HEALTH TIPS

ಬಂಗ್ರಮಂಜೇಶ್ವರ ಶ್ರೀಕಾಳಿಕಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭ: ಇಂದು ಜಗದ್ಗುರು ಆನೆಗುಂದಿ ಶ್ರೀಗಳ ಆಗಮನ

                                                      

             ಮಂಜೇಶ್ವರ: ವಿಶ್ವ ಬ್ರಾಹ್ಮಣ ಸಮುದಾಯದ ಅತ್ಯಂತ ಪ್ರಸಿದ್ದ ದೇವಸ್ಥಾನವಾದ ಬಂಗ್ರಮಂಜೇಶ್ವರ ಶ್ರೀಕಾಳಿಕಾಪರಮೇಶ್ವರಿ ದೇವಾಲಯದ ಬ್ರಹ್ಮಕಲಶೋತ್ಸವ ವಿಧಿವಿಧಾನಗಳು ಗುರುವಾರ ಆರಂಭಗೊಂಡಿದ್ದು 20ರ ವರೆಗೆ ನಡೆಯಲಿದೆ.

                ಕಾರ್ಯಕ್ರಮದ ಅಂಗವಾಗಿ ಬುಧವಾರ ಸಂಜೆ ಶ್ರೀರಕ್ಷೆಗೆ ಮಣ್ಯಾಹ ಸಂಕಲ್ಪ, ರಾತ್ರಿ ಲಕ್ಷ್ಮೀನೃಸಿಂಹ ಸುದರ್ಶನ ಮಹಾಶಾಂತಿ, ಅಘೋರಾಸ್ತ್ರ ಹವನ, ಪೂಜೆ ಪೂರ್ಣಾಹುತಿ ನಡೆಯಿತು. ಗುರುವಾರ ಪೂರ್ವಾಹ್ನ ತಂತ್ರಿಗಳ ಹಾಗೂ ಋತ್ವಿಜರ ಆಗಮನ, ಸ್ವಾಗತ, ಫಲನ್ಯಾಸ ಪೂರ್ವಕ ದೇವತಾ ಪ್ರಾರ್ಥನೆ, ತೋರಣ ಮಹೂರ್ತ, ತಂತಿ ವರಣ- ಆಚಾರ್ಯ ವರಣ, ಮಹಾ ಸಂಕಲ್ಪ, ಗುರುಗಣೇಶ ಪೂಜೆ,  ಸ್ವಸ್ತಿ ಪುಣ್ಯಾಹ ವಾಚನ, ಆದ್ಯಗಣ ಹೋಮ, ಬ್ರಹ್ಮಕೂರ್ಚ ಹೋಮ, ತಂಬಿಲ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸಂಜೆ ಉಗ್ರಾಣ ಪೂಜೆ, ಹಸಿರುವಾಣಿ,  ದಿನಾ ಹೋಮ, ವಸಂತ ಮಂಟಪ ಪ್ರಾಕಾರ ಶುದ್ಧಿ, ರಾಕ್ಷೋಘ್ನ, ಶ್ರೀ ವಾಸ್ತುಬಲಿ, ಕೌತುಕ ಬಂಧನ, ಅಂಕುರಾರ್ಪಣೆ, ಪಾರಾಯಣ, ರಾತ್ರಿ ಮಹಾಪೂಜೆ ನಡೆಯಿತು. 


                 ಅಪರಾಹ್ನ 3.30ಕ್ಕೆ  ಮಂಜೇಶ್ವರ ಶ್ರೀ ಮದನಂತೇಶ್ವರ ಕ್ಷೇತ್ರದಿಂದ ಹೊರಟು, ಮಂಜೇಶ್ವರ ಪೇಟೆ ಅಯ್ಯಪ್ಪ ಮಂದಿರ ದಾರಿಯಾಗಿ ಶ್ರೀ ಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಸನ್ನಿ|ಧಿಗೆ ಆಗಮಿಸಿತು.  ಸಂಜೆ 6.30 ರಿಂದ ಭರತನಾಟ್ಯ ಗುರುಗಳಾದ ಬಾಲಕೃಷ್ಣ ಮಂಜೇಶ್ವರ ಶಿಷ್ಯವೃಂದದವರಿಂದ ನಾಟ್ಯ ವೈಭವ ನಡೆಯಿತು.   

              ಇಂದು ಪೂರ್ವಾಹ್ನ 9 ರಿಂದ 11ರ ವರೆಗೆ ಭಜನಾ ಸಂಕೀರ್ತನ ಸೇವೆ ನಡೆಯಲಿದೆ. 10 ಕ್ಕೆ ಪರಮಪೂಜ್ಯ ಜಗದ್ಗುರುಗಳವರಿಗೆ ಪೂರ್ಣಕುಂಭ ಸ್ವಾಗತ ನಡೆಯಲಿದೆ. ವೈದಿಕ ಕಾರ್ಯಕ್ರಮಗಳ ಭಾಗವಾಗಿ ಪೂರ್ವಾಹ್ನ ಪವಮಾನ ಶಾಂತಿ, ಭೂವರಾಹ ಯಜ್ಞ, ರುದ್ರ ಹೋಮ, ಪೂಜೆ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ,  ಸಂತರ್ಪಣೆ, ಗೋಪೂಜೆ, ಗೋಗ್ರಾಸ, ಸಂಜೆ ಮಂಟಪ ಸಂಸ್ಕಾರ, ಪಂಚದುರ್ಗಾಪರಮೇಶ್ವರಿ ದೀಪ ಸ್ಥಾಪನಾ ಪೂರ್ವಕ  ಯಂತ್ರೋದ್ಧಾರ, ನಮಸ್ಕಾರ,  ಶ್ರೀ ಕಾಳಿಕಾ ದಶಸಹಸ್ರನಾಮಾರ್ಚನೆ, ಸಪ್ತಶತೀ ಪಾರಾಯಣ, ಪೂಜೆ, ರಾತ್ರಿ  ಮಹಾಪೂಜೆ ನಡೆಯಲಿದೆ.


          ಅಪರಾಹ್ನ 3 ಕ್ಕೆ ಧಾರ್ಮಿಕ ಸಭೆ ನಡೆಯಲಿದ್ದು ಆನೆಗುಂದಿ ಶ್ರೀಗಳು ದೀಪ ಪ್ರಜ್ವಲನೆಗೈದು ಆಶೀರ್ವಚನ ನೀಡುವರು. ಶ್ರೀಕಾಳಿಕಾಪರಮೇಶವರಿ ವಿಶ್ವಕರ್ಮ ಸಮಾಜ ಸಭಾದ ಅಧ್ಯಕ್ಷ ಪೋಳ್ಯ ಎಂ.ಉಮೇಶ ಆಚಾರ್ಯ ಅಧ್ಯಕ್ಷತೆ ವಹಿಸುವರು. ಶ್ರೀಕ್ಷೇತ್ರದ ತಂತ್ರಿವರ್ಯ ಕೆ.ಉಮೇಶ ತಂತ್ರಿ, ಬಡಾಜೆಬೂಡು ಗೋಪಾಲಕೃಷ್ಣ ತಂತ್ರಿ ಉಪಸ್ಥಿತರಿರುವರು.  ಶಂಕರಾಚಾರ್ಯ ಕಡ್ಲಾಸ್ಕರ್ ಹುಬ್ಬಳ್ಳಿ ಧಾರ್ಮಿಕ ಉಪನ್ಯಾಸ ನೀಡುವರು. 

                ಜನಾರ್ಧನ ಆಚಾರ್ಯ ಕುಂಬಳೆ, ವಡೇರಹೋಬಳಿ ಶ್ರೀಧರ ಆಚಾರ್ಯ, ಕೆ.ಕೇಶವ ಆಚಾರ್ಯ, ಎನ್.ಪರಮೇಶ್ವರ ಆಚಾರ್ಯ ನೀರ್ಚಾಲು, ನ್ಯಾಯವಾದಿ ರಾಜೇಶ್ ಆಚಾರ್ಯ ತಾಳಿಪಡ್ಪು, ಸುಂದರ ಆಚಾರ್ಯ ಕೋಟೆಕಾರು, ರಾಘವ ಆಚಾರ್ಯ ಪುತ್ತೂರು ಉಪಸ್ಥಿತರಿರುವರು. ರಾಜ ಬೆಳ್ಚಡ ಮಾಡ, ಪೋಲೀಸ್ ಕಮಿಷನರ್ ಎನ್.ಶಶಿಕುಮಾರ್, ಛತ್ರಪತಿ ಪ್ರಭು, ಶಂಕರನಾರಾಯಣ ಹೊಳ್ಳ, ಕಾಕುಂಜೆ ಬಲರಾಮ ಭಟ್, ಪದ್ಮನಾಭ ಕಡಪ್ಪರ, ಭಾಸ್ಕರ ಶೆಟ್ಟಿಗಾರ ಉದ್ಯಾವರ, ನಾರಾಯಣ, ಚಂದ್ರಹಾಸ ಗುರಿಕ್ಕಾರ್, ತುಕರಾಮ ಕುಂಬಳೆ, ಗೋಪಾಲ ಶೆಟ್ಟಿ ಅರಿಬೈಲು, ಹರೀಶ್ ಶೆಟ್ಟಿ ಮಾಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ಈ ಸಂದರ್ಭ ಕೋಟೆಮನೆ ವೆಂಕಟರಮಣ ಆಚಾರ್ಯ, ಪೋಳ್ಯ ಸೀತಾರಾಮ ಆಚಾರ್ಯ, ಭರತ್ ರಾಜ್ ಆಚಾರ್ಯ ಕೊಂಡೆವೂರು, ಪೂರ್ಣಿಮ ಯೋಗೇಂದ್ರ ಆಚಾರ್ಯ ಬೊಳ್ಳಾರು, ವಿಲಾಸ್ ಮತ್ತು ಗಣೇಶ್ ಆಚಾರ್ಯ ಗುಡ್ಡೆಮನೆ ಅವರನ್ನು ಗೌರವಿಸಲಾಗುವುದು. 

    ರಾತ್ರಿ 830 ರಿಂದ ಕಟೀಲ್ದಪ್ಪೆ ಭಕ್ತೆರ್ ಹೊಸಂಗಡಿ ಪ್ರಾಯೋಜಕತ್ವದಲ್ಲಿ ಕಟೀಲು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries