HEALTH TIPS

ಫೆ. 13 ವಿಶ್ವ ರೇಡಿಯೋ ದಿನ: ಕಾಲ ಎಷ್ಟೇ ಬದಲಾದರೂ, ನಿನ್ನ ರೇಂಜು ಯಾರಿಗೂ ಇಲ್ಲ!

 'ಓಲ್ಡ್‌ ಈಸ್ ಗೋಲ್ಡ್‌' ಎಂಬ ಮಾತಿದೆ. ಈ ಮಾತಿಗೆ ರೇಡಿಯೋ ಸರಿಯಾದ ಉದಾಹರಣೆ. ಒಂದು ಕಾಲದಲ್ಲಿ ಜನರ ಜೀವನಾಡಿಯಾಗಿದ್ದ ರೇಡಿಯೋ, ಇಂದಿನ ಡಿಜಿಟಲ್ ಲೋಕದಲ್ಲಿ ಮರೆಯಾಗುತ್ತಿದ್ದರೂ, ಅದರ ಮಹತ್ವ ಮಾತ್ರ ಹಾಗೇ ಇದೆ. ಅಷ್ಟೇ ಅಲ್ಲ, ಇಂದಿಗೂ ವಿಶ್ವದಲ್ಲಿ ಅತೀ ಹೆಚ್ಚು ಬಳಕೆ ಮಾಡುತ್ತಿರುವ ಸಾಮೂಹಿಕ ಮಾಧ್ಯಮಗಳಲ್ಲಿ ರೇಡಿಯೋನೇ ಅಗ್ರಸ್ಥಾನದಲ್ಲಿದೆ.

ಅದೇ ಕಾರಣಕ್ಕೆ ಪ್ರತಿ ವರ್ಷ ಫೆಬ್ರವರಿ 13 ರಂದು ವಿಶ್ವ ರೇಡಿಯೋ ದಿನವನ್ನು ಜಾಗತಿಕವಾಗಿ ಆಚರಿಸಲಾಗುತ್ತದೆ. ಹೆಸರೇ ಸೂಚಿಸುವಂತೆ, ಈ ದಿನವು ರೇಡಿಯೋ ಬಳಕೆಗೆ ಜನರನ್ನು ಉತ್ತೇಜಿಸಲು ಮತ್ತು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದ್ದು, ಇನ್ನೊಂದು ಪ್ರಮುಖ ಭಾಗವೆಂದರೆ ರೇಡಿಯೊದ ಇತಿಹಾಸದ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ಅರಿವು ಮೂಡಿಸುವುದು.


ವಿಶ್ವ ರೇಡಿಯೋ ದಿನದ ಇತಿಹಾಸ:

2010ರಲ್ಲಿ ಸ್ಪೇನ್‌ನ ಸ್ಪ್ಯಾನಿಷ್ ರೇಡಿಯೋ ಅಕಾಡೆಮಿಯು ವಿಶ್ವ ರೇಡಿಯೋ ದಿನವನ್ನು ಆಚರಿಸುವ ಬೇಡಿಯಕೆಯನ್ನು ಯುನೆಸ್ಕೋದ ಮುಂದಿಟ್ಟಿತು. 2012 ರಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಇದನ್ನು ಅನುಮೋದಿಸಿತು. ಇದನ್ನು ಆಚರಿಸುವ ಸಂಪ್ರದಾಯ 2012ರ ಫೆಬ್ರವರಿ 13ರಿಂದ ಆರಂಭವಾಯಿತು. ಅಂದಿನಿಂದ ಇದು ಅಂತರರಾಷ್ಟ್ರೀಯ ದಿನದ ಸ್ಥಾನಮಾನವನ್ನು ಪಡೆದುಕೊಂಡಿದೆ. ಆದಾಗ್ಯೂ UNESCO ಸದಸ್ಯ ರಾಷ್ಟ್ರಗಳು 2011 ರಲ್ಲಿ ವಿಶ್ವ ರೇಡಿಯೋ ದಿನವನ್ನು ಘೋಷಿಸಿದವು. ಈ ವಿಶೇಷ ದಿನವನ್ನು ಗುರುತಿಸಲು ಪ್ರಪಂಚದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ, ರೇಡಿಯೊದ ಮಹತ್ವ ಮತ್ತು ಇತಿಹಾಸದ ತಿಳಿಸಲು ವಿಚಾರಗೋಷ್ಠಿಗಳು ಮತ್ತು ಚರ್ಚೆಗಳು ನಡೆಯುತ್ತವೆ.


ರೇಡಿಯೋ ದಿನದ ಪ್ರಾಮುಖ್ಯತೆ:

ಟಿವಿ ಅಥವಾ ದೂರದರ್ಶನದ ಆವಿಷ್ಕಾರದ ಮೊದಲು, ರೇಡಿಯೋ ಪ್ರಪಂಚದಾದ್ಯಂತ ಹೆಚ್ಚಿನ ಜನರ ಕೇಂದ್ರ ಆಕರ್ಷಣೆಯಾಗಿತ್ತು. ಇದು ಪಟ್ಟಣದಿಂದ ಹಳ್ಳಿಗಳವರೆಗೆ, ದೇಶದಿಂದ ಜಾಗತಿಕ ಮಟ್ಟಕ್ಕೆ ಸಂಪರ್ಕವನ್ನು ಮಾಡುವಂತಹ ಸಾಧನವಾಗಿದೆ. ಇದು ಜನರಿಗೆ ಪ್ರಸ್ತುತ ಸನ್ನಿವೇಶಗಳು, ಸುದ್ದಿಗಳು, ಕಥೆಗಳು, ಹಾಡುಗಳು ಮತ್ತು ಇತರ ಮನರಂಜನೆಯ ವಿಷಯಗಳು, ಶೈಕ್ಷಣಿಕ ಕಾರ್ಯಕ್ರಮಗಳು, ವೈದ್ಯಕೀಯ ಅರಿವು ಮತ್ತು ಎಲ್ಲವನ್ನೂ ಒದಗಿಸುತ್ತದೆ. ಇಷ್ಟು ಪ್ರಾಮುಖ್ಯತೆ ಪಡೆದಿರುವ ರೇಡಿಯೋ ಸದ್ಯ ತೆರೆಮರೆಗೆ ಸೇರುತ್ತಿದೆ ಎನ್ನುವುದು ದುರಾದೃಷ್ಟಕರ. ಇದರ ಬಳಕೆ ಕಡಿಮೆಯಾಗುತ್ತಿದ್ದರೂ, ಮಹತ್ವ ಇನ್ನೂ ಹಾಗೆಯೇ ಇದೆ. ಇದನ್ನು ಮತ್ತಷ್ಟು ಹೆಚ್ಚಿಸುವ ಹಾಗೂ ರೇಡಿಯೋದ ಪ್ರಾಮುಖ್ಯತೆಯನ್ನು ಮುಂದಿನ ಪೀಳಿಗೆಗೂ ಸಾರುವ ಉದ್ದೇಶದಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ.

ವಿಶ್ವ ರೇಡಿಯೋ ದಿನ 2022 ಥೀಮ್: ಈ ದಿನವನ್ನು ಪ್ರತಿ ವರ್ಷ ಫೆಬ್ರವರಿ 13, ನಿರ್ದಿಷ್ಟ ವಿಷಯವನ್ನು ಕೇಂದ್ರೀಕರಿಸಿ ಆಚರಣೆ ಮಾಡಲಾಗುವುದು. ಆದ್ದರಿಂದ 2022 ರ, ವಿಶ್ವ ರೇಡಿಯೊ ದಿನದ ಥೀಮ್, "ವಿಕಾಸ- ಪ್ರಪಂಚವು ಯಾವಾಗಲೂ ಬದಲಾಗುತ್ತಿದೆ" ಎಂಬುದಾಗಿದೆ. ಜೊತೆಗೆ ಈ ದಿನದಂದು, ರೇಡಿಯೊದಲ್ಲಿ ಪ್ರಸಾರವಾಗುವ ಆ ಕಾರ್ಯಕ್ರಮಗಳ ಸ್ಥಿರತೆ ಮತ್ತು ನಮ್ಯತೆಯ ಮೇಲೆ ಕೇಂದ್ರೀಕರಿಸಲಾಗುತ್ತದೆ.
ವಿಶ್ವ ರೇಡಿಯೋ ದಿನವನ್ನು ಹೇಗೆ ಆಚರಿಸಲಾಗುವುದು?: ಪ್ರತಿ ವರ್ಷ ಫೆಬ್ರವರಿ 13 ರಂದು, ಯುನೆಸ್ಕೋ ಪ್ರಪಂಚದಾದ್ಯಂತದ ವಿವಿಧ ಪ್ರಸಾರ ಮತ್ತು ಸಮುದಾಯಗಳ ಸಹಯೋಗದೊಂದಿಗೆ ವಿವಿಧ ರೀತಿಯ ಚಟುವಟಿಕೆಗಳನ್ನು ಆಯೋಜಿಸಿ, ರೇಡಿಯೊದ ಪ್ರಾಮುಖ್ಯತೆ ಮತ್ತು ಭವಿಷ್ಯದ ಅಭಿವೃದ್ಧಿಯ ಬಗ್ಗೆ ಚರ್ಚಿಸಲು ಮತ್ತು ಅನುಕೂಲಗಳ ಬಗ್ಗೆ ಅರಿವು ಮೂಡಿಸಲು ವ್ಯವಸ್ಥೆ ಮಾಡಿದೆ.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries