ನವದೆಹಲಿ: 'ಮೊಬೈಲ್ ಸೇರಿದಂತೆ ಟೆಲಿಕಾಂ ಸೇವೆಗಳಲ್ಲಿ ಕೊರತೆ ಕಂಡುಬಂದರೆ ಗ್ರಾಹಕರು ನೇರವಾಗಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು' ಎಂದು ಸುಪ್ರೀಂಕೋರ್ಟ್ ಹೇಳಿದೆ.
0
samarasasudhi
ಫೆಬ್ರವರಿ 28, 2022
ನವದೆಹಲಿ: 'ಮೊಬೈಲ್ ಸೇರಿದಂತೆ ಟೆಲಿಕಾಂ ಸೇವೆಗಳಲ್ಲಿ ಕೊರತೆ ಕಂಡುಬಂದರೆ ಗ್ರಾಹಕರು ನೇರವಾಗಿ ಗ್ರಾಹಕರ ನ್ಯಾಯಾಲಯಕ್ಕೆ ದೂರು ಸಲ್ಲಿಸಬಹುದು' ಎಂದು ಸುಪ್ರೀಂಕೋರ್ಟ್ ಹೇಳಿದೆ.
1885ರ ಕಾಯ್ದೆಯ ಎಸ್‌ಸಿಆರ್‌ಡಿಸಿಯ ಸೆಕ್ಷನ್‌ನ 7ಬಿ ಖಾಸಗಿ ಸೇವಾ ಪೂರೈಕೆದಾರ ಕಂಪನಿಗೆ ಅನ್ವಯವಾಗುವುದಿಲ್ಲ ಎಂಬ ರಾಷ್ಟ್ರೀಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗದ (ಎನ್‌ಸಿಡಿಆರ್‌ಸಿ) ತೀರ್ಪನ್ನು ಪ್ರಶ್ನಿಸಿ ವೊಡಾಫೋನ್ ಕಂಪನಿಯು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ್ ಮತ್ತು ವಿಕ್ರಂನಾಥ್ ಅವರನ್ನೊಳಗೊಂಡ ಪೀಠವು, '1885ರ ಭಾರತೀಯ ಟೆಲಿಗ್ರಾಫ್ ಕಾಯ್ದೆಯಡಿ ಗ್ರಾಹಕರು ತಮ್ಮ ಸಮಸ್ಯೆಗಳಿಗೆ ಸಂಧಾನದ ಮೂಲಕ ಪರಿಹಾರ ಪಡೆದುಕೊಳ್ಳಬಹುದು. ಆದರೆ, ಗ್ರಾಹಕರ ನ್ಯಾಯಾಲಯದ ಮೊರೆ ಹೋಗಲೇಬಾರದು ಎಂದೇನೂ ಇಲ್ಲ' ಎಂದು ಹೇಳಿದೆ.
'ಗ್ರಾಹಕರು ಮಧ್ಯಸ್ಥಿಕೆ ಮೂಲಕವು ಪರಿಹಾರವನ್ನು ಕಂಡುಕೊಳ್ಳಬಹುದು. ಆದರೆ, ಅದೇ ಪರಿಹಾರವನ್ನು ಆಯ್ಕೆ ಮಾಡಬೇಕೆಂಬ ಕಟ್ಟುಪಾಡನ್ನು ಈ ಕಾಯ್ದೆ ಹೊಂದಿಲ್ಲ. ಅಲ್ಲದೇ, 1986 ರ ಕಾಯ್ದೆಯಡಿ (ಗ್ರಾಹರಕ ರಕ್ಷಣೆ) ಒದಗಿಸಲಾದ ಪರಿಹಾರಗಳನ್ನೂ ಗ್ರಾಹಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಆಯ್ಕೆ ಮಾಡಿಕೊಳ್ಳಬಹುದು' ಎಂದು ತಿಳಿಸಿದೆ.