HEALTH TIPS

ಕೊರೋನಾ ಬರದಂತೆ ತಡೆಯುವುದು ಹೇಗೆ? ಆರೋಗ್ಯ ಸೂತ್ರಗಳು ಮತ್ತು ಸುರಕ್ಷತೆ!

           ಕೋವಿಡ್ ಒಂದನೇ ಮತ್ತು ಎರಡನೇ ಅಲೆ (Covid-19 first and second wave) ಪ್ರತಿಯೊಬ್ಬ ನಾಗರಿಕರ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರಿದೆ. ಅದು ಸೋಂಕು ತಗುಲಿ ಆಗಿರಬಹುದು, ಸಾವು-ನೋವು ಆಗಿರಬಹುದು, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ಮೆಡಿಸಿನ್ ಕೊರತೆಯಾಗಿರಬಹುದು, ಲಾಕ್ ಡೌನ್, ಆರ್ಥಿಕ ಸಂಕಷ್ಟ, ಉದ್ಯೋಗ ಕಳೆದುಕೊಳ್ಳುವಿಕೆ ಹೀಗೆ ನಾನಾ ರೂಪಗಳನ್ನು ಕೋವಿಡ್ ಎರಡೂ ಅಲೆಗಳು ಪ್ರದರ್ಶಿಸಿವೆ.

       ಇದೀಗ ಮತ್ತೆ ಕೋವಿಡ್ ಮೂರನೇ ಅಲೆ ಭಾರತ ಸೇರಿದಂತೆ ವಿಶ್ವದಾದ್ಯಂತ ಹೆಚ್ಚಾಗುತ್ತಿದೆ. ಕೊರೋನಾ ರೂಪಾಂತರಿ ವಕ್ಕರಿಸಿದೆ. ಕೋವಿಡ್ ನಿಯಮಗಳನ್ನು ಪಾಲಿಸಿ ಸೋಂಕು ಆದಷ್ಟು ಬರದಂತೆ ತಡೆಯುವುದೇ ಇದಕ್ಕಿರುವ ಬಾಣ ಎಂದು ಸರ್ಕಾರಕ್ಕೆ, ಜನಕ್ಕೆ ಅರ್ಥವಾಗಿದೆ. ಹಾಗಾದರೆ ಓಮಿಕ್ರಾನ್, ಕೋವಿಡ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಏನು ಮಾಡಬೇಕು, ಹೇಗೆ ಸುರಕ್ಷಿತವಾಗಿರಬೇಕು ಎಂದು ನೋಡುವುದಾದರೆ:

         ಕೋವಿಡ್ ಲಸಿಕೆ (Vaccination): ಪ್ರಸ್ತುತ ಕೊರೋನಾದಿಂದ ದೂರ ಇರಲು, ಸೋಂಕು ವ್ಯಾಪಕವಾಗಿ ಪಸರಿಸದಂತೆ ತಡೆಯಲು ಇರುವ ಬಹಳ ಮುಖ್ಯ ವಿಧಾನ ಕೊರೋನಾ ಲಸಿಕೆ. ಪ್ರತಿಯೊಬ್ಬ ಅರ್ಹ ಫಲಾನುಭವಿಗಳು ಲಸಿಕೆ ಪಡೆಯಬೇಕು. ಸರ್ಕಾರ ಅನುಮೋದನೆ ನೀಡಿರುವ ಲಸಿಕೆಗಳನ್ನು ಪಡೆಯುವುದರಿಂದ ಕೋವಿಡ್ ಸೋಂಕಿನ ಅತಿ ಗಂಭೀರ ಪರಿಣಾಮದಿಂದ, ಸಾವು-ನೋವಿನಿಂದ ಬಚಾವಾಗಬಹುದು, ಲಸಿಕೆ ಪಡೆದು ಸೋಂಕು ಬಂದರೂ ಕೂಡ ಸೌಮ್ಯ ರೂಪದಲ್ಲಿರುತ್ತದೆ. ಹಾಗೆಂದು ಲಸಿಕೀಕರಣ ಸಂಪೂರ್ಣವಾಗಿ ಕೊರೋನಾ ಹರಡುವುದನ್ನು ತಡೆಯುವುದಿಲ್ಲ. ಅತಿ ಅಪಾಯಕಾರಿ ಪ್ರಕರಣಗಳಲ್ಲಿ ಲಸಿಕೆ ನೀಡಿಕೆ ಹೆಚ್ಚು ಉಪಯೋಗಕ್ಕೆ ಬರುತ್ತದೆ.

           ಕಡ್ಡಾಯವಾಗಿ ಮಾಸ್ಕ್ ಧರಿಸಿ (Mask): ಮೂಗು-ಬಾಯಿಯನ್ನು ಸರಿಯಾಗಿ ಮುಚ್ಚುವ ಮಾಸ್ಕ್ ಹಾಕಿಕೊಳ್ಳಿ. ಜನದಟ್ಟಣೆ ಹೆಚ್ಚಾಗಿರುವ ಪ್ರದೇಶದಲ್ಲಿ ಶಾರೀರಿಕ ಅಂತರ ಎಲ್ಲಾ ಸಂದರ್ಭಗಳಲ್ಲಿ ಕಾಪಾಡುವುದು ಮತ್ತು ಸಾಕಷ್ಟು ಉತ್ತಮ ಗಾಳಿ ಸಿಗುವಂತೆ ನೋಡಿಕೊಳ್ಳುವುದು ಕಷ್ಟಸಾಧ್ಯ. ಅಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು ಸಹಾಯಕ್ಕೆ ಬರುತ್ತದೆ.

             ಶಾರೀರಿಕ ಅಂತರ (Physical distance): ಜನರೊಂದಿಗೆ ಮಾತನಾಡುವಾಗ ಕನಿಷ್ಠ 1 ಮೀಟರ್ ಅಂತರವಿರುವಂತೆ ನೋಡಿಕೊಳ್ಳಿ. ಕೊರೋನಾ ಸೋಂಕಿತ ವ್ಯಕ್ತಿಯ ಹತ್ತಿರ ಒಂದು ಮೀಟರ್ ಗೂ ಕಡಿಮೆ ಅಂತರದಲ್ಲಿ ನಿಂತಿದ್ದರೆ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

            3 ಸಿ  (3 C) ಗಳಿಂದ ದೂರವಿರಿ: ಸರಿಯಾಗಿ ಗಾಳಿ, ಬೆಳಕು ಹೋಗದ ಒಳಾಂಗಣ ಪ್ರದೇಶ, ಜನದಟ್ಟಣೆ ಹೊಂದಿರುವ ಸ್ಥಳಗಳು ಮತ್ತು ನಿಕಟ ಸಂಪರ್ಕಗಳಿಂದ ದೂರವಿರಿ. ಕೆಮ್ಮುವಾಗ/ಸೀನುವಾಗ ಕೈಯಿಂದ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ. ಬಳಸಿದ ಟಿಶ್ಯುಗಳನ್ನು ತಕ್ಷಣವೇ ವಿಲೇವಾರಿ ಮಾಡಿ. ನೀರು ಅಥವಾ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿ. ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಹ್ಯಾಂಡ್ ರಬ್‌ನಿಂದ ಕನಿಷ್ಠ 20 ಸೆಕೆಂಡುಗಳ ಕಾಲ ನಿಮ್ಮ ಕೈಗಳನ್ನು ತೊಳೆಯುವುದು ವೈರಸ್ ಹರಡುವಿಕೆಯನ್ನು ಕಡಿಮೆ ಮಾಡುತ್ತದೆ. ಕಣ್ಣು, ಮೂಗು ಮತ್ತು ಬಾಯಿಯನ್ನು ಸ್ಪರ್ಶಿಸುವುದನ್ನು ತಪ್ಪಿಸಿ, ಮನೆ, ಸುತ್ತಮುತ್ತ ಪರಿಸರ ಸ್ವಚ್ಛವಾಗಿಡಿ.

         ಪೋಷಣೆ (Nutrition) ಮತ್ತು ಹೈಡ್ರೇಶನ್ (hydration): ರೋಗಿಗಳಲ್ಲಿ ಕಡಿಮೆ ವಿಟಮಿನ್ ಮಟ್ಟಗಳು (ವಿಟಮಿನ್ ಡಿ 3, ವಿಟಮಿನ್ ಸಿ) ತೀವ್ರ ಸೋಂಕು ಮತ್ತು ಸಾವಿಗೆ ಹೆಚ್ಚಿನ ಅಪಾಯಗಳನ್ನು ತಂದೊಡ್ಡುತ್ತದೆ ಎಂದು ಅಧ್ಯಯನಗಳು ತೋರಿಸುತ್ತಿವೆ. ಆದ್ದರಿಂದ, ಸರಿಯಾದ ಸಮತೋಲಿತ ಆಹಾರ, ಸಾಕಷ್ಟು ನೀರಿನ ಸೇವನೆ ಮತ್ತು ಉತ್ತಮ ಆರೋಗ್ಯವು ಈ ಕೊರೋನಾ ಕಾಲದಲ್ಲಿ ಅತ್ಯಂತ ಮುಖ್ಯವಾಗಿದೆ.

         ಮಾನಸಿಕ ಆರೋಗ್ಯ ಮತ್ತು ದೈಹಿಕ ಚಟುವಟಿಕೆ (Mental health and physical activities): ಯಾವುದೇ ವೈರಸ್ ಸಾಂಕ್ರಾಮಿಕ ಸಮಯದಲ್ಲಿ ಭಯ, ಆತಂಕ ಮತ್ತು ಒತ್ತಡವು ಹೆಚ್ಚು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಆದ್ದರಿಂದ, ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು ಅತ್ಯಂತ ಮಹತ್ವದ್ದಾಗಿದೆ. ಸೂಕ್ತವಾದ ರಕ್ಷಣಾತ್ಮಕ ಕ್ರಮಗಳಲ್ಲಿ ಲಸಿಕೆಯನ್ನು ನೀಡುವುದು ವೈರಸ್ ಹರಡುವಿಕೆಯನ್ನು ಕಡಿಮೆಮಾಡಲು ಅತ್ಯಂತ ಮುಖ್ಯವಾಗುತ್ತದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries