HEALTH TIPS

ಚೀನಾಗೆ ಸೆಡ್ಡು: ಭಾರತ-ಮಧ್ಯ ಏಷ್ಯಾ ರಾಷ್ಟ್ರಗಳ ಮೊದಲ ಶೃಂಗಸಭೆ; ಮೂರು ಸಹಕಾರ ಸೂತ್ರ ಜಪಿಸಿದ ಪ್ರಧಾನಿ ಮೋದಿ

            ನವದೆಹಲಿ: ಮುಂಬರುವ ವರ್ಷಗಳಲ್ಲಿ ಭಾರತ ಮತ್ತು ಮಧ್ಯ ಏಷ್ಯಾ ನಡುವಿನ ಸಹಕಾರಕ್ಕಾಗಿ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ವ್ಯಾಖ್ಯಾನಿಸಲು ಕರೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಾದೇಶಿಕ ಭದ್ರತೆ ಮತ್ತು ಸಮೃದ್ಧಿಗೆ ಭಾರತ ಮತ್ತು  ಮಧ್ಯ ಏಷ್ಯಾ ನಡುವೆ ಪರಸ್ಪರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

            ಪ್ರಧಾನಿ ನರೇಂದ್ರ ಮೋದಿ ಗುರುವಾರ ಮೊದಲ ಭಾರತ-ಮಧ್ಯ ಏಷ್ಯಾ ಶೃಂಗಸಭೆ ನಡೆಸಿ ದೇಶದ ಅಭಿವೃದ್ದಿಗಾಗಿ ಮೂರು ಸೂತ್ರಗಳನ್ನು ಅನುಸರಿಸಬೇಕಾಗಿದೆ ಎಂದು ವಿವರಿಸಿದರು.

             ವರ್ಚುವಲ್ ಶೃಂಗಸಭೆಯಲ್ಲಿ ಕಝಾಕಿಸ್ತಾನ್ ನ ಕಸ್ಸಿಮ್-ಜೋಮಾರ್ಟ್ ಟೊಕಾಯೆವ್, ಉಜ್ಬೇಕಿಸ್ತಾನ್‌ನ ಶಾವ್ಕತ್ ಮಿರ್ಜಿಯೊಯೆವ್, ತಜಿಕಿಸ್ತಾನ್‌ನ ಎಮೋಮಾಲಿ ರಹಮಾನ್, ತುರ್ಕಮೆನಿಸ್ತಾನ್‌ನ ಗುರ್ಬಂಗುಲಿ ಬರ್ಡಿಮುಹಮೆಡೋವ್ ಮತ್ತು ಕಿರ್ಗಿಝ್‌ನ ಸದಿರ್ ಜಪರೋವ್ ಎಂಬ ಐವರು ಅಧ್ಯಕ್ಷರು ಭಾಗವಹಿಸಿದ್ದರು.

           ಈ ವೇಳೆ ಮಾತನಾಡಿದ ಮೋದಿ, ಸಮಗ್ರ ಮತ್ತು ಸ್ಥಿರ ನೆರೆಹೊರೆಯ ಭಾರತದ ದೃಷ್ಟಿಗೆ ಮಧ್ಯ ಏಷ್ಯಾ ಕೇಂದ್ರವಾಗಿದೆ. ಪ್ರಾದೇಶಿಕ ಭದ್ರತೆ ಮತ್ತು ಸಮೃದ್ಧಿಗೆ ಭಾರತ ಮತ್ತು ಮಧ್ಯ ಏಷ್ಯಾ ನಡುವೆ ಪರಸ್ಪರ ಸಹಕಾರ ಅತ್ಯಗತ್ಯವಾಗಿದೆ. ನಮ್ಮ ಸಹಕಾರಕ್ಕೆ ಪರಿಣಾಮಕಾರಿ ರಚನೆಯನ್ನು ನೀಡುವುದರಿಂದ ಎಲ್ಲಾ ಮಧ್ಯಸ್ಥಗಾರರ ನಡುವೆ ನಿಯಮಿತ ಸಂವಾದಕ್ಕೆ ಅಗತ್ಯವಾದ ವೇದಿಕೆ ಸ್ಥಾಪನೆಯಾಗಲಿದೆ. ಹಾಗಾಗಿ ನಮ್ಮ ಸಹಕಾರಕ್ಕಾಗಿ ಮಹತ್ವಾಕಾಂಕ್ಷೆಯ ಮಾರ್ಗಸೂಚಿ ಸಿದ್ಧಪಡಿಸಬೇಕಾಗಿದೆ. ಇದು ಪ್ರಾದೇಶಿಕ ಸಂಪರ್ಕ ಮತ್ತು ಸಹಕಾರಕ್ಕಾಗಿ ಸಮಗ್ರ ವಿಧಾನವನ್ನು ಅಳವಡಿಸಿಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.

              ಪ್ರಾದೇಶಿಕ ಭದ್ರತೆಗೆ ಸಂಬಂಧಿಸಿದಂತೆ ನಾವೆಲ್ಲರೂ ಒಂದೇ ರೀತಿಯ ಕಾಳಜಿ ಮತ್ತು ಗುರಿಗಳನ್ನು ಹಂಚಿಕೊಳ್ಳಲಿದ್ದೇವೆ. ಅಫ್ಘಾನಿಸ್ತಾನದಲ್ಲಿನ ಬೆಳವಣಿಗೆಗಳ ಬಗ್ಗೆ ನಾವೆಲ್ಲರೂ ಚಿಂತಿತರಾಗಿದ್ದೇವೆ. ಈ ಸಂದರ್ಭದಲ್ಲಿಯೂ ಸಹ, ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ನಮ್ಮ ನಡುವಿನ ಪರಸ್ಪರ ಸಹಕಾರವು ಹೆಚ್ಚು ಮಹತ್ವದ್ದಾಗಿದೆ.

             ಭಾರತವು ಮಧ್ಯ ಏಷ್ಯಾದ ಎಲ್ಲಾ ದೇಶಗಳೊಂದಿಗೆ ಗಹನವಾದ ಸಂಬಂಧವನ್ನು ಹೊಂದಿದೆ. ಕಝಾಕಿಸ್ತಾನ್ ಭಾರತದ ಇಂಧನ ಭದ್ರತೆಯಲ್ಲಿ ಪ್ರಮುಖ ಪಾಲುದಾರನಾಗಿ ಮಾರ್ಪಟ್ಟಿದೆ. ಕಝಾಕಿಸ್ತಾನ್ ನಲ್ಲಿ ಇತ್ತೀಚೆಗೆ ನಡೆದ ಗಲಭೆಯಿಂದಾಗಿ ಜೀವಹಾನಿ ಸಂಭವಿಸಿದ್ದು, ನಾನು ನನ್ನ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.



    Post a Comment

    0 Comments
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
    Qries