲಿ ಯುಎಇ 9, ಕತಾರ್ 2, ಜರ್ಮನಿ 1, ಪತ್ತನಂತಿಟ್ಟ ಯುಎಇ 5, ಕತಾರ್ 1, ಕುವೈತ್ 1, ಐಲೆರ್ಂಡ್ 2, ಸ್ವೀಡನ್ 1, ಆಲಪ್ಪುಳ ಯುಎಇ 3, ಸೌದಿ ಅರೇಬಿಯಾ 2, ಕತಾರ್ 1, ಕಣ್ಣೂರು ಯುಎಇ 7, ಕತಾರ್ 1, ತಿರುವನಂತಪುರ ಯುಎಇ 2 , ಕತಾರ್ 1, ಕೊಟ್ಟಾಯಂ ಯುಎಇ 3, ಯುಕೆ 1, ಮಲಪ್ಪುರಂ ಯುಎಇ 6, ಕೊಲ್ಲಂ ಯುಎಇ 4, ಕತಾರ್ 1, ಕೋಝಿಕ್ಕೋಡ್ ಯುಎಇ 4, ಕಾಸರಗೋಡು ಯುಎಇ 2, ಎರ್ನಾಕುಳಂ ಕತಾರ್ 1, ವಯನಾಡ್ ಯುಎಇ 1 ಎಂಬಂತೆ ಸೋಮಕು ಬಾಧಿಸಿದವರ ವಿವರಗಳು.
ಇದರೊಂದಿಗೆ ರಾಜ್ಯದಲ್ಲಿ ಒಟ್ಟು 421 ಮಂದಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿದೆ. 290 ಕಡಿಮೆ-ಅಪಾಯದ ದೇಶಗಳಿಂದ ಮತ್ತು ಒಟ್ಟು 85 ಹೆಚ್ಚಿನ ಅಪಾಯದ ದೇಶಗಳಿಂದ ಬಂದವರು. ಸಂಪರ್ಕದ ಮೂಲಕ ಒಟ್ಟು 43 ಮಂದಿಗೆ ಸೋಂಕು ತಗುಲಿದೆ. ಬೇರೆ ರಾಜ್ಯದ 3 ಮಂದಿ ಇದ್ದಾರೆ.




