HEALTH TIPS

ಫಿರೋಝ್‌ ಪುರ ಭದ್ರತಾ ವೈಫಲ್ಯ: ಎಫ್‌ಐಆರ್‌ ನಲ್ಲಿ ಪ್ರಧಾನಿ ಮೋದಿಯವರ ಉಲ್ಲೇಖವಿಲ್ಲ; ವರದಿ

               ಬಠಿಂಡಾ :  ಪ್ರಧಾನಿ ನರೇಂದ್ರ ಮೋದಿಯವರು ಜ.5ರಂದು ಪಂಜಾಬಿಗೆ ಭೇಟಿ ನೀಡಿದ್ದ ಸಂದರ್ಭ ಉಂಟಾಗಿತ್ತೆನ್ನಲಾದ ಭದ್ರತಾ ವೈಫಲ್ಯದ ಕುರಿತು ಫಿರೋಝ್ಪುರದ ಕುಲಗಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ನಲ್ಲಿ ಹಲವಾರು ಲೋಪಗಳಿರುವುದನ್ನು ಮಾಧ್ಯಮಗಳು ವರದಿ ಮಾಡಿವೆ.

        ಘಟನೆಯು ಜ.5ರಂದು ನಡೆದಿತ್ತಾದರೂ ಜನರಲ್ ಡೈರಿ ಉಲ್ಲೇಖವನ್ನು ಜ.6ರಂದಷ್ಟೇ ದಾಖಲಿಸಲಾಗಿತ್ತು. ನಂತರ ಇನ್ಸ್ಪೆಕ್ಟರ್ ಬಲಬೀರ್ ಸಿಂಗ್ ಅವರ ದೂರಿನ ಮೇರೆಗೆ ಎಫ್‌ಐಆರ್ ಸಲ್ಲಿಸಲಾಗಿತ್ತು. ಆದರೆ ಎಫ್‌ಐಆರ್ನಲ್ಲಿ ಪ್ರಧಾನಿಯವರ ಬೆಂಗಾವಲು ವಾಹನಗಳನ್ನು ಉಲ್ಲೇಖಿಸಲಾಗಿಲ್ಲ. ತಾನು ಅಪರಾಹ್ನ 2:30 ಮತ್ತು 3ರ ನಡುವೆ ಫಿರೋಝ್ಪುರ-ಮೋಗಾ ರಸ್ತೆಯ ಪ್ಯಾರಿಯಾನಾ ಫ್ಲೈಓವರ್ನಲ್ಲಿ ಧರಣಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ್ದೆ ಎಂದು ಬಲಬೀರ್ ಎಫ್‌ಐಆರ್ನಲ್ಲಿ ಉಲ್ಲೇಖಿಸಿದ್ದಾರೆ. ಆದಾಗ್ಯೂ ಅಪರಾಹ್ನ 3:20ರ ವೇಳೆಗೆ ಪ್ರಧಾನಿಯವರು ಬಠಿಂಡಾದಿಂದ ದಿಲ್ಲಿಗೆ ನಿರ್ಗಮಿಸಿದ್ದರು ಎನ್ನುವುದನ್ನು ಉಲ್ಲೇಖಿಸುವುದು ಅಗತ್ಯವಾಗಿತ್ತು. ವರದಿಗಳು ತಿಳಿಸಿರುವಂತೆ ಮೋದಿಯವರ ವಾಹನಗಳ ಸಾಲು ಅಪರಾಹ್ನ 1:15ರಿಂದ 1:35ರವರೆಗೆ ಫ್ಲೈಓವರ್ನಲ್ಲಿ ಸಿಕ್ಕಿಹಾಕಿಕೊಂಡಿತ್ತು.

          ಈ ನಡುವೆ 150 ಅಪರಿಚಿತ ವ್ಯಕ್ತಿಗಳನ್ನು ಎಫ್‌ಐಆರ್ನಲ್ಲಿ ಹೆಸರಿಸಿರುವ ಬಲಬೀರ್ ಅವರ ವಿರುದ್ಧ ಐಪಿಸಿಯ 283 ಕಲಮ್ನಡಿ ಪ್ರಕರಣವನ್ನು ದಾಖಲಿಸಿದ್ದಾರೆ. ಕೆಲವು ಅಪರಿಚಿತ ವ್ಯಕ್ತಿಗಳು ಫ್ಲೈಓವರ್ನಲ್ಲಿ ಧರಣಿಯನ್ನು ನಡೆಸುತ್ತಿದ್ದಾರೆ ಮತ್ತು ಅದರಿಂದಾಗಿ ಫಿರೋಜ್ಪುರ ರ್ಯಾಲಿಗೆ ತೆರಳುತ್ತಿದ್ದ ಕೆಲವು ವಾಹನಗಳು ಮತ್ತು ಕೆಲವು ವಿಐಪಿಗಳ ಕಾರುಗಳು ಸಿಕ್ಕಿಹಾಕಿಕೊಂಡಿದ್ದವು ಎನ್ನುವುದು ಬಲಬೀರ್ಗೆ ತಿಳಿದಿತ್ತು ಎಂದು ಎಫ್‌ಐಆರ್ನಲ್ಲಿ ಉಲ್ಲೇಖಿಸಲಾಗಿದೆ.

             ಎಫ್‌ಐಆರ್ನಲ್ಲಿ ಪ್ರಧಾನಿಯವರನ್ನು ಉಲ್ಲೇಖಿಸಲಾಗಿಲ್ಲ. ಐಪಿಸಿ 283ರಡಿ ಕೇವಲ 200 ರೂ.ದಂಡವನ್ನು ವಿಧಿಸಲಾಗುತ್ತದೆ ಮತ್ತು ಆರೋಪಿಗೆ ಜಾಮೀನು ನೀಡಬಹುದಾಗಿದೆ. ಇದು ಪಂಜಾಬ ಸರಕಾರದ ಪಿತೂರಿಯನ್ನು ಬೆಟ್ಟು ಮಾಡುತ್ತಿದೆ ಎಂದು ಹೇಳಿದ ಪಂಜಾಬ್ ಬಿಜೆಪಿ ಅಧ್ಯಕ್ಷ ಅಶ್ವನಿ ಶರ್ಮಾ ಅವರು, ಪ್ರತಿಭಟನಾಕಾರರ ವೀಡಿಯೊಗಳು ವೈರಲ್ ಆಗಿರುವಾಗ ಮತ್ತು ಅವರು ಮಾಧ್ಯಮಗಳಿಗೆ ಹೇಳಿಕೆಗಳನ್ನು ನೀಡಿರುವಾಗ ಅವರು ಅಪರಿಚಿತರಾಗಿರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
‌                                    ಬಿಕೆಯು ಕ್ರಾಂತಿಕಾರಿ ಮನವಿ

         ಪ್ರಧಾನಿಯವರ ವಾಹನಗಳ ಸಾಲನ್ನು ತಡೆಗಟ್ಟಿದ್ದ ಮತ್ತು ಅಂತಿಮವಾಗಿ ಅದು ವಾಪಸಾಗುವುದನ್ನು ಅನಿವಾರ್ಯವಾಗಿಸಿದ್ದ ಜ.5ರ ಪ್ರತಿಭಟನೆಯ ಹೊಣೆಗಾರಿಕೆಯನ್ನು ಬಿಕೆಯು-ಕ್ರಾಂತಿಕಾರಿ ಈ ಹಿಂದೆಯೇ ವಹಿಸಿಕೊಂಡಿತ್ತು. ಜ.5ರ ವೀಡಿಯೊ ಸಂದೇಶವೊಂದರಲ್ಲಿ ಬಿಕೆಯು-ಕ್ರಾಂತಿಕಾರಿಯ ಅಧ್ಯಕ್ಷ ಸುರ್ಜೀತ್ ಸಿಂಗ್ ಪೂಲ್ ಅವರು ಯೂನಿಯನ್ ಸದಸ್ಯರಿಗೆ ಅಭಿನಂದನೆಗಳನ್ನೂ ಸಲ್ಲಿಸಿದ್ದರು.

           ಶುಕ್ರವಾರ ರಾತ್ರಿ ಇನ್ನೊಂದು ವೀಡಿಯೊವನ್ನು ಬಿಡುಗಡೆಗೊಳಿಸಿರುವ ಫೂಲ್,'ನಾವು ಪ್ರತಿಭಟನೆಯನ್ನು ನೇರ ಪ್ರಧಾನಿಯ ಬಳಿಗೇ ಕೊಂಡೊಯ್ದಿದ್ದೇವೆ. ಆದರೆ ಈಗ ನಮ್ಮ ಯೂನಿಯನ್ ಹಣಕಾಸು ಮುಗ್ಗಟ್ಟನ್ನೆದುರಿಸುತ್ತಿದೆ. ಹೀಗಾಗಿ ಸ್ವಯಂಪ್ರೇರಿತವಾಗಿ ನಮಗೆ ನೆರವಾಗುವಂತೆ ನಾವು ಭಾರತದಲ್ಲಿನ ಮತ್ತು ವಿದೇಶಗಳಲ್ಲಿನ ಪ್ರತಿಯೊಬ್ಬರನ್ನೂ ಕೋರಿಕೊಳ್ಳುತ್ತಿದ್ದೇವೆ. ನಮ್ಮ ಹೋರಾಟದ ಸಂದರ್ಭ ಸಂಗ್ರಹಿಸಲಾಗಿದ್ದ ಹಣ ಖರ್ಚಾಗಿದೆ. ಈಗ ಇನ್ನೊಂದು ಹೋರಾಟವನ್ನು ನಾವು ಎದುರಿಸಬೇಕಿದ್ದು,ಅದಕ್ಕೆ ಹಣದ ಅಗತ್ಯವಿದೆ ಎಂದು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries