ನವದೆಹಲಿ: 2014ರ ಅಕ್ಟೋಬರ್ 3ರಂದು ಆರಂಭವಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸಂಚಲನವನ್ನೇ ಸೃಷ್ಟಿಸಿದೆ. ಇದುವರೆಗೆ ಯಾವುದೇ ದೇಶದ ಪ್ರಧಾನಿ ಮಾಡದಂಥ ಒಂದು ಕಾರ್ಯವನ್ನು ಪ್ರಧಾನಿ ಮೋದಿ ರೆಡಿಯೋ ಮೂಲಕ ಆರಂಭಿಸಿದ್ದಾರೆ.
0
samarasasudhi
ಫೆಬ್ರವರಿ 14, 2022
ನವದೆಹಲಿ: 2014ರ ಅಕ್ಟೋಬರ್ 3ರಂದು ಆರಂಭವಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸಂಚಲನವನ್ನೇ ಸೃಷ್ಟಿಸಿದೆ. ಇದುವರೆಗೆ ಯಾವುದೇ ದೇಶದ ಪ್ರಧಾನಿ ಮಾಡದಂಥ ಒಂದು ಕಾರ್ಯವನ್ನು ಪ್ರಧಾನಿ ಮೋದಿ ರೆಡಿಯೋ ಮೂಲಕ ಆರಂಭಿಸಿದ್ದಾರೆ.
ಇದಾಗಲೇ ಹಲವಾರು ವಿಷಯಗಳ ಕುರಿತು ಪ್ರಧಾನಿ ಮಾತನಾಡಿದ್ದಾರೆ. ಪ್ರಧಾನಿಯವರು ಈ ಕಾರ್ಯಕ್ರಮದಲ್ಲಿ ಇಂಥದ್ದೊಂದು ವಿಷಯದ ಬಗ್ಗೆ ಮಾತನಾಡಿದರೆ ಚೆನ್ನಾಗಿತ್ತು ಎಂದು ಹಲವರು ಅಂದುಕೊಳ್ಳುವುದು ಉಂಟು. ಆದರೆ ತಮ್ಮ ಅನಿಸಿಕೆಯನ್ನು ಪ್ರಧಾನಿಯವರೆಗೆ ತಲುಪಿಸುವ ದಾರಿ ತಿಳಿದಿರಲಿಲ್ಲ. ಅಂಥವರಿಗೆ ಇದೀಗ ಒಂದೊಳ್ಳೆ ಅವಕಾಶವನ್ನು ಪ್ರಧಾನಿ ನರೇಂದ್ರ ಮೋದಿ ಕಲ್ಪಿಸಿದ್ದಾರೆ.
ಫೆಬ್ರವರಿ 27 ರಂದು ನಡೆಯಲಿರುವ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ದೇಶದ ಜನರಿಂದ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಆಹ್ವಾನಿಸಿದ್ದಾರೆ. ಈ ಸಂಬಂಧ ಪ್ರಧಾನಿ ಕಾರ್ಯಾಲಯದಿಂದ ಟ್ವೀಟ್ ಮಾಡಲಾಗಿದೆ. ಈ ತಿಂಗಳ ಮನ್ ಕೀ ಬಾತ್ ಕಾರ್ಯಕ್ರಮವು ಫೆ, 27 ರಂದು ನಡೆಯಲಿದೆ. ಅದರಲ್ಲಿ ನೀವು ಏನಾದರೂ ಸಲಹೆ, ಅಭಿಪ್ರಾಯ ಸೂಚನೆ ಕೊಡಲು ಇಚ್ಛಿಸಿದರೆ ಅದನ್ನು ನೀಡಲು ಅವಕಾಶ ನೀಡಲಾಗಿದೆ.
MyGov, NaMo ಆಯಪ್‌ನಲ್ಲಿ ನಿಮ್ಮ ಸಲಹೆ ಬರೆಯಬಹುದು ಅಥವಾ 1800-11-7800 ಅನ್ನು ಡಯಲ್ ಮಾಡಿ ಮತ್ತು ಸಂದೇಶವನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ರೆಕಾರ್ಡ್ ಮಾಡಬಹುದು ಇಲ್ಲವೇ 1922ಗೆ ಮಿಸ್ ಕಾಲ್ ಕೊಡಬೇಕು. ನಿಮಗೊಂದು ಎಸ್‌ಎಂಎಸ್ ಬರುತ್ತದೆ. ಅಲ್ಲಿ ಬರುವ ಲಿಂಕ್ ಓಪನ್ ಮಾಡಿ ಅಲ್ಲಿ ತಿಳಿಸಿರುವ ಸಲಹೆಯನ್ನು ಫಾಲೋ ಮಾಡುತ್ತಾ ಹೋಗಬಹುದು. ಫೆ. 24ರವರೆಗೆ ಈ ಅವಕಾಶವಿದೆ.