ತಿರುವನಂತಪುರ: ಸಾರ್ವಜನಿಕ ವಿತರಣಾ ಕೇಂದ್ರದಲ್ಲಿ(ಅಂಗಡಿ) ನಿರ್ಣಾಯಕ ಪಾತ್ರ ವಹಿಸುವ ಇ-ಪೋಸ್ ಯಂತ್ರದ ಮುಷ್ಕರದಿಂದ ರಾಜ್ಯದಲ್ಲಿ ಪಡಿತರ ವಿತರಣೆ ಬಿಕ್ಕಟ್ಟಿನಲ್ಲಿದೆ ಎಂದು ಆಹಾರ ಸಚಿವ ಜಿ.ಆರ್.ಅನಿಲ್ ಹೇಳಿದ್ದಾರೆ. ಆದರೂ ರಾಜ್ಯದಲ್ಲಿ ಪಡಿತರ ವಿತರಣೆ ಸುಗಮವಾಗಿ ನಡೆಯುತ್ತಿದೆ ಎಂಬುದು ಆಹಾರ ಸಚಿವರು ಹೇಳಿರುವರು. ಕೆಲವರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ತೊಂದರೆ ಕೊಡುತ್ತಿದ್ದಾರೆ ಎಂದು ಸಚಿವರು ಹೇಳಿದರು.
ಇದೇ ವೇಳೆ ಅಕ್ಕಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಸರ್ವರ್ ದೋಷ ಪರಿಹಾರವಾಗುವವರೆಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. ಏಳು ಜಿಲ್ಲೆಗಳಲ್ಲಿ ಮಧ್ಯಾಹ್ನ ಹಾಗೂ ಉಳಿದ ಜಿಲ್ಲೆಗಳಲ್ಲಿ ಮಧ್ಯಾಹ್ನ ನಂತರ ಪಡಿತರ ವಿತರಣೆ ನಡೆಯಲಿದೆ.
ಮಲಪ್ಪುರಂ, ತ್ರಿಶೂರ್, ಪಾಲಕ್ಕಾಡ್, ಕೊಲ್ಲಂ, ಆಲಪ್ಪುಳ, ಪತ್ತನಂತಿಟ್ಟ ಮತ್ತು ವಯನಾಡ್ ಜಿಲ್ಲೆಗಳಲ್ಲಿ ಪಡಿತರ ಅಂಗಡಿಗಳು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 12 ರವರೆಗೆ ತೆರೆದಿರುತ್ತವೆ. ಎರ್ನಾಕುಳಂ, ಕೋಯಿಕ್ಕೋಡ್, ತಿರುವನಂತಪುರ, ಕಣ್ಣೂರು, ಕೊಟ್ಟಾಯಂ, ಕಾಸರಗೋಡು ಮತ್ತು ಇಡುಕ್ಕಿ ಜಿಲ್ಲೆಗಳಲ್ಲಿ ಪಡಿತರ ಅಂಗಡಿಗಳು ಮಧ್ಯಾಹ್ನ ನಂತರ ತೆರೆದಿರುತ್ತವೆ.
ಸರ್ವರ್ ಅಸಮರ್ಪಕತೆ ಸಂಪೂರ್ಣವಾಗಿ ಬಗೆಹರಿಯುವವರೆಗೂ ಹೊಂದಾಣಿಕೆ ಮುಂದುವರಿಯಲಿದೆ ಎಂದ ಸಚಿವರು, ಸರ್ವರ್ ಸಾಮಥ್ರ್ಯದಲ್ಲಿ ತಾಂತ್ರಿಕ ಸಮಸ್ಯೆಗಳಿದ್ದವು. ರಾಜ್ಯ ದತ್ತಾಂಶ ಕೇಂದ್ರವನ್ನು ಸಂಪರ್ಕಿಸಿ ಎರಡು ದಿನಗಳಲ್ಲಿ ಸಮಸ್ಯೆಯನ್ನು ಪರಿಹರಿಸಲಾಗುವುದು ಎಂದು ಸಚಿವರು ಹೇಳಿದರು.
ರಾಜ್ಯದಲ್ಲಿ ಇ-ಪೋಸ್ ಯಂತ್ರ ಕೈಕೊಡುತ್ತಿರುವುದು ಇದೇ ಮೊದಲಲ್ಲ. ಪದೇ ಪದೇ ಕೆಟ್ಟು ಹೋಗುತ್ತಿರುವುದನ್ನು ಸರಿಪಡಿಸುವುದು ಬಿಟ್ಟರೆ ಸರ್ಕಾರದ ಕಡೆಯಿಂದ ಬೇರೆ ಪರಿಹಾರವಿಲ್ಲ ಎಂದು ಪಡಿತರ ವ್ಯಾಪಾರಿಗಳು ದೂರಿರುವರು. ಯಂತ್ರದಲ್ಲಿನ ಅಸಮರ್ಪಕ ಕಾರ್ಯದ ನಂತರ ಮೂರು ದಿನಗಳ ಬಿಕ್ಕಟ್ಟಿನ ಬಳಿಕ ಆಹಾರ ಸಚಿವರು ಪ್ರತಿಕ್ರಿಯೆ ನೀಡಿರುವರು.




