ನವದೆಹಲಿ: ದೇಶಕ್ಕಾಗಿ ಪ್ರಾಣ ಕೊಡುವುದು ಎಂದರೆ ಸಾಮಾನ್ಯ ಜನರ ಕೈಯಲ್ಲಿ ಆಗದ ಮಾತು. ದೇಹದ ಅಣುಅಣುವಿನಲ್ಲಿಯೂ ದೇಶಪ್ರೇಮ ತುಂಬಿದವರಿಗೆ ಇದು ಸಾಮಾನ್ಯ ಮಾತು. ಇದು ಯೋಧನ ವಿಷಯವಾದರೆ, ಇನ್ನು ಅವರ ಕುಟುಂಬಸ್ಥರದ್ದು ಇನ್ನೊಂದು ರೀತಿಯ ನೋವು.
0
samarasasudhi
ಫೆಬ್ರವರಿ 06, 2022
ನವದೆಹಲಿ: ದೇಶಕ್ಕಾಗಿ ಪ್ರಾಣ ಕೊಡುವುದು ಎಂದರೆ ಸಾಮಾನ್ಯ ಜನರ ಕೈಯಲ್ಲಿ ಆಗದ ಮಾತು. ದೇಹದ ಅಣುಅಣುವಿನಲ್ಲಿಯೂ ದೇಶಪ್ರೇಮ ತುಂಬಿದವರಿಗೆ ಇದು ಸಾಮಾನ್ಯ ಮಾತು. ಇದು ಯೋಧನ ವಿಷಯವಾದರೆ, ಇನ್ನು ಅವರ ಕುಟುಂಬಸ್ಥರದ್ದು ಇನ್ನೊಂದು ರೀತಿಯ ನೋವು.
ಅದೇ ಹಾದಿಯಲ್ಲಿ ಸಾಗಿದ್ದಾರೆ ಕಳೆದ ವರ್ಷ ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ಯೋಧ ದೀಪಕ್ ಸಿಂಗ್ ಅವರ ಪತ್ನಿ ರೇಖಾ ದೇವಿ. ಕೊನೆಯ ಉಸಿರಿರುವವರೆಗೂ ದೇಶಸೇವೆಗಾಗಿಯೇ ಜೀವವನ್ನು ಮುಡಿಪಾಗಿಟ್ಟ ಪತಿಯನ್ನೇ ಅನುಸರಿಸಿ ದೇಶಕ್ಕಾಗಿಯೇ ಕೊನೆಯವರೆಗೂ ಹೋರಾಡುವೆ, ಪತಿಯ ಕನಸನ್ನು ನನಸು ಮಾಡುವೆ ಎಂದು ಸೇನೆಯನ್ನು ಸೇರಿದ್ದಾರೆ 23 ವರ್ಷದ ಮಧ್ಯಪ್ರದೇಶದವರಾದ ರೇಖಾ.
2020ರಲ್ಲಿ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರ ವಿರುದ್ಧ ಹೋರಾಡುವ ವೇಳೆ ಅಪ್ರತಿಮ ಸಾಹಸ ತೋರುತ್ತಲೇ ದೀಪಕ್ ಸಿಂಗ್ ಮೃತಪಟ್ಟಿದ್ದರು. ಅವರ ಸಾಹಸಕ್ಕೆ ಕೇಂದ್ರ ಸರ್ಕಾರ ಇತ್ತೀಚೆಗೆ ಅವರಿಗೆ ಮರಣೋತ್ತರ ವೀರ ಚಕ್ರ ನೀಡಿ ಗೌರವಿಸಿತ್ತು. ಈ ಗೌರವವನ್ನು ಅವರ ಪತ್ನಿ ರೇಖಾ ಪಡೆದುಕೊಂಡಿದ್ದರು. ಮನಸ್ಸಿನಲ್ಲಿ ಪತಿಯ ಸಾವಿನ ನೋವಿದ್ದರೂ, ಅದನ್ನು ತೋರಿಸದೇ ಪತಿಯ ಹಾದಿಯನ್ನೇ ತಾವು ಹಿಡಿದು ದೇಶಕ್ಕಾಗಿ ಹೋರಾಡುವೆ ಎಂದಿದ್ದಾರೆ ರೇಖಾ.
ಈ ಕುರಿತ ಮೊದಲ ಹಂತದ ಕಠಿಣವಾದ ವ್ಯಕ್ತಿತ್ವ ಮತ್ತು ಗುಪ್ತಚರ ಪರೀಕ್ಷೆಯಲ್ಲಿ ರೇಖಾ ಉತ್ತೀರ್ಣರಾಗಿದ್ದಾರೆ. ಮುಂಧಿನ ಹಂತದಲ್ಲಿ ಅವರು ದೈಹಿಕ ಸಾಮರ್ಥ್ಯ ಪರೀಕ್ಷೆಗೆ ಬಳಪಡಬೇಕಿದೆ. ಇದರಲ್ಲಿ ಉತ್ತೀರ್ಣರಾದರೆ ಚೆನ್ನೈನಲ್ಲಿರುವ ಆಫೀಸರ್‌ಗಳ ಬಳಿ ಟ್ರೈನಿಂಗ್ ಅಕಾಡೆಮಿಗೆ ಸೇರುವ ಅವಕಾಶ ಪಡೆಯಲಿದ್ದಾರೆ.