ನವದೆಹಲಿ: ಭಾರತದಿಂದ ಸುಮಾರು 20 ವರ್ಷಗಳ ಹಿಂದೆ ಕಳುವಾಗಿದ್ದ ಬುದ್ಧನ ಮೂರ್ತಿಯು ಇಟಲಿಯಲ್ಲಿ ಪತ್ತೆಯಾಗಿದೆ. ಸುಮಾರು ಸುಮಾರು 1,200 ವರ್ಷಗಳಷ್ಟು ಪುರಾತನವಾಗಿರುವ 'ಅವಲೋಕಿತೇಶ್ವರ ಪದ್ಮಪಾಣಿ' ವಿಗ್ರಹ ಇದಾಗಿದೆ.
0
samarasasudhi
ಫೆಬ್ರವರಿ 14, 2022
ನವದೆಹಲಿ: ಭಾರತದಿಂದ ಸುಮಾರು 20 ವರ್ಷಗಳ ಹಿಂದೆ ಕಳುವಾಗಿದ್ದ ಬುದ್ಧನ ಮೂರ್ತಿಯು ಇಟಲಿಯಲ್ಲಿ ಪತ್ತೆಯಾಗಿದೆ. ಸುಮಾರು ಸುಮಾರು 1,200 ವರ್ಷಗಳಷ್ಟು ಪುರಾತನವಾಗಿರುವ 'ಅವಲೋಕಿತೇಶ್ವರ ಪದ್ಮಪಾಣಿ' ವಿಗ್ರಹ ಇದಾಗಿದೆ.
ಈ ಕುರಿತು ಭಾರತೀಯ ದೂತವಾಸ ಕೇಂದ್ರ ಮಾಹಿತಿ ನೀಡಿದೆ.
ಇದು ಕಲ್ಲಿನ ವಿಗ್ರಹವಾಗಿದ್ದು 8ರಿಂದ 12ನೇ ಶತಮಾನಕ್ಕಿಂತ ಹೆಚ್ಚು ಹಳೆಯದು ಎಂದು ಅಂದಾಜು ಮಾಡಲಾಗಿದೆ. ಕುಂದಲಪುರ ದೇವಾಲಯದಲ್ಲಿ ಸುಮಾರು 1,200 ವರ್ಷಗಳ ಕಾಲ ವಿಗ್ರಹ ಇತ್ತು, 2000ನೇ ಇಸವಿಯಲ್ಲಿ ಭಾರತದಿಂದ ಅಕ್ರಮವಾಗಿ ಕದ್ದು ಕಳ್ಳಸಾಗಾಟ ಮಾಡಲಾಗಿತ್ತು.
100 ವರ್ಷಗಳ ಹಿಂದೆ ವಾರಣಾಸಿಯಿಂದ ಕದ್ದು ಕೆನಡಾಗೆ ಕೊಂಡೊಯ್ಯಲಾಗಿದ್ದ ಅನ್ನಪೂರ್ಣ ದೇವಿಯ ವಿಗ್ರಹವನ್ನು ಕಳೆದ ತಿಂಗಳಷ್ಟೇ ಉತ್ತರ ಪ್ರದೇಶ ಸರ್ಕಾರ ವಾಪಸ್ ಪಡೆದುಕೊಂಡಿತ್ತು.