HEALTH TIPS

ತಮಿಳುನಾಡು: ಶೇ 97ರಷ್ಟು ರೋಗಿಗಳಲ್ಲಿ ಓಮೈಕ್ರಾನ್‌ ಸೋಂಕು

           ಚೆನ್ನೈತಮಿಳುನಾಡಿನಲ್ಲಿ ಜನವರಿ 1ರಿಂದ ಫೆಬ್ರುವರಿ 8 ವರೆಗೆ ನಡೆಸಿರುವ ಸಮೀಕ್ಷೆ ಪ್ರಕಾರ, ಕೋವಿಡ್‌-19 ರೋಗಿಗಳ ಪೈಕಿ ಶೇ 97ರಷ್ಟು ಜನರಲ್ಲಿ ರೂಪಾಂತರ ತಳಿ ಓಮೈಕ್ರಾನ್‌ನ ಸೋಂಕು ಇರುವುದು ಕಂಡುಬಂದಿದೆ.

            ರಾಜ್ಯದಲ್ಲಿ ಓಮೈಕ್ರಾನ್‌ ತಳಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ.

ಕಳೆದ ವರ್ಷ ಡಿಸೆಂಬರ್ ಮೊದಲ ವಾರದಲ್ಲಿ ಈ ತಳಿಯ ಸೋಂಕಿನ ಪ್ರಕರಣಗಳು ಇರಲಿಲ್ಲ. ಆದರೆ, ಜನವರಿ ಕೊನೆ ವಾರದ ವೇಳೆ ಈ ತಳಿ ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಶೇ 97ರಷ್ಟು ಹೆಚ್ಚಳ ಕಂಡುಬಂದಿದೆ ಎಂದು ಇದೇ ಸಮೀಕ್ಷೆ ಹೇಳುತ್ತದೆ.

               ರಾಜ್ಯದಲ್ಲಿ ವರದಿಯಾದ ಪ್ರಕರಣಗಳ ಪೈಕಿ, ಕಳೆದ ಡಿಸೆಂಬರ್ 14ರ ವೇಳೆಗೆ ಓಮೈಕ್ರಾನ್‌ ತಳಿ ಸೋಂಕಿನ ಪ್ರಕರಣಗಳ ಪ್ರಮಾಣ ಶೇ 13 ಇತ್ತು. ಡಿಸೆಂಬರ್‌ 21ರ ಹೊತ್ತಿಗೆ ಈ ಪ್ರಮಾಣ ಶೇ 18ಕ್ಕೆ ಏರಿ, ನಾಲ್ಕು ದಿನಗಳ ನಂತರ ಭಾರಿ ಹೆಚ್ಚಳವಾಗಿ ಶೇ 63ಕ್ಕೆ ಏರಿಕೆಯಾಯಿತು. ಡಿಸೆಂಬರ್ 28ಕ್ಕೆ ಈ ಸೋಂಕಿನ ಪ್ರಕರಣಗಳ ಪ್ರಮಾಣ ಶೇ 51ಕ್ಕೆ ಇಳಿಕೆಯಾಯಿತು ಎಂದು ಇದೇ ಸಮೀಕ್ಷೆ ಹೇಳುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries