ಕೊಚ್ಚಿ: ಹೊಟೇಲ್ ಮಾಲೀಕರೊಬ್ಬರನ್ನು ಹನಿ ಟ್ರ್ಯಾಪ್ ನಲ್ಲಿ ಸಿಲುಕಿಸುವ ಯತ್ನ ನಡೆದಿದೆ. ಘಟನೆಯಲ್ಲಿ ಪೋರ್ಟ್ ಕೊಚ್ಚಿ ನಿವಾಸಿ ರಿನ್ಸಿನಾ ಬಂಧಿತ ಆರೋಪಿ. ಹೋಟೆಲ್ ಮಾಲೀಕರು ನೀಡಿದ ದೂರಿನ ಮೇರೆಗೆ ಬಂಧಿಸಲಾಗಿದೆ.
ಆಸ್ಪತ್ರೆಯ ಕೋಣೆಗೆ ಕರೆಸಿ ಆಕೆ ಮತ್ತು ಆಕೆಯ ಸ್ನೇಹಿತ ಮತ್ತಂಚೇರಿಯ ಹೋಟೆಲ್ ಮಾಲೀಕರನ್ನು ಬಲೆಗೆ ಬೀಳಿಸಲು ಪ್ರಯತ್ನಿಸಿದರು. ಹೋಟೆಲ್‍ನಲ್ಲಿ ಊಟ ಮಾಡಿದ ನಂತರ ತನಗೆ ಅಸ್ವಸ್ಥತೆ ಉಂಟಾಗಿದೆ ಎಂದು ಕರೆ ಮಾಡಿ ತಿಳಿಸಿದ್ದಳು.
ಮಹಿಳೆಯ ಸೂಚನೆ ಮೇರೆಗೆ ಹೋಟೆಲ್ ಮಾಲೀಕರು ಸ್ನೇಹಿತನೊಂದಿಗೆ ಆಸ್ಪತ್ರೆಗೆ ಧಾವಿಸಿದರು. ರಿನ್ಸಿನಾ ಮತ್ತು ಆಕೆಯ ಗೆಳೆಯ ಹೋಟೆಲ್ ಮಾಲೀಕರು ಕೋಣೆಗೆ ಪ್ರವೇಶಿಸುವುದನ್ನು ತನ್ನ ಮೊಬೈಲ್ ಫೆÇೀನ್‍ನಲ್ಲಿ ಚಿತ್ರೀಕರಿಸಿದರು. ಹಣ ನೀಡದಿದ್ದರೆ ಚಿತ್ರಗಳನ್ನು ಬಿಡುಗಡೆ ಮಾಡುವುದಾಗಿ ರಿನ್ಸಿನಾ ಬೆದರಿಕೆ ಹಾಕಿದಳು.
ಇದರಿಂದ ಭಯಗೊಂಡ ಹೊಟೇಲ್ ಮಾಲೀಕನನ್ನು ರಿನ್ಸಿನಾಳ ಗೆಳೆಯ ಹಾಗೀ ಇತರ ಸಹಚರರು ಥಳಿಸಿ ಪರ್ಸ್ ನಲ್ಲಿದ್ದ ಹಣ ಹಾಗೂ ಗುರುತುಪತ್ರವನ್ನು ದೋಚಿದರು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು. ಆದರೆ, ನಂತರ ರಿನ್ಸಿನಾ ಹಣ ಕೇಳುತ್ತಿರುವ ಬಗ್ಗೆ ಹೋಟೆಲ್ ಮಾಲೀಕರು ಪೋಲೀಸರಿಗೆ ದೂರು ನೀಡಿದರು.
ಕಳೆದ ತಿಂಗಳು ರಿನ್ಸಿ ಯುವಕನೋರ್ವನ್ನು ಹನಿ ಟ್ರ್ಯಾಪ್ ರೀತಿಯಲ್ಲಿ ಬಲೆಗೆ ಬೀಳಿಸಲು ಪ್ರಯತ್ನಿಸಿದ್ದಳು. ಗರ್ಭಿಣಿ ಎಂಬ ನೆಪದಲ್ಲಿ ಈ ವಂಚನೆ ನಡೆದಿದೆ. ಈ ಸಂಬಂಧ ಎರಡು ಪ್ರಕರಣಗಳು ದಾಖಲಾಗಿವೆ.




