ಪೆರ್ಲ: ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ 37ನೇ ವರ್ಷದ ಶಿವರಾತ್ರಿ ಭಜನಾ ಮಹೋತ್ಸವ ಮಾ. 1ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಲಿದೆ. ಸಂಜೆ 6.30ಕ್ಕೆ ದೇವಸ್ಥಾನದ ಮುಖ್ಯ ಅರ್ಚಕ ಪ್ರವೀಣ್ ಕುಮಾರ್ ಅಡಿಗ ಅವರು ದೀಪ ಪ್ರಜ್ವಲನ ನಡೆಸುವರು. ನಂತರ ವಿವಿಧ ಭಜನಾ ಮಂಡಳಿಗಳಿಂದ ಭಜನೆ ನಡೆಯುವುದು. ಮರುದಿನ ಸೂರ್ಯೋದಯಕ್ಕೆ ಸಾಮೂಹಿಕ ಭಜನೆಯೊಂದಿಗೆ ಮಹಾಮಂಗಳಾರತಿ ನಡೆಯುವುದು.




