HEALTH TIPS

6-8 ವಾರಗಳ ಕಾಲ ಎನ್ಇಇಟಿ ಪಿಜಿ 2022 ಮುಂದೂಡಿ: ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಆರೋಗ್ಯ ಸಚಿವಾಲಯ

          ನವದೆಹಲಿ: ಎನ್ಇಇಟಿ ಪಿಜಿ 2022 ನ್ನು 6-8 ವಾರಗಳ ಕಾಲ ಮುಂದೂಡಲು ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ ಬಿಇ) ಗೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. 

         ಎನ್ಇಇಟಿ ಪಿಜಿ 2021 ರ ಕೌನ್ಸಿಲಿಂಗ್ ಹಾಗೂ ಎನ್ ಇಇಟಿ ಪಿಜಿ-2022 ಏಕಕಾಲಕ್ಕೆ ಬರುವುದರಿಂದ ಅನಾನುಕೂಲವಾಗುತ್ತದೆ ಆದ್ದರಿಂದ ಮಾ.12 ರಂದು  ನಿಗದಿಯಾಗಿರುವ ನೀಟ್ ಪರೀಕ್ಷೆಯನ್ನು ಮುಂದೂಡಬೇಕೆಂದು ಎಂಬಿಬಿಎಸ್ ಪದವೀಧದರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.

          ವೈದ್ಯಕೀಯ ವಿಭಾಗದ ಸ್ನಾತಕೋತ್ತರ ಕೋರ್ಸ್ ಗಳಲ್ಲಿ  ಪ್ರವೇಶ ಪಡೆಯಲು ನಡೆಯುವ ರಾಷ್ಟ್ರೀಯ ಅರ್ಹತ ಹಾಗೂ ಪ್ರವೇಶ ಪರೀಕ್ಷೆ (ಎನ್ಇಇಟಿ) ಮಾ.12 ರಂದು ನಿಗದಿಯಾಗಿದ್ದು, ಹಲವು ಎಂಬಿಬಿಎಸ್ ಪದವೀಧರರು ತಮ್ಮ ಇಂಟರ್ನ್ಶಿಪ್ ಅವಧಿಯನ್ನು ಪೂರ್ಣಗೊಳಿಸಿಲ್ಲ. ಈ ಹಿನ್ನೆಲೆಯಲ್ಲಿ ಮಾ.12 ರ ಪರೀಕ್ಷೆಯನ್ನು ಬರೆಯುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು 6 ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.

           ವೈದ್ಯಕೀಯ ಕೌನ್ಸಿಲಿಂಗ್ ಸಮಿತಿಯ ಸದಸ್ಯರು ಹಾಗೂ ವೈದ್ಯಕೀಯ ಶಿಕ್ಷಣ ವಿಭಾಗದ ಸಹಾಯಕ ನಿರ್ದೇಶಕರಾದ ಡಾ. ಬಿ ಶ್ರೀನಿವಾಸ್ ಎನ್ ಬಿಇ ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಂ ಬಾಜಪೈ ಅವರಿಗೆ ಪತ್ರ ಬರೆದಿದ್ದು, ಎನ್ ಇಇಟಿ ಪಿಜಿ 2022 ಪರೀಕ್ಷೆ ಹಾಗೂ ಎನ್ಇಇಟಿ ಪಿಜಿ 2021 ಕೌನ್ಸಿಲಿಂಗ್ ಏಕಕಾಲದಲ್ಲಿ ಬರುತ್ತಿರುವುದರಿಂದ ಪರೀಕ್ಷೆಗಳನ್ನು ಮುಂದೂಡಬೇಕೆಂಬ ಮನವಿ ವೈದ್ಯರಿಂದ ಬರುತ್ತಿದೆ ಎಂದು ಹೇಳಿದ್ದರು. 

         ಮೇಲಿನ ವಾಸ್ತವಾಂಶಗಳನ್ನು ಪರಿಗಣಿಸಿ ಆರೋಗ್ಯ ಸಚಿವಾಲಯ ಎನ್ ಇಇಟಿ ಪಿಜಿ 2022 ನ್ನು 6-8 ವಾರಗಳ ಕಾಲ ಮುಂದೂಡಲು ಸೂಚಿಸಿದೆ. 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries