HEALTH TIPS

ಕೊರೋನಾ ಪ್ರಸರಣ:ಪಿ.ಎಸ್.ಸಿ. ಪರೀಕ್ಷೆಗಳ ಮುಂದೂಡಿಕೆ

               ತಿರುವನಂತಪುರ: ಜನವರಿ 23 ಮತ್ತು 30 ರಂದು ನಡೆಯಬೇಕಿದ್ದ ಪಿಎಸ್‍ಸಿ ಪರೀಕ್ಷೆಗಳನ್ನು ಕೊರೋನಾ ವಿಸ್ತರಣೆಯಿಂದಾಗಿ ಮುಂದೂಡಲಾಗಿದೆ. ವೈದ್ಯಕೀಯ ಶಿಕ್ಷಣ ಸೇವೆಯ ಸ್ವಾಗತಕಾರರ ಹುದ್ದೆಗೆ ಜನವರಿ 23ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಜನವರಿ 27ಕ್ಕೆ ಮುಂದೂಡಲಾಗಿದೆ. 

             ಲ್ಯಾಬೋರೇಟರಿ ಟೆಕ್ನಿಷಿಯನ್ ಗ್ರೇಡ್ 2 ಹುದ್ದೆಗಳ ಪರೀಕ್ಷೆಯನ್ನು ಜನವರಿ 28ಕ್ಕೆ ಮುಂದೂಡಲಾಗಿದೆ. ಜನವರಿ 30 ರಂದು ನಿಗದಿಯಾಗಿದ್ದ ಕೇರಳ ಜಲ ಪ್ರಾಧಿಕಾರದಲ್ಲಿ ಆಪರೇಟರ್ ಹುದ್ದೆಗೆ ಫೆಬ್ರವರಿ 4 ರಂದು ಪರೀಕ್ಷೆ ನಡೆಯಲಿದೆ. ಪರೀಕ್ಷೆಗಳ ವಿವರವಾದ ವೇಳಾಪಟ್ಟಿಯನ್ನು ಪಿಎಸ್ ಸಿ ವೆಬ್‍ಸೈಟ್‍ನಲ್ಲಿ ಲಭ್ಯವಾಗುವಂತೆ ಮಾಡಲಾಗುವುದು ಎಮದು ಪಿಎಸ್ ಸಿ ಸುದ್ದಿಪತ್ರದಲ್ಲಿ ತಿಳಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries