ಪಾಲಕ್ಕಾಡ್: ಮಲಂಪುಳ ಕುರ್‍ಂಪಚಿ ಬೆಟ್ಟದಿಂದ ಸೇನೆ ರಕ್ಷಿಸಿದ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ. ನಿರ್ಬಂಧಿತ ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ನುಗ್ಗಿದ್ದ ಬಾಬು ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಬಾಬು ಜೊತೆ ಬೆಟ್ಟ ಹತ್ತಿದ ಇಬ್ಬರು ವಿದ್ಯಾರ್ಥಿಗಳ ವಿರುದ್ಧವೂ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಕೇರಳ ಅರಣ್ಯ ಕಾಯಿದೆ (27) ಅಡಿಯಲ್ಲಿ ವಾಳಯಾರ್ ರೇಂಜ್ ಆಫೀಸರ್ ಪ್ರಕರಣ ದಾಖಲಿಸಿದ್ದಾರೆ.
ಈ ಹಿಂದೆ ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಅವರು ಬಾಬು ವಿರುದ್ಧ ಯಾವುದೇ ಪ್ರಕರಣ ದಾಖಲಿಸುವುದಿಲ್ಲ ಎಂದು ಹೇಳಿದ್ದರು. ಪ್ರಕರಣವನ್ನು ಇಲಾಖೆ ಕೈಗೆತ್ತಿಕೊಳ್ಳದಂತೆ ಸಚಿವರು ಪ್ರಯತ್ನಿಸಿದರು.
ಆದರೆ ಪ್ರಕರಣವನ್ನು ಕೈಗೆತ್ತಿಕೊಳ್ಳದಿರುವುದು ಇಂತಹ ನಿರ್ಬಂಧಿತ ಅರಣ್ಯ ಪ್ರದೇಶಗಳಿಗೆ ಜನರು ಸಾಹಸ ಮಾಡಲು ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತದೆ ಎಂಬ ಸೂಚನೆಗಳು ಲಭ್ಯವಾಗಿದೆ. ಈ ಪ್ರಕರಣದಲ್ಲಿ ದೂರು ದಾಖಲಿಸದಿರುವುದು ಸರಿಯಾದ ಪದ್ಧತಿಯಲ್ಲ ಎಂಬ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮೊನ್ನೆ ರಾತ್ರಿ ಬಾಬು ಏರಿದ್ದ ಚೇರತ್ ಬೆಟ್ಟವನ್ನು ಜನರ ಗುಂಪೆÇಂದು ಏರಿತ್ತು. ರಾತ್ರಿ ಬೆಟ್ಟದ ತುದಿಯಲ್ಲಿ ಫ್ಲ್ಯಾಶ್ ಲೈಟ್‍ಗಳನ್ನು ಗಮನಿಸಿದ ಸ್ಥಳೀಯರು ಘಟನೆ ಬಗ್ಗೆ ತಿಳಿಸಿದ್ದರು.




