HEALTH TIPS

ತೀವ್ರವಾಗಿ ಕ್ಷೀಣಿಸುತ್ತಿರುವ ಹಿಮಾಲಯದ ಅತೀ ಎತ್ತರದ ಹಿಮನದಿ: ಅಧ್ಯಯನ ವರದಿ

            ಕಠ್ಮಂಡು: ಮಿಲಿಯಾಂತರ ವರ್ಷಗಳಿಂದ ರೂಪುಗೊಂಡಿದ್ದ ಮೌಂಟ್ ಎವರೆಸ್ಟ್ ಪರ್ವತದ ಅತೀ ಎತ್ತರದ ಹಿಮ ನದಿ(ಹಿಮಪ್ರವಾಹ)ಯ ಹಿಮದ ಪ್ರಮಾಣ ಕಳೆದ 3 ದಶಕದಲ್ಲಿ ಹವಾಮಾನ ವೈಪರೀತ್ಯದ ಸಮಸ್ಯೆಯಿಂದ ಅತ್ಯಂತ ತೀವ್ರವಾಗಿ ಕ್ಷೀಣಿಸುತ್ತಿದೆ ಎಂದು ನೂತ ಅಧ್ಯಯನದಿಂದ ಕಂಡು ಬಂದಿದೆ.

‌            ದಕ್ಷಿಣದ ಕಣಿವೆಯಲ್ಲಿ ಸುಮಾರು 55 ಮೀಟರ್ನಷ್ಟು ದಪ್ಪದ ಮಂಜು ಕಳೆದ 25 ವರ್ಷದಿಂದ ಕಡಿಮೆಯಾಗಿದೆ ಎಂದು ಮೆಯ್ನ ವಿವಿ ನಡೆಸಿದ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕಣಿವೆಯ ಮಂಜಿನ ಪದರದ ಮೇಲ್ಮೈ ಸುಮಾರು 2000 ವರ್ಷ ಪುರಾತನವಾಗಿದೆ ಮತ್ತು ಈ ಹಿಮ ನದಿ ರೂಪುಗೊಳ್ಳಲು ಬೇಕಾದ ಅವಧಿಗಿಂತ 80 ಪಟ್ಟು ವೇಗವಾಗಿ ಕ್ಷೀಣಿಸುತ್ತಿದೆ ಎಂದು ವರದಿ ಹೇಳಿದೆ. ಇದೇ ವೇಗ ಮುಂದುವರಿದರೆ ಕೆಲ ದಶಕಗಳಲ್ಲೇ ಈ ಹಿಮಪ್ರವಾಹ ಕಣ್ಮರೆಯಾಗಲಿದೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಪೌಲ್ ಮಯೆಸ್ಕಿ ಹೇಳಿದ್ದಾರೆ.
            ದಕ್ಷಿಣದ ಕಣಿವೆಯ ಹಿಮ ನದಿ ಸಮುದ್ರ ಮಟ್ಟಕ್ಕಿಂತ ಸುಮಾರು 26000 ಅಡಿ ಎತ್ತರವಿದೆ ಮತ್ತು ವಿಶ್ವದ ಅತೀ ಎತ್ತರದ ಪರ್ವತಕ್ಕಿಂತ 1 ಕಿ.ಮೀ ಕೆಳಗಿದೆ. ಹಿಮಾಲಯದ ಹಿಮ ನದಿಗಳೂ ಕ್ಷಿಪ್ರವಾಗಿ ಕ್ಷೀಣಿಸುತ್ತಿವೆ ಎಂದು ಇತರ ಅಧ್ಯಯನ ವರದಿ ಈ ಹಿಂದೆಯೇ ಉಲ್ಲೇಖಿಸಿದೆ. ಹಿಮ ನದಿಗಳು ಕರಗಿದರೆ ಹಿಮಾಲಯದ ತಳಭಾಗದಲ್ಲಿ ನೂರಾರು ಕೆರೆಗಳು ರೂಪುಗೊಳ್ಳುತ್ತವೆ ಮತ್ತು ಕೆರೆಗಳ ದಡ ಕುಸಿದು ಪ್ರವಾಹ ಉಕ್ಕೇರಿ ಹರಿಯುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries