ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಲವು ನಾಯಕರು ಸಮಾಜವಾದಿ ಪಕ್ಷ ಸೇರುತ್ತಿದ್ದಾರೆ. ಈ ಘಟನೆಯನ್ನು ಸಮಾಜವಾದಿ ಪಕ್ಷವು ಗೇಲಿ ಮಾಡಿದೆ.
0
samarasasudhi
ಜನವರಿ 12, 2022
ಲಖನೌ: ಉತ್ತರ ಪ್ರದೇಶದಲ್ಲಿ ಬಿಜೆಪಿಯ ಹಲವು ನಾಯಕರು ಸಮಾಜವಾದಿ ಪಕ್ಷ ಸೇರುತ್ತಿದ್ದಾರೆ. ಈ ಘಟನೆಯನ್ನು ಸಮಾಜವಾದಿ ಪಕ್ಷವು ಗೇಲಿ ಮಾಡಿದೆ.
ಆನ್‌ಲೈನ್ ಶಾಪಿಂಗ್ ವೇದಿಕೆ ಅಮೆಜಾನ್‌ನಲ್ಲಿ ಬೀಗ ಬುಕ್ ಮಾಡಿ, ಅದನ್ನು ಲಖನೌನ ಬಿಜೆಪಿ ಕಚೇರಿಗೆ ಕಳುಹಿಸಿರುವ ಸಮಾಜವಾದಿ ಪಕ್ಷ, ಚುನಾವಣೆ ನಂತರ ಪಕ್ಷದ ಕಚೇರಿ ಬಾಗಿಲಿಗೆ ಹಾಕಿಕೊಳ್ಳುವಂತೆ ವ್ಯಂಗ್ಯ ಮಾಡಿದೆ.
ಬೀಗ ಆರ್ಡರ್ ಮಾಡಿರುವ ಸ್ಕ್ರೀನ್‌ಶಾಟ್ ಅನ್ನು ಎಸ್‌ಪಿ ವಕ್ತಾರ ಐಪಿ ಸಿಂಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಚ್ 10ರ ಫಲಿತಾಂಶದ ನಂತರ ಬೀಗವನ್ನು ಕಚೇರಿಗೆ ಹಾಕಿಕೊಳ್ಳುವಂತೆ ಅವರು ಬಿಜೆಪಿಗೆ ಹೇಳಿದ್ದಾರೆ.
ಉತ್ತರ ಪ್ರದೇಶದ ಕೆಲಸ ಸಚಿವರು ಮತ್ತು ಶಾಸಕರು ಬಿಜೆಪಿ ತೊರೆದು ಎಸ್‌ಪಿ ಸೇರ್ಪಡೆಗೊಂಡಿದ್ದಾರೆ.