ಕಾಸರಗೋಡು: ಈವರೆಗೆ 145 ಕುಟುಂಬಗಳಿಗೆ ಲೈಫ್ ಯೋಜನೆಯಡಿ ಮನೆ ನೀಡಿ ಮಧೂರು ಗ್ರಾಮ ಪಂಚಾಯತಿ ಮಹತ್ತರ ಸಾಧನೆ ದಾಖಲಿಸಿದೆ.
ಪೂರ್ಣಗೊಂಡಿರುವ ಮನೆಗಳ ಕೀಲಿಕೈಗಳನ್ನು ಹಸ್ತಾಂತರಿಸಲಾಯಿತು. ಇಲ್ಲಿ ಒಟ್ಟು 145 ಕುಟುಂಬಗಳು ಸುರಕ್ಷಿತವಾಗಿ ಬದುಕು ಸವೆಸಲು ಯೋಜನೆ ಪ್ರಾಮಾನಿಕವಾಗಿ ನೆರವಾಗಿದೆ. ಪ್ರಸ್ತುತ, ಸ್ವೀಕರಿಸಿದ ಅರ್ಜಿಗಳಲ್ಲಿ 93 ಪ್ರತಿಶತವನ್ನು ಸಮೀಕ್ಷೆ ಮಾಡಲಾಗಿದೆ. ಪಂಚಾಯಿತಿಗೆ 1511 ಅರ್ಜಿಗಳು ಬಂದಿವೆ.




