ನವದೆಹಲಿ : ದೇಶಾದ್ಯಂತ ಒಮೈಕ್ರಾನ್ ಪ್ರಕರಣಗಳು ಕ್ಷಿಪ್ರವಾಗಿ ಹೆಚ್ಚುತ್ತಿರುವ ನಡುವೆಯೇ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಮತ್ತು ಐಸೊಲೇಶನ್‌ಗೆ ಒಳಪಡಿಸಲು ಅನುವಾಗುವಂತೆ ರ್‍ಯಾಪಿಡ್ ಆಯಂಟಿಜನ್ ಟೆಸ್ಟ್ (ಆರ್‌ಎಟಿ) ತೀವ್ರಗೊಳಿಸವಂತೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ.
0
samarasasudhi
ಜನವರಿ 02, 2022
ನವದೆಹಲಿ : ದೇಶಾದ್ಯಂತ ಒಮೈಕ್ರಾನ್ ಪ್ರಕರಣಗಳು ಕ್ಷಿಪ್ರವಾಗಿ ಹೆಚ್ಚುತ್ತಿರುವ ನಡುವೆಯೇ ಕೋವಿಡ್ ಪಾಸಿಟಿವ್ ಪ್ರಕರಣಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಲು ಮತ್ತು ಐಸೊಲೇಶನ್‌ಗೆ ಒಳಪಡಿಸಲು ಅನುವಾಗುವಂತೆ ರ್‍ಯಾಪಿಡ್ ಆಯಂಟಿಜನ್ ಟೆಸ್ಟ್ (ಆರ್‌ಎಟಿ) ತೀವ್ರಗೊಳಿಸವಂತೆ ಕೇಂದ್ರ ಸರ್ಕಾರ ಸಲಹೆ ಮಾಡಿದೆ.
ತಲೆನೋವು, ಗಂಟಲು ಕೆರೆತ, ಉಸಿರಾಟದ ತೊಂದರೆ, ಮೈ ಕೈ ನೋವು, ರುಚಿ ಅಥವಾ ವಾಸನೆ ಇಲ್ಲದಿರುವಿಕೆಯಂಥ ಸಮಸ್ಯೆ ಹೊಂದಿರುವ ಎಲ್ಲ ಜ್ವರಪೀಡಿತರನ್ನು ಶಂಕಿತ ಕೋವಿಡ್ ಸೋಂಕಿತರು ಎಂದು ಪರಿಗಣಿಸುವಂತೆಯೂ ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ರೋಗ ನಿರ್ಣಯವಾಗುವರೆಗೂ ಇವರನ್ನು ಪ್ರತ್ಯೇಕತೆಯಲ್ಲಿ ಇಡುವಂತೆ ಸೂಚಿಸಲಾಗಿದೆ.
ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸಂಬಂಧ ಪತ್ರ ಬರೆದಿರುವ ರಾಜೇಶ್ ಭೂಷಣ್, ಆರ್‌ಎಟಿ ಪರೀಕ್ಷೆಗಳನ್ನು ಹೆಚ್ಚಿಸುವ ಹಾಗೂ ಹಾಲಿ ಇರುವ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಅಗತ್ಯತೆಯನ್ನು ಪ್ರತಿಪಾದಿಸಿದ್ದಾರೆ.
ದೇಶದ ವಿವಿಧೆಡೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಪಾಸಿಟಿವಿಟಿ ದರ ಕೂಡಾ ಹೆಚ್ಚುತ್ತಿದೆ. ಆರಂಭಿಕ ಹಂತದಲ್ಲೇ ಶಂಕಿತ ರೋಗಿಗಳನ್ನು ಪರೀಕ್ಷೆಗೆ ಗುರುಪಡಿಸಿವುದು ಮತ್ತು ಅವರ ಸಂಪರ್ಕಿತರನ್ನು ಪತ್ತೆ ಮಾಡಿ ಪ್ರತ್ಯೇಕತೆಗೆ ಗುರುಪಡಿಸುವುದು ರೋಗ ಪ್ರಸರಣ ತಡೆಗೆ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಲ್ಲ ಅಗತ್ಯ ಪರೀಕ್ಷಾ ಸಾಧನಗಳನ್ನು ಖರೀದಿಸುವಂತೆ ಮತ್ತು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಆರ್‌ಎಟಿ ಬೂತ್‌ಗಳನ್ನು ನಿರ್ಮಿಸುವಂತೆ ಸಲಹೆ ಮಾಡಿದೆ. ಜಿಲ್ಲಾ ಆಸ್ಪತ್ರೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪರೀಕ್ಷೆ ನಡೆಸಲು ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಲಾಗಿದೆ.