HEALTH TIPS

ಉಕ್ರೇನ್; ಆಪರೇಷನ್ ಗಂಗಾ, ಗಂಟೆಗೆ 7 ರಿಂದ 8 ಲಕ್ಷ ರೂ. ಖರ್ಚು!

              ನವದೆಹಲಿ; ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು 'ಆಪರೇಷನ್ ಗಂಗಾ' ಹೆಸರಿನಲ್ಲಿ ರಕ್ಷಣೆ ಮಾಡಿ ಕರೆತರಲಾಗುತ್ತಿದೆ. ಈ ಕಾರ್ಯಾಚರಣೆಗೆ ಗಂಟೆಗೆ ಸುಮಾರು 7 ರಿಂದ 8 ಲಕ್ಷ ರೂ. ಖರ್ಚಾಗುತ್ತಿದೆ. ವಿಮಾನ ವಿಳಂಬವಾದಂತೆ ಖರ್ಚು ಸಹ ಏರಿಕೆಯಾಗುತ್ತಲೇ ಹೋಗುತ್ತದೆ.

          ಭಾನುವಾರ 250 ಭಾರತೀಯರು ನವದೆಹಲಿಗೆ ಬಂದಿದ್ದಾರೆ. 240 ಜನರು ಇರುವ ವಿಮಾನ ಹೊರಟಿದ್ದು, ಅವರು ರಾತ್ರಿಯ ವೇಳೆ ಆಗಮಿಸಿದರು. ಎರಡು ಕಡೆಯ ವಿಮಾನ ಸಂಚಾರಕ್ಕೆ ಸುಮಾರು 1.10 ಕೋಟಿ ರೂ. ವೆಚ್ಚವಾಗುತ್ತಿದೆ.

            ರಕ್ಷಣಾ ಕಾರ್ಯಾಚರಣೆಗೆ ಬೋಯಿಂಗ್ 787 ಮಾದರಿ ವಿಮಾನವನ್ನು ಬಳಕೆ ಮಾಡುತ್ತಿದೆ. ಉಕ್ರೇನ್‌ನಿಂದ ಬಸ್‌ಗಳಲ್ಲಿ ರುಮೇನಿಯಾ, ಹಂಗೇರಿಯ ಬುಡಾಪೆಸ್ಟ್‌ಗೆ ಆಗಮಿಸಿದ ಭಾರತೀಯರನ್ನು ವಿಮಾನದ ಮೂಲಕ ಕರೆತರಲಾಗುತ್ತಿದೆ.
             ಈಗಾಗಲೇ ನೂರಾರು ಭಾರತೀಯರನ್ನು ವಾಪಸ್ ಕರೆತರಲಾಗಿದೆ. ಭಾರತ ಸರ್ಕಾರವೇ ಈ ವಿಶೇಷ ವಿಮಾನಗಳ ವೆಚ್ಚವನ್ನು ಭರಿಸುತ್ತಿದೆ. ವಿಮಾನ ಎಷ್ಟು ದೂರ ಹೋಗಲಿದೆ, ಎಷ್ಟು ಹೊತ್ತು ಹಾರಾಟ ನಡೆಸಲಿದೆ ಎಂಬುದರ ಮೇಲೆ ವೆಚ್ಚ ಏರಿಕೆಯಾಗುತ್ತಲೇ ಹೋಗುತ್ತದೆ.
           ವಿಮಾನಕ್ಕೆ ಇಂಧನ, ಸಿಬ್ಬಂದಿಗಳ ವೇತನ, ಲ್ಯಾಂಡಿಂಗ್, ಪಾರ್ಕಿಂಗ್ ಶುಲ್ಕಗಳು ಎಲ್ಲಾವೂ ಸೇರಿದಂತೆ ಗಂಟೆಗೆ 7 ರಿಂದ 8 ಲಕ್ಷ ರೂ. ವೆಚ್ಚವಾಗುತ್ತಿದೆ. ಅಲ್ಲದೇ ಈ ವಿಮಾನಗಳು ದೂರ ಪ್ರಯಾಣದ ವಿಮಾನವಾದ್ದರಿಂದ ಎರಡು ಶಿಫ್ಟ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಇರುತ್ತಾರೆ. ರುಮೇನಿಯಾದ ರಾಜಧಾನಿ ಬುಕಾರೆಸ್ಟ್ ಮತ್ತು ಹಂಗೇರಿಯ ಬುಡಾಪೆಸ್ಟ್‌ಗೆ ಆಫ್‌ಲೈನ್ ನಿಲ್ದಾಣಗಳಾಗಿವೆ. ಅಂದರೆ ಈ ನಿಲ್ದಾಣಗಳಿಂದ ನಿಗದಿತ ಸ್ಥಳಗಳಿಗೆ ಯಾವುದೇ ವಿಮಾನ ಹಾರಾಟಗಳಿಲ್ಲ. ತುರ್ತು ಸಂದರ್ಭಕ್ಕಾಗಿ ವಿಮಾನ ನಿಲ್ದಾಣ ಬಳಕೆ ಮಾಡಲಾಗುತ್ತಿದೆ. ಶನಿವಾರ ಬುಕಾರೆಸ್ಟ್‌ನಿಂದ ಹೊರಟ ವಿಶೇಷ ವಿಮಾನ ಶನಿವಾರ ರಾತ್ರಿ ಮುಂಬೈಗೆ ಆಗಮಿಸಿತ್ತು. ಇದಕ್ಕೂ ಮೊದಲು ವಿಮಾನ ಸುಮಾರು 6 ಗಂಟೆ ಸಂಚಾರ ನಡೆಸಿದೆ. ಬುಡಾಪೆಸ್ಟ್‌ನಿಂದ ದೆಹಲಿಗೆ ಆಗಮಿಸಿದ ವಿಮಾನ ಸಹ ಆರು ಗಂಟೆ ಹಾರಾಟ ನಡೆಸಿದೆ. ಕೆಲವು ವಿಮಾನ 5 ಗಂಟೆ, ಕೆಲವು ವಿಮಾನ 7 ಗಂಟೆ ಸಂಚಾರ ನಡೆಸಿವೆ.

            ವಿಶೇಷ ವಿಮಾನಗಳ ಸಂಚಾರಕ್ಕೆ ಪ್ರತಿ ಗಂಟೆಗೆ 7 ರಿಂದ 8 ಲಕ್ಷ ರೂಪಾಯಿಗಳವರೆಗೆ ವೆಚ್ಚವಾಗುವುದರಿಂದ, ಒಂದು ಸುತ್ತಿನ ಹಾರಾಟ ವೆಚ್ಚ ಸುಮಾರು 1.10 ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ. ವಿಮಾನದ ಒಟ್ಟಾರೆ ಸಂಚಾರ ಅವಧಿ ಸುಮಾರು 14 ಗಂಟೆಗಳು ಎಂಬ ಆಧಾರದ ಮೇಲೆ ವೆಚ್ಚ ಲೆಕ್ಕಹಾಕಲಾಗಿದೆ. ಸ್ಥಳಾಂತರ ಸಂದರ್ಭದಲ್ಲಿ ವಿಮಾನ ಪ್ರಯಾಣಕ್ಕೆ ಸರ್ಕಾರವು ಜನರಿಂದ ಶುಲ್ಕ ಸಂಗ್ರಹ ಮಾಡುವುದಿಲ್ಲ. ಆದರೆ ಕೆಲವು ರಾಜ್ಯ ಸರ್ಕಾರಗಳು ಉಕ್ರೇನ್‌ನಿಂದ ಹಿಂದಿರುಗುವ ತಮ್ಮ ರಾಜ್ಯಗಳ ಜನರ ವೆಚ್ಚವನ್ನು ಭರಿಸುವುದಾಗಿ ಹೇಳಿವೆ. ಏರ್ ಇಂಡಿಯಾ ರಕ್ಷಣಾ ಕಾರ್ಯಾಚರಣೆಗೆ ಬೋಯಿಂಗ್ 787 ಮಾದರಿ ವಿಮಾನವನ್ನು ಬಳಕೆ ಮಾಡಲಾಗುತ್ತಿದೆ. ಇದರಲ್ಲಿ 250 ಜನರು ಪ್ರಯಾಣಾ ಮಾಡಬಹುದಾಗಿದೆ. ಸಿಬ್ಬಂದಿಗಳ ಪ್ರಕಾರ ಈ ವಿಮಾನಗಳಿಗೆ ಗಂಟೆಗೆ 5 ಟನ್ ಇಂಧನದ ಅಗತ್ಯವಿದೆ. ಈ ಕಾರ್ಯಾಚರಣೆ ಮುಕ್ತಾಯಗೊಂಡ ಬಳಿಕ ಏರ್ ಇಂಡಿಯಾ ಸರ್ಕಾರಕ್ಕೆ ಬಿಲ್ ಕಳಿಸಲಿದೆ.

               ಫೆಬ್ರವರಿ 24ರಂದು ವಿದೇಶಾಂಗ ಕಾರ್ಯದರ್ಶಿಗಳು ಉಕ್ರೇನ್‌ನಲ್ಲಿ ಸುಮಾರು 16 ಸಾವಿರ ಭಾರತೀಯರು ಇದ್ದಾರೆ ಎಂದು ಹೇಳಿದ್ದರು. 900 ಜನರು ಈಗಾಗಲೇ ವಾಪಸ್ ಬಂದಿದ್ದಾರೆ. ಉಕ್ರೇನ್ ಮತ್ತು ಅದರ ಗಡಿ ಭಾಗದಲ್ಲಿ ಸುಮಾರು 15 ಸಾವಿರ ಜನರು ಇದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ ಉಕ್ರೇನ್ ವಾಯುನೆಲೆಯನ್ನು ನಾಗರಿಕ ವಿಮಾನಗಳಿಗೆ ಬಂದ್ ಮಾಡಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries