ತಿರುವನಂತಪುರ: ರಾಜ್ಯಾದ್ಯಂತ ಆರ್‌ಟಿಒ ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೊಲ್ಲಂನ ಆರ್ಯಂಕಾವುನಲ್ಲಿ ಬೆಳಿಗ್ಗೆ 6 ಗಂಟೆಯಿಂದ ವಿಜಿಲೆನ್ಸ್ ತಪಾಸಣೆ ಪ್ರಾರಂಭವಾಗಿದೆ. ನಿನ್ನೆಯೂ ಚೆಕ್ ಪೋಸ್ಟ್ ಗಳಲ್ಲಿ ಆರ್ ಟಿಒ ವ್ಯಾಪಕ ತಪಾಸಣೆ ನಡೆಸಿದ್ದರು. ಹಲವೆಡೆ ವ್ಯಾಪಕ ಅವ್ಯವಹಾರ ನಡೆದಿರುವುದು ಕೂಡ ಕಂಡುಬಂದಿದೆ. ಅದರ ಫಲವಾಗಿ ಇಂದು ಮರು ಪರಿಶೀಲನೆ ನಡೆಸಲಾಗುತ್ತಿದೆ. ವಿಜಿಲೆನ್ಸ್ ಡಿವೈಎಸ್ಪಿ ನೇತೃತ್ವದ ತಂಡ ಆರ್ಯಂಕಾವು ಚೆಕ್ ಪೋಸ್ಟ್ ನಲ್ಲಿ ಪರಿಶೀಲನೆ ನಡೆಸುತ್ತಿದೆ. ಇಲ್ಲಿನ ಕಚೇರಿಯೊಳಗೆ ಹಣ, ತರಕಾರಿ ಪತ್ತೆಯಾಗಿದೆ.
ಹಣ ಎಷ್ಟು ಎಂಬುದು ಖಚಿತವಾಗಿಲ್ಲ. ಹಣ್ಣು-ತರಕಾರಿಗಳನ್ನು ಸಾಗಿಸುವ ಲಾರಿಗಳ ಚಾಲಕರು ಇವುಗಳನ್ನು ಕಚೇರಿಗೆ ತರುತ್ತಾರೆ. ಆದರೆ ಅದನ್ನು ಬೇಡ ಎನ್ನಲು ಅಧಿಕಾರಿಗಳು ಸಿದ್ಧರಿಲ್ಲ ಎಂಬುದು ವಿಜಿಲೆನ್ಸ್‌ನಿಂದ ತಿಳಿದುಬಂದಿದೆ. ಜತೆಗೆ, ಸಂಗ್ರಹಿಸಿದ ಮೊತ್ತಕ್ಕೂ ರಿಜಿಸ್ಟರ್ ನಲ್ಲಿ ದಾಖಲಾಗಿರುವ ಮೊತ್ತಕ್ಕೂ ವ್ಯತ್ಯಾಸ ಕಂಡುಬಂದಿದೆ. ಕಾಸರಗೋಡು ವ್ಯಾಪ್ತಿಯ ತಪಾಸಣಾ ವರದಿ ಇನ್ನಷ್ಟೇ ತಿಳಿದುಬರಬೇಕಿದೆ.




