HEALTH TIPS

ಉದ್ಯಮ ವಲಯದ ದೂರು ಪರಿಹಾರದೊಂದಿಗೆ ಕೈಗಾರಿಕಾ ಅಭಿವೃದ್ಧಿಗೆ ಕ್ರಮ: ಮೀಟ್ ದ ಮಿನಿಸ್ಟರ್ ಕಾರ್ಯಕ್ರಮ ಉದ್ಘಾಟಿಸಿ ಸಚಿವ ರಾಜೀವ್

                                                 

                ಕಾಸರಗೋಡು: ಉದ್ಯಮಿಗಳ ದೂರುಗಳಿಗೆ ಪರಿಹಾರ ದೊರಕಿಸಿಕೊಡುವುದರ ಜತೆಗೆ  ಈ ವರ್ಷ ಒಂದು ಲಕ್ಷ ಉದ್ದಿಮೆಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ಗುರಿಯಿರಿಸಿಕೊಲಳ್ಳಲಾಗಿದೆ ಎಂದು ಕೇರಳ ರಆಜ್ಯ ಕೈಗಾರಿಕೆ, ಕಾನೂನು ಹಾಗೂ ಹುರಿಹಗ್ಗ ಖಾತೆ ಸಚಿವ ಪಿ. ರಾಜೀವ್ ತಿಳಿಸಿದ್ದಾರೆ.

                ಅವರು ಕಾಸರಗೋಡು ನಗರಸಭಾಂಗಣದಲ್ಲಿ ಮಂಗಳವಾರ ನಡೆದ ಮೀಟ್ ದ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಕೈಗಾರಿಕಾ ವಲಯ ಹಾಗೂ ಉದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಹಾಗೂ ಅಹವಾಲು  ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 

          ಪ್ರಸಕ್ತ 50ಕೋಟಿ ವರೆಗಿನ ಬಂಡವಾಳದ ಉದ್ದಿಮೆಗಳಿಗೆ ಪರವಾನಗಿ ಅಗತ್ಯವಿಲ್ಲ. 50ಕೋಟಿಗಿಂತ ಮೇಲ್ಪಟ್ಟ ಬಂಡವಾಳದ ಉದ್ದಿಮೆಗಳಿಗೆ ದಾಖಲೆ ಸಮರ್ಪಕವಾಗಿದ್ದಲ್ಲಿ ಒಂದು ವಾರದೊಳಗೆ ಸರ್ಕಾರ ಅನುಮತಿ ನೀಡಲಿದೆ. ಮೀಟ್ ದ ಮಿನಿಸ್ಟರ್ ಕಾರ್ಯಕ್ರಮ ಎಲ್ಲ ಜಿಲ್ಲೆಗಳಲ್ಲೂ ಪೂರ್ತಿಗೊಂಡ ನಂತರ ಉದ್ಯಮಿಗಳು ಹಾಗೂ ಹೂಡಿಕೆದಾರರು ಯಾವುದೇ ದೂರುಗಳಿಗೂ ಆಸ್ಪದವಿಲ್ಲದ ರೀತಿಯಲ್ಲಿ ಕೆಲಸಕಾರ್ಯಗಳು ಸುಗಮವಾಗಲಿರುವುದಾಗಿ ತಿಳಿಸಿದರು.

          ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗ ಪ್ರಿನ್ಸಿಪಲ್ ಕಾರ್ಯದರ್ಶಿ ಎ.ಪಿ.ಎಂ ಮಹಮ್ಮದ್ ಹನೀಶ್ ಅಧ್ಯಕ್ಷತೆ ವಹಿಸಿದ್ದರು. ಕೈಗಾರಿಕಾ ಉಲಾಖೆ ನಿರ್ದೇಶಕ ಎಸ್. ಹರಿಕಿಶೋರ್, ಕೆಎಸ್‍ಐಡಿಸಿ ಎಂ.ಡಿ ರಾಜಮಾಣಿಕ್ಯಂ, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್‍ಚಂದ್, ಕಿನ್‍ಫ್ರಾ ಎಂ.ಡಿ ಸಂತೋಷ್ ಕೋಶಿ ಥಾಮಸ್ ಉಪಸ್ಥಿತರಿದ್ದರು.

                                   ಮೀಟ್ ದ ಮಿನಿಸ್ಟರ್-47ದೂರುಗಳ ಪರಿಗಣನೆ:

              ಸಚಿವ ಪಿ.ರಾಜೀವ್ ನೇತೃತ್ವದಲ್ಲಿ ನಡೆದ ಮೀಟ್ ದ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಜಿಲ್ಲೆಯ ಹೂಡಿಕೆದಾರರು ಹಾಗೂ ಉದ್ಯಮಿಗಳ 47ದೂರುಗಳನ್ನು ಪರಿಗಣಿಸಲಾಯಿತು. ಇವುಗಳಲ್ಲಿ ಬಹುತೇಕ ದಊರುಗಳು ವಿದ್ಯುತ್ ಹಾಗೂ ಸ್ಥಳೀಯಾಡಳಿತ ಸಂಸ್ಥೆ ಸಂಬಂಧಿಸಿದವುಗಳಾಗಿತ್ತು. ಆನ್‍ಲೈನ್ ಮೂಲಕ ಲಭಿಸಿದ 47ದೂರುಗಳು ಅಲ್ಲದೆ ತಡವಾಗಿ ಲಭಿಸಿದ ಹತ್ತು ದೂರುಗಳನ್ನು ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಂತರ ಪರಿಗಣಿಸಲು ತೀರ್ಮಾನಿಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries