ಕೊಚ್ಚಿ: ನಟಿ ಮೇಲಿನ ಹಲ್ಲೆ ಪ್ರಕರಣದ ವಿಡಿಯೋ ದೃಶ್ಯಗಳು ನ್ಯಾಯಾಲಯದಿಂದಲೇ ಸೋರಿಕೆಯಾಗಿದೆ ಎಂಬ ದೂರಿನ ಅನ್ವಯ ಹೈಕೋರ್ಟ್‍ನ ವಿಜಿಲೆನ್ಸ್ ವಿಭಾಗ ತನಿಖೆ ಆರಂಭಿಸಿದೆ. ವಿಜಿಲೆನ್ಸ್ ರಿಜಿಸ್ಟ್ರಾರ್ ಸೂಚನೆ ಮೇರೆಗೆ ಕ್ರಮ ಕೈಗೊಳ್ಳಲಾಗಿದೆ. ಡಿವೈಎಸ್ಪಿ ಜೋಸೆಫ್ ಸೈಜು ತನಿಖೆಯ ಹೊಣೆ ಹೊತ್ತಿದ್ದಾರೆ. ಶನಿವಾರ ಆದೇಶ ಹೊರಡಿಸಲಾಗಿದೆ.
ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮತ್ತು ಡಿಜಿಪಿಗೆ ನಟಿ ದೂರು ಸಲ್ಲಿಸಿದ್ದು, ದಾಳಿಯ ಸೋರಿಕೆಯಾದ ದೃಶ್ಯಗಳ ಕುರಿತು ತನಿಖೆ ನಡೆಸುವಂತೆ ಮನವಿ ಮಾಡಿದ್ದರು. ಈ ದೃಶ್ಯಾವಳಿಗಳು ವಿದೇಶಿಗರ ಬಳಿ ಇವೆ ಎಂದೂ ನಟಿ ಆರೋಪಿಸಿದ್ದಾರೆ. ನಂತರ ಹೈಕೋರ್ಟ್ ತನಿಖೆಗೆ ಆದೇಶಿಸಿತ್ತು.
ಎರ್ನಾಕುಳಂ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಈ ದೃಶ್ಯಾವಳಿಗಳು ಸೋರಿಕೆಯಾಗಿರುವುದನ್ನು ವಿಧಿವಿಜ್ಞಾನ ತಂಡ ದೃಢಪಡಿಸಿದೆ. ರಾಜ್ಯ ಗುಪ್ತಚರ ಇಲಾಖೆಯೂ ಈ ಬಗ್ಗೆ ವರದಿ ನೀಡಿತ್ತು.




