HEALTH TIPS

ಹಕ್ಕಿಗಳ ಅಧ್ಯಯನಕ್ಕೆ ಆನ್‌ಲೈನ್ ಕೋರ್ಸ್‌- 'ಒರ್ನಿಥಾಲಜಿ'

        ಹಕ್ಕಿಗಳ ಬಗ್ಗೆ ಶಾಸ್ತ್ರೀಯವಾಗಿ ನಡೆಸುವ ಅಧ್ಯಯನವನ್ನು ಒರ್ನಿಥಾಲಜಿ (ornithology) ಎನ್ನುತ್ತಾರೆ. ಅತ್ಯಂತ ಕಡಿಮೆ ಖರ್ಚಿನಲ್ಲಿ, ಹವ್ಯಾಸವನ್ನೇ ಶಿಸ್ತಿನ ಅಧ್ಯಯನವನ್ನಾಗಿ ಬದಲಿಸಿಕೊಳ್ಳುವ ಹಾಗೂ ಮನೆಯಲ್ಲಿ ಕುಳಿತೇ ಅಧ್ಯಯನ ಮಾಡುವ ಅವಕಾಶ ಕೇಂದ್ರ ಸರ್ಕಾರದ 'ಸ್ವಯಂ' (SWAYAM - Study Webs of Active - Learning for Young Aspiring Minds) ಶಿಕ್ಷಣ ಯೋಜನೆಯಿಂದ ಈಗ ಲಭ್ಯವಿದೆ.

        ಮನೆಯ ಮುಂದಿನ ಗೇಟ್‌ನ ಮೇಲೆ ಹಾರಿ ಬಂದು ಕುಳಿತ ಗುಬ್ಬಚ್ಚಿಯನ್ನೋ, ಟುವ್ವಿ ಹಕ್ಕಿಯನ್ನೋ ಕಂಡು ಸಂತಸಪಡುವವರು, ಸಾಧ್ಯವಾದರೆ ಫೋಟೊ ಕ್ಲಿಕ್ಕಿಸುವವರು ಮನೆಗೊಬ್ಬರು ಸಿಗುತ್ತಾರೆ. ತೋಟದ ಮರದ ರೆಂಬೆಯ ಸಂದಿನಿಂದ ಕೇಳಿಬರುವ ಸುಮಧುರ ಚಿಲಿ - ಪಿಲಿ - ದನಿಯ ಹಿಂದೆ ಹೋಗಿ ಅದ್ಯಾವ ಹಕ್ಕಿ ಸದ್ದು ಮಾಡುತ್ತಿದೆ? ಎಲ್ಲಿ ಗೂಡು ಕಟ್ಟಿ ಕುಳಿತಿದೆ? ಜೋಡಿ ಹಕ್ಕಿಯಾ? ಬಣ್ಣ - ಹೆಸರೇನು? ಎಂದೆಲ್ಲ ಹುಡುಕುತ್ತ ಅದನ್ನೇ ಹವ್ಯಾಸವನ್ನಾಗಿಸಿಕೊಂಡು, ಕ್ರಮೇಣ ತಜ್ಞರಾಗಿ ಅರಣ್ಯ ಇಲಾಖೆ, ಸ್ವಯಂ ಸೇವಾ ಸಂಸ್ಥೆ(ಎನ್‌ಜಿಒ), ಸಂಶೋಧನಾ ಸಂಸ್ಥೆಗಳಲ್ಲಿ ನೌಕರಿ ಗಿಟ್ಟಿಸಿದವರೂ ಇದ್ದಾರೆ.

          ಇದನ್ನು ವೈಜ್ಞಾನಿಕವಾಗಿ ಕಲಿಸುವ ಕಾಲೇಜು - ವಿಶ್ವವಿದ್ಯಾಲಯಗಳೂ ಇವೆ. ಹೀಗೆ ಹಕ್ಕಿಗಳ ಬಗ್ಗೆ ಶಾಸ್ತ್ರೀಯವಾಗಿ ನಡೆಸುವ ಅಧ್ಯಯನವನ್ನು ಒರ್ನಿಥಾಲಜಿ (ornithology) ಎನ್ನುತ್ತಾರೆ. ಅತ್ಯಂತ ಕಡಿಮೆ ಖರ್ಚಿನಲ್ಲಿ, ಹವ್ಯಾಸವನ್ನೇ ಶಿಸ್ತಿನ ಅಧ್ಯಯನವನ್ನಾಗಿ ಬದಲಿಸಿಕೊಳ್ಳುವ ಹಾಗೂ ಮನೆಯಲ್ಲಿ ಕುಳಿತೇ ಅಧ್ಯಯನ ಮಾಡುವ ಅವಕಾಶ ಕೇಂದ್ರ ಸರ್ಕಾರದ 'ಸ್ವಯಂ' (SWAYAM - Study Webs of Active - Learning for Young Aspiring Minds) ಶಿಕ್ಷಣ ಯೋಜನೆಯಿಂದ ಈಗ ಲಭ್ಯವಿದೆ.

ವಿದ್ಯಾರ್ಹತೆ: ಅಂಗೀಕೃತ ವಿವಿಯಲ್ಲಿ ಪ್ರಥಮ ವರ್ಷದ ವಿಜ್ಞಾನ (life sciences) ಪದವಿ ಓದುತ್ತಿರುವ ಹಾಗೂ ಸ್ನಾತಕೋತ್ತರ ಪದವಿ ಅಧ್ಯಯನ ಕೈಗೊಂಡಿರುವ ವಿದ್ಯಾರ್ಥಿಗಳು ಈ ಕೋರ್ಸ್ ಕಲಿಯಲು ಆರ್ಹರು.

 ಅವಧಿ: 12 ವಾರಗಳು l ಪ್ರಾರಂಭ : 24 ಜನವರಿ 2022

ಪರೀಕ್ಷೆ: 23 ಎಪ್ರಿಲ್ 2022 l ದಾಖಲಾತಿಗೆ ಕೊನೆಯ ದಿನಾಂಕ: 31 ಜನವರಿ 2022 ಪರೀಕ್ಷಾ ಶುಲ್ಕ: ₹1,000

         ಆನ್‌ಲೈನ್ ಕೋರ್ಸ್ ಕಲಿಕೆಗೆ ಯಾವುದೇ ಶುಲ್ಕವಿರುವುದಿಲ್ಲ. ಹಕ್ಕಿಗಳ ಅಂಗರಚನೆ, ಆಹಾರ ಪದ್ಧತಿ, ಹುಡುಕಾಟ, ಶರೀರ ವಿಜ್ಞಾನ, ಕಾಯಿಲೆಗಳು, ಜೀವಿ ಪರಿಸ್ಥಿತಿ, ಧ್ವನಿ ನಡವಳಿಕೆ, ವೈವಿಧ್ಯ, ಆವಾಸ ಪರಿಸ್ಥಿತಿ, ಗೂಡಿನ ರಚನೆ, ಸಂರಕ್ಷಣಾ ಯೋಜನೆ, ಇತರ ಹಕ್ಕಿಗಳೊಂದಿಗಿನ ಒಡನಾಟ, ವರ್ಗೀಕರಣ ಹೀಗೆ ಹತ್ತು ಹಲವು ವಿಷಯಗಳ ಕುರಿತು ನೇರಪ್ರಸಾರದಲ್ಲಿ ಬೋಧಿಸಲಾಗುತ್ತದೆ.           ವಿದ್ಯಾರ್ಥಿಗಳು ಕನಿಷ್ಠ 3 ರಿಂದ 4 ಕ್ಷೇತ್ರಕಾರ್ಯ (field work) ಮಾಡಿದ್ದರ ಕುರಿತು ವರದಿ ಸಲ್ಲಿಸಬೇಕು.

ಒಟ್ಟು 12 ಮಾಡ್ಯೂಲ್‌ಗಳಲ್ಲಿ ಇಡೀ ಕೋರ್ಸ್‌ ಹೇಳಿಕೊಟ್ಟು, ಪರೀಕ್ಷೆ ಬರೆದು ಉತ್ತೀರ್ಣರಾದವರಿಗೆ ಉನ್ನತ ಅಧ್ಯಯನಕ್ಕೆ ಅನುಕೂಲ ಕಲ್ಪಿಸುವ ಮತ್ತು ಈಗಾಗಲೇ ಓದುತ್ತಿರುವ ಬೇರೆ ಕೋರ್ಸ್‌ನ ಗ್ರೇಡ್ ಹೆಚ್ಚಿಸುವ 03 ಕ್ರೆಡಿಟ್ ಪಾಯಿಂಟ್‌ಗಳನ್ನು ನೀಡಲಾಗುತ್ತದೆ. ಪರೀಕ್ಷೆ ಮೂರು ಗಂಟೆಗಳ ಅವಧಿಯದಾಗಿದ್ದು ಯಾವುದಾದರೂ ಆಯ್ದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬರೆಯಬೇಕು.

ಕೋರ್ಸ್‌ಗೆ ನೋಂದಣಿ ಮಾಡಿಕೊಳ್ಳುವಾಗಲೇ ಪರೀಕ್ಷಾ ಶುಲ್ಕ ಭರಿಸಬೇಕು. ಪ್ರಮಾಣ ಪತ್ರವನ್ನು ಐಐಟಿ ಮದ್ರಾಸ್ ಮತ್ತು ನ್ಯಾಷನಲ್ ಪ್ರೋಗ್ರಾಮ್ ಫಾರ್ ಎನ್‌ಹ್ಯಾನ್‌ಸ್ಡ್ ಲರ್ನಿಂಗ್‌(NPTEL -National Program on Technology Enhanced Learning) ಸಂಸ್ಥೆಗಳು ಜಂಟಿಯಾಗಿ ನೀಡುತ್ತವೆ. ಕೃಷಿ, ಅರಣ್ಯ, ವನ್ಯಜೀವಿ ಸಂರಕ್ಷಣೆ ಮತ್ತು ಜೀವಿವೈವಿಧ್ಯ ಸಂರಕ್ಷಣೆಯಲ್ಲಿ ನಿರತರಾದ ಸಂಸ್ಥೆಗಳು 'ಸ್ವಯಂ' ನ ಪ್ರಮಾಣ ಪತ್ರವನ್ನು ಮಾನ್ಯಮಾಡಿ ಕೆಲಸ ನೀಡುತ್ತವೆ. ಹೆಚ್ಚಿನ ಮಾಹಿತಿಗೆ ಈ ಜಾಲತಾಣ ನೋಡಿ: https://onlinecourses.nptel.ac.in 


Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries