HEALTH TIPS

ಮತ್ತೊಂದು ಓಮಿಕ್ರಾನ್ ರೂಪಾಂತರ ಉಪತಳಿ ವೈರಸ್ ಪತ್ತೆ: ಹೈ ಅಲರ್ಟ್ ನಲ್ಲಿ ವಿಜ್ಞಾನಿಗಳು

          ಲಂಡನ್: ಜಗತ್ತಿನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರದ ಅಬ್ಬರವೇ ಇನ್ನೂ ಕಡಿಮೆಯಾಗಿಲ್ಲ.. ಅದಾಗಲೇ ಅದರದೇ ಮತ್ತೊಂದು ಉಪ ತಳಿ ವೈರಸ್ ತನ್ನ ಆರ್ಭಟ ಆರಂಭಿಸಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

         ಕೊರೊನಾ ಓಮಿಕ್ರಾನ್‌ನ ಹೊಸ ರೂಪಾಂತರವು ಹೊರಹೊಮ್ಮಿದ್ದು, ಜೊತೆಗೆ ಹೊಸ ಹೊಸ ವೈರಸ್‌ಗಳು ಹುಟ್ಟಿಕೊಳ್ಳುತ್ತಿವೆ. ಇದೇ ವೇಳೆ ಮತ್ತೊಂದು ಹೊಸ ವೈರಸ್ ಕಾಣಿಸಿಕೊಂಡಿದೆ. ಓಮಿಕ್ರಾನ್ ವೈರಸ್ ತಳಿಯ ಉಪತಳಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು ಇದಕ್ಕೆ BA2 ಎಂದು ಗುರುತಿಸಿದ್ದಾರೆ.

         ಮೂಲಗಳ ಪ್ರಕಾರ ಓಮಿಕ್ರಾನ್ ಮೂಲ ರೂಪಾಂತರಕ್ಕಿಂತ BA2 ರೂಪಾಂತರವು ಹೆಚ್ಚು ವ್ಯಾಪಕವಾಗಿ ಹರಡುತ್ತದೆ.  ಕೆಲವು ಅನುವಂಶಿಕ ಲಕ್ಷಣಗಳಿಂದ ಈ ವೈರಸ್ ಸೋಂಕನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಈ ಓಮಿಕ್ರಾನ್ ರೂಪಾಂತರದ BA2 ಪ್ರಕರಣಗಳು ಈಗಾಗಲೇ 54 ದೇಶಗಳಲ್ಲಿ ವರದಿಯಾಗಿದೆ ಎಂದು ತಿಳಿದು ಬಂದಿದೆ.

            ಈ BA2 ರೂಪಾಂತರದ ಪ್ರಕರಣಗಳು ಈಗಾಗಲೇ ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ವರದಿಯಾಗಿದೆ. ಪ್ರಸ್ತುತ ಡೆನ್ಮಾರ್ಕ್‌ನಲ್ಲಿ ಬರುತ್ತಿರುವ ಹೆಚ್ಚಿನ ಪ್ರಕರಣಗಳು BA2 ರೂಪಾಂತರವಾಗಿದೆ. ಇದಲ್ಲದೆ, ಸಿಂಗಾಪುರದಲ್ಲಿ ಈ ರೂಪಾಂತರದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಬಿಎ2 ರೂಪಾಂತರವು ಓಮಿಕ್ರಾನ್ ರೂಪಾಂತರಕ್ಕಿಂತ ಒಂದೂವರೆ ಪಟ್ಟು ವೇಗವಾಗಿ ಹರಡುವ ಗುಣವನ್ನು ಹೊಂದಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಲಸಿಕೆಯ ಪರಿಣಾಮಕಾರಿತ್ವವು BA1  ಮತ್ತು  BA2 ರೂಪಾಂತರಗಳ ಮೇಲೆ ತನ್ನ ಪ್ರಭಾವವನ್ನ ತೋರಬಲ್ಲದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries