ನವದೆಹಲಿ : ತನ್ನ ಅಧಿಕಾರಿಗಳು ಇಂಟರ್ನೆಟ್ ಮೂಲಕ ಉನ್ನತ ರಹಸ್ಯ ಅಥವಾ ರಹಸ್ಯ ದಾಖಲೆಗಳನ್ನು ಹಂಚಿಕೊಳ್ಳುವುದಕ್ಕೆ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ನಿಷೇಧ ವಿಧಿಸಿದೆ. ಕಚೇರಿಯಲ್ಲಿ ಅಮೆಜಾನ್ನ ಇಕೊ, ಆಯಪಲ್ನ ಹೋಮ್ಪಾಡ್ ಹಾಗೂ ಗೂಗಲ್ನ ಹೋಮ್ನಂತಹ ಡಿಜಿಟಲ್ ಸಹಾಯಕ ಸಾಧನಗಳನ್ನು ಬಳಸದಂತೆ ಹಾಗೂ ತಮ್ಮ ಸ್ಮಾರ್ಟ್ಫೋನ್ ಅಥವಾ ವಾಚ್ಗಳಲ್ಲಿ ಅಲೆಕ್ಸಾ ಹಾಗೂ ಸಿರಿ ಸೇರಿದಂತೆ ಡಿಜಿಟಲ್ ಸಹಾಯಕಗಳನ್ನು ಸ್ಥಗಿತಗೊಳಿಸುವಂತೆ ಅದು ಅಧಿಕಾರಿಗಳಿಗೆ ತಿಳಿಸಿದೆ.
ವರ್ಗೀಕೃತ ವಿಷಯಗಳ ಚರ್ಚೆಯ ಸಂದರ್ಭ ಅಧಿಕಾರಿಗಳು ತಮ್ಮ ಸ್ಮಾರ್ಟ್ ಫೋನ್ಗಳನ್ನು ಸಭಾ ಕೊಠಡಿಯಿಂದ ಹೊರಗಿರಿಸುವ ಅಗತ್ಯತೆ ಇದೆ ಎಂದು ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಆದೇಶ ಹೇಳಿದೆ.
ದೊಡ್ಡ ಸಂಖ್ಯೆಯ ಅಧಿಕಾರಿಗಳು ವರ್ಗೀಕೃತ ಮಾಹಿತಿಯ ಬಗ್ಗೆ ಸಂವಹನ ನಡೆಸಲು ವಾಟ್ಸ್ ಆಯಪ್ ಹಾಗೂ ಟೆಲಿಗ್ರಾಮ್ನಂತಹ ಖಾಸಗಿ ಸಂದೇಶ ವೇದಿಕೆ ಬಳಸುತ್ತಾರೆ. ಈ ಹಿನ್ನೆಲೆಯಲ್ಲಿ ಸಚಿವಾಲಯ ಈ ಆದೇಶ ನೀಡಿದೆ. ಇಂತಹ ಅಭ್ಯಾಸಗಳು ಇಲಾಖೆಯ ಭದ್ರತಾ ಸೂಚನೆಗಳನ್ನು ಹಾಗೂ ರಾಷ್ಟ್ರೀಯ ಮಾಹಿತಿ ಭದ್ರತಾ ನೀತಿಯ ಮಾರ್ಗಸೂಚಿಯನ್ನು ಉಲ್ಲಂಘಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.