ನವದೆಹಲಿ: ಚುನಾವಣಾ ಸಂದರ್ಭದಲ್ಲಿ ಮತಗಳನ್ನು ಸೆಳೆಯಲು ಮತದಾರರಿಗೆ ಹಣ, ಹೆಂಡ ಹಾಗೂ ಇತರೆ ಆಸೆ, ಆಮಿಷ ತೋರಿಸುವುದು ಸಹಜ. ಇಂತಹ ಚುನಾವಣಾ ಅಕ್ರಮಗಳ ತಡೆಗೆ ಕೇಂದ್ರ ಚುನಾವಣಾ ಆಯೋಗವು ಸಿ-ವಿಜಿಲ್(cVIGIL) ಆ್ಯಪ್ ಬಿಡುಗಡೆ ಮಾಡಿದೆ.
ಸಿವಿಜಿಲ್ ಮೊಬೈಲ್ ಅಪ್ಲಿಕೇಷನ್ ರೆಡ್ ಹ್ಯಾಂಡ್ ಆಗಿ ಅಕ್ರಮವನ್ನು ತಮ್ಮ ಮೊಬೈಲ್‌ಗಳಮೂಲಕ ನೇರವಾಗಿ ಆಯೋಗಕ್ಕೆ ಮಾಹಿತಿ ನೀಡಬಹುದು. ದೂರುದಾರರ ಹೆಸರು, ವಿಳಾಸವನ್ನು ಆಯೋಗ ಗೌಪ್ಯವಾಗಿ ಇಡುವ ಭರವಸೆಯನ್ನು ಕೂಡ ನೀಡಿದೆ. ಸಿವಿಜಿಲ್ ಅಪ್ಲಿಕೇಷನ್ ಬಳಕೆ ಹೇಗೆ?
ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಸಿ-ವಿಜಿಲ್ ಆಪ್ ಅನ್ನು ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ದೂರು ನೀಡಲೆಂದೇ ಜಾರಿಗೆ ತಂದಿತ್ತು. ಸಿವಿಜಿಲ್ ಅಪ್ಲಿಕೇಷನ್ ಬಳಕೆ ಹೇಗೆ?
ಕೇಂದ್ರ ಚುನಾವಣಾ ಆಯೋಗ ದೇಶಾದ್ಯಂತ ಸಿ-ವಿಜಿಲ್ ಆಪ್ ಅನ್ನು ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ದೂರು ನೀಡಲೆಂದೇ ಜಾರಿಗೆ ತಂದಿತ್ತು. ಸ್ಮಾರ್ಟ್ ಫೋನ್ ನಲ್ಲಿ ಗೂಗಲ್ ಪ್ಲೇ ನಲ್ಲಿ ಸಿ- ವಿಜಿಲ್ ಆಪ್ ಡೌನ್ ಲೋಡ್ ಮಾಡ್ಕೊಂಡು ಬಳಿಕ, ಅಕ್ರಮ ನಡೆಯುವ ಸ್ಥಳದ ಫೋಟೋ ಅಥವಾ ದೂರು ನೀಡಬಹುದು. ಆ್ಯಪ್ನಲ್ಲಿ ತಮ್ಮ ಸ್ವವಿವರ ನೀಡಿಯಾದರೂ, ಅಥವಾ ನೀಡದೆಯೂ ದೂರು ನೀಡಬಹುದು. ಆ್ಯಪ್ನಲ್ಲಿ ತಿಳಿಸಿದ 16 ರೀತಿಯ ದೂರುಗಳ ಪೈಕಿ ಒಂದನ್ನು ಸೆಲೆಕ್ಟ್ ಮಾಡಿ ಸೆಂಡ್ ಮಾಡಬಹುದು.
ಇಷ್ಟು ದಿನ ಆಯೋಗವೇ ವಿವಿಧ ತಂಡಗಳನ್ನು ರಚಿಸಿ ಚುನಾವಣಾ ಅಕ್ರಮಗಳನ್ನು ತಡೆಯಲು ಪ್ರಯತ್ನ ಮಾಡುತ್ತಿತ್ತು. ಆದರೆ ಈ ಬಾರಿ ಮೊಬೈಲ್ ಆ್ಯಪ್ ಮೂಲಕ ನೇರವಾಗಿ ದೂರು ನೀಡಲು ಸಾರ್ವಜನಿಕರಿಗೆ ಅಧಿಕಾರ ನೀಡಿದೆ. ಆದ್ರೆ ಈ ಅಂಡ್ರಾಯ್ಡ್ ಆಪ್ ಸಂಪೂರ್ಣವಾಗಿ ಹಿಂದಿ- ಇಂಗ್ಲೀಷ್ ನಲ್ಲಿದ್ದು, ಕನ್ನಡದಲ್ಲಿ ಇಲ್ಲದಿರೋದು, ಆಪ್ ಬಳಕೆ ಬಗ್ಗೆ ಹೆಚ್ಚಿನ ಜಾಗೃತಿ ಇಲ್ಲದ ಕಾರಣ ರಾಜ್ಯದಲ್ಲಿ ಹೆಚ್ಚಿನವರು ಈ ಆ್ಯಪ್ ಬಳಸುತ್ತಿಲ್ಲ. ಬಳಸುತ್ತಿರುವುದು ಕೆಲವರೇ ಆದರೂ ನಕಲಿ ದೂರುಗಳು ಹೆಚ್ಚಿರುವುದು ವಿಪರ್ಯಾಸವೇ ಸರಿ.
ಚುನಾವಣಾ ಅಕ್ರಮಗಳು ಯಾವುವು?:
ಇಂತವರಿಗೆ ಮತ ಕೊಡಿ ಎಂದು ಹಣ, ವಸ್ತು ನೀಡಿ ಆಮಿಷವೊಡ್ಡುವುದು, ಮತದಾರರನ್ನು ಮತಗಟ್ಟೆಗಳಿಗೆ ಕರೆದೊಯ್ಯುವುದು, ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸುವುದು, ತಾವು ಹೇಳಿದವರಿಗೆ ಮತ ಕೊಡಬೇಕು ಎಂದು ಹೆಸರಿಸುವುದು, ಮತೀಯ ಭಾವನೆಗಳನ್ನು ಕೆರಳಿಸುವ ಭಾಷಣ, ಬಹಿರಂಗ ಹೇಳಿಕೆ ಕೊಡುವುದು.
ಮಾಧ್ಯಮಗಳಲ್ಲಿ ಒಬ್ಬ ಅಭ್ಯರ್ಥಿಯ ಪರ ಸುದ್ದಿಯ ರೂಪದಲ್ಲಿ ಪ್ರಚಾರ ಮಾಡುವುದು, ಸುಳ್ಳು ಸುದ್ದಿಗಳನ್ನು ಹರಡುವುದು, ಕಟ್ಟಡ ಮುಂತಾದವುಗಳ ಮೇಲೆ ಪ್ರಚಾರ ಸಾಮಗ್ರಿಗಳನ್ನು ಅಂಟಿಸಿ ವಿರೂಪಗೊಳಿಸುವುದು ಇತ್ಯಾದಿ ಚುನಾವಣಾ ಅಕ್ರಮಗಳಾಗಿರುತ್ತದೆ. ಆಯೋಗ ಏನು ಮಾಡುತ್ತದೆ? ನಾಗರಿಕರು ಅಪ್‌ಲೋಡ್ ಮಾಡಿದ ದೂರನ್ನು ಮತ್ತು ಅಪ್ಲಿಕೇಷನ್ ಸ್ವಯಂ ದಾಖಲಿಸಿಕೊಳ್ಳುವ ಸ್ಥಳದ ಮಾಹಿತಿಯನ್ನು ಆಧರಿಸಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಸ್ಥಳಕ್ಕೆ ಕೇವಲ 15 ನಿಮಿಷಗಳಲ್ಲಿ ಭೇಟಿ ಕೊಟ್ಟು ಪರಿಶೀಲನೆ ಮಾಡುತ್ತಾರೆ. 30 ನಿಮಿಷಗಳಲ್ಲಿ ಪರಿಶೀಲನಾ ವರದಿಯನ್ನು ಶುನಾವಣಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳ ಗಮನ ಸೆಳೆಯುವರು. ಕೇವಲ 100 ನಿಮಿಷಗಳಲ್ಲಿ ಎಲ್ಲಾ ಪ್ರಕ್ರಿಯೆ ಮುಗಿದು, ದೂರಿನ ಸ್ಥಿತಿಯ ಬಗ್ಗೆ ಅಧಿಕಾರಿಗಳು ದೂರುದಾರರಿಗೆ ಮಾಹಿತಿ ನೀಡುತ್ತಾರೆ, ಈಗಾಗಲೇ ದೇಶಾದ್ಯಂತ ಲಕ್ಷಕ್ಕೂ ಅಧಿಕ ನಾಗರಿಕರು ಅಪ್ಲಿಕೇಷನ್ ಡೌನ್‌ಲೋಡ್ ಮಾಡಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ಚುನಾವಣೆಯನ್ನು ಪಾರದರ್ಶಕವಾಗಿ ಮುಕ್ತವಾಗಿ ನಡೆಸಬೇಕು ಎಂಬ ಆಯೋಗದ ಆಶಯಕ್ಕೆ ಪ್ರಜೆಗಳು ಸ್ಪಂದಿಸಬೇಕಾಗಿದೆ.




