ಭೋಪಾಲ: ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ ಎಂದು ಹೇಳಿರುವ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಇಬ್ಬರು ವಯಸ್ಕ ವ್ಯಕ್ತಿಗಳು ವಿವಾಹ ಅಥವಾ ಸಹಜೀವನದ ಮೂಲಕ ಜೊತೆಯಾಗಿ ಬದುಕುವ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ ಎಂದು ಎತ್ತಿ ಹಿಡಿದಿದೆ.
0
samarasasudhi
ಜನವರಿ 31, 2022
ಭೋಪಾಲ: ಅನೈತಿಕ ಪೊಲೀಸ್‌ಗಿರಿಗೆ ಅವಕಾಶವಿಲ್ಲ ಎಂದು ಹೇಳಿರುವ ಮಧ್ಯಪ್ರದೇಶ ಉಚ್ಚ ನ್ಯಾಯಾಲಯವು ಇಬ್ಬರು ವಯಸ್ಕ ವ್ಯಕ್ತಿಗಳು ವಿವಾಹ ಅಥವಾ ಸಹಜೀವನದ ಮೂಲಕ ಜೊತೆಯಾಗಿ ಬದುಕುವ ಸಾಂವಿಧಾನಿಕ ಹಕ್ಕನ್ನು ಹೊಂದಿದ್ದಾರೆ ಎಂದು ಎತ್ತಿ ಹಿಡಿದಿದೆ.
ಗುಲ್ಝಾರ್ ಖಾನ್ ಎಂಬ ವ್ಯಕ್ತಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ಶುಕ್ರವಾರ ಕೈಗೆತ್ತಿಕೊಂಡಿತ್ತು. ತನ್ನ ಪತ್ನಿಯ ಪೋಷಕರು ಆಕೆಯನ್ನು ಬಲವಂತದಿಂದ ವಾರಣಾಸಿಗೆ ಒಯ್ದಿದ್ದಾರೆ ಮತ್ತು ಅಲ್ಲಿ ಆಕೆಯನ್ನು ಅಕ್ರಮ ದಿಗ್ಬಂಧನದಲ್ಲಿರಿಸಿದ್ದಾರೆ ಎಂದು ಖಾನ್ ಆರೋಪಿಸಿದ್ದಾರೆ. ಆರತಿ ಸಾಹು ತನ್ನನ್ನು ಮದುವೆಯಾಗಿದ್ದು, ಸ್ವಂತ ಇಚ್ಛೆಯ ಮೇರೆಗೆ ಇಸ್ಲಾಮ್ ಗೆ ಮತಾಂತರಗೊಂಡಿದ್ದಾಳೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿನ ತಮ್ಮ ನಿವಾಸಗಳಿಂದ ಪರಾರಿಯಾಗಿದ್ದ ಈ ಜೋಡಿ ಡಿ.28ರಂದು ಮುಂಬೈನ ಬಾಂದ್ರಾದಲ್ಲಿ ಮದುವೆ ಮಾಡಿಕೊಂಡಿದ್ದರು. ಮುಂಬೈನಲ್ಲಿಯೇ ವಾಸವಿದ್ದ ಜೋಡಿ ಜ.15ರಂದು ವಿವಾಹ ಪ್ರಮಾಣಪತ್ರವನ್ನು ತರಲು ತೆರಳುತ್ತಿದ್ದಾಗ ಸಾಹು ಕುಟುಂಬ ದಾಖಲಿಸಿರುವ ಅಪಹರಣ ಪ್ರಕರಣದ ಆಧಾರದಲ್ಲಿ ಜಬಲ್ಪುರದ ಪೊಲೀಸ್ ತಂಡವು ಅವರನ್ನು ವಶಕ್ಕೆ ತೆಗೆದುಕೊಂಡಿತ್ತು.
ಸಾಹು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯಕ್ಕೆ ನೀಡಿದ್ದ ಹೇಳಿಕೆಯಲ್ಲಿ ಖಾನ್ ಹೇಳಿಕೆಯನ್ನು ಸಮರ್ಥಿಸಿದ್ದಳು.