ಕುಂಬಳೆ: ಕುಂಬಳೆ ಪತ್ರಕರ್ತರ ಸಂಘಟನೆಯಾದ ಪ್ರೆಸ್ ಪೋರಂ ಸಭಾಂಗಣಕ್ಕೆ ಹಿರಿಯ ಪತ್ರಕರ್ತ ನಾಂಗಿ ಅಬ್ದುಲ್ಲಾ ಮಾಸ್ತರ್ ಅವರ ಹೆಸರನ್ನು ಇರಿಸಲು ಪ್ರೆಸ್ ಪೋರಂ ಕಾರ್ಯಕಾರಿ ಸಮಿತಿ ನಿರ್ಧರಿಸಿದೆ.
ಅಧ್ಯಕ್ಷ ಲತೀಫ್ ಉಪ್ಪಳ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ. ಪ್ರೆಸ್ ಪೋರಂ ಸಭಾಂಗಣಕ್ಕೆ ಕುಂಬಳೆಯವರೇ ಆದ ಅತ್ಯುತ್ತಮ ಪತ್ರಕರ್ತರೂ ಆಗಿದ್ದ ನಾಂಗಿ ಮಾಸ್ತರರ ಹೆಸರನ್ನು ನಾಮಕರಣ ಮಾಡಿರುವುದು ಕುಂಬಳೆ ಮಾಧ್ಯಮ ಸಿಬ್ಬಂದಿಗೆ ಹೆಮ್ಮೆಯ ಸಾಧನೆ ಎಂದು ಸಭೆ ಅಭಿಪ್ರಾಯಪಟ್ಟಿತು.




