HEALTH TIPS

ಬೆಂಕಿ ಹೊತ್ತಿಕೊಂಡ ಲಾರಿಯನ್ನು ಚಲಾಯಿಸಿ ದೊಡ್ಡ ದುರಂತ ತಪ್ಪಿಸಿದ ಕೇರಳದ ಸಾಹಸಿ; ವೀಡಿಯೊ ವೈರಲ್

             ಕೊಚ್ಚಿ: ವ್ಯಕ್ತಿಯೊಬ್ಬರ ಸಮಯ ಪ್ರಜ್ಞೆಯಿಂದಾಗಿ ಕೇರಳದ ಕೊಡಂಚೇರಿ ಪಟ್ಟಣದಲ್ಲಿ ದೊಡ್ಡ ದುರಂತವೊಂದು ತಪ್ಪಿದೆ. ರವಿವಾರದಂದು ಭತ್ತದ ಹುಲ್ಲು ತುಂಬಿದ್ದ ಲಾರಿಗೆ ಓವರ್‌ಹೆಡ್ ವಿದ್ಯುತ್ ತಂತಿ ತಗಲಿದ ನಂತರ ಬೆಂಕಿ ಹೊತ್ತಿಕೊಂಡಿತ್ತು.

            ಲಾರಿಯ ಚಾಲಕ ತನ್ನ ವಾಹನವು ಬೆಂಕಿಯಲ್ಲಿ ಉರಿದುಹೋಗುತ್ತದೆ ಎಂದು ಖಚಿತವಾಗಿ ಅಸಹಾಯಕನಾಗಿ ನಿಂತಿದ್ದ. ಆಗ ಆಪತ್ಬಾಂಧವನಂತೆ ಬಂದ ವ್ಯಕ್ತಿಯೊಬ್ಬ ಲಾರಿಯನ್ನು ಉಳಿಸಲು ಹಾಗೂ ದೊಡ್ಡ ದುರಂತವನ್ನು ತಪ್ಪಿಸಲು ಕಾರ್ಯಪ್ರವೃತ್ತನಾಗಿದ್ದ ಎಂದು Manorama Online ವರದಿ ಮಾಡಿದೆ.

           ರವಿವಾರ ಮಧ್ಯಾಹ್ನ 12.30ರ ಸುಮಾರಿಗೆ ಲಾರಿ ಚಾಲಕ ತನ್ನ ವಾಹನದಿಂದ ಜಿಗಿದಾಗ ಶಾಜಿ ವರ್ಗೀಸ್ ಎಂಬುವವರು ಆಗಮಿಸಿದರು. ವರ್ಗೀಸ್ ಆ ಪ್ರದೇಶವನ್ನು ಹಾಗೂ ಅಲ್ಲಿನ ನಿವಾಸಿಗಳನ್ನು ಸಂಭವನೀಯ ಸ್ಫೋಟದಿಂದ ರಕ್ಷಿಸುವ ಪ್ರಯತ್ನಕ್ಕೆ ಕೈಹಾಕಿದರು. ಬೆಂಕಿಯಿಂದ ಉರಿಯುತ್ತಿದ್ದ ಲಾರಿಯನ್ನು ಏರಿದ ವರ್ಗೀಸ್ ಖಾಲಿ ಆಟದ ಮೈದಾನದತ್ತ ಅದನ್ನು ಓಡಿಸಿದರು. ಉರಿಯುತ್ತಿರುವ ವಾಹನವನ್ನೂ ಉಳಿಸುವಲ್ಲಿ ಯಶಸ್ವಿಯಾದರು.

          ಸಾಧ್ಯವಾದಷ್ಟು ಹೆಚ್ಚು ಸುಡುವ ಲೋಡ್ ಅನ್ನು ಆಫ್‌ಲೋಡ್ ಮಾಡಲು ಲಾರಿಯನ್ನು 'ಜಿಗ್‌ಜಾಗ್' ರೀತಿಯಲ್ಲಿ ಓಡಿಸಿದ್ದ ವರ್ಗೀಸ್, ಇತರ ಸ್ವಯಂಸೇವಕರೊಂದಿಗೆ ವಾಹನವು ಸುಟ್ಟುಹೋಗದಂತೆ ತಡೆಯುವಲ್ಲಿ ಯಶಸ್ವಿಯಾದರು ಮತ್ತು ಅಗ್ನಿಶಾಮಕ ದಳದವರ ಆಗಮನದವರೆಗೆ ಪರಿಸ್ಥಿತಿಯನ್ನು ಸುರಕ್ಷಿತವಾಗಿ ನಿರ್ವಹಿಸಿದರು ಎಂದು The Hindu ವರದಿ ಮಾಡಿದೆ.

ವರ್ಗೀಸ್ ಅವರ ಧೈರ್ಯಶಾಲಿ ದೃಶ್ಯದ ತುಣುಕನ್ನು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

            "ನಾನು 25 ವರ್ಷಗಳಿಂದ ಹೆವಿ ಡ್ಯೂಟಿ ಮೋಟಾರು ಚಾಲಕನಾಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಹಳ್ಳಿ ಮತ್ತು ವಿದೇಶಗಳಲ್ಲಿ ಇದೇ ರೀತಿಯ ಅಪಾಯಕಾರಿ ಸನ್ನಿವೇಶಗಳನ್ನು ನಿಭಾಯಿಸುವಲ್ಲಿ ನನ್ನ ಹಿಂದಿನ ಅನುಭವಗಳು ಈ ಸವಾಲನ್ನು ಎದುರಿಸಲು ನನಗೆ ಸಹಾಯ ಮಾಡಿದೆ ಎಂದು ನಾನು ಭಾವಿಸುತ್ತೇನೆ'' " ಎಂದು ವರ್ಗೀಸ್ ಹೇಳಿದ್ದಾರೆ ಎಂದು ಏಷ್ಯಾನೆಟ್ ನ್ಯೂಸ್ ವರದಿ ಮಾಡಿದೆ.

ಬೆಂಕಿ ಹೊತ್ತಿದ್ದ ಲಾರಿಯನ್ನು ಚಲಾಯಿಸಿದ್ದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದರಿಂದ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಿಗೆ ನನ್ನನ್ನು ಆಹ್ವಾನಿಸಲಾಗಿದೆ ಹಾಗೂ ಸ್ನೇಹಿತರು ಮತ್ತು ಕುಟುಂಬದಿಂದ ಮೆಚ್ಚುಗೆಯ ಕರೆಗಳನ್ನು ಸ್ವೀಕರಿಸಿದ್ದೇನೆ ಎಂದು 45 ವರ್ಷದ ವರ್ಗೀಸ್ ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries