HEALTH TIPS

ಕೋವಿಡ್‌: ಭಾರತದ ಮಾರುಕಟ್ಟೆಗೆ ಬಂತು ಫ್ಯಾಬಿಸ್ಪ್ರೆ; ಏನಿದು?

           ಮುಂಬೈ: ಕೋವಿಡ್‌-19 ಪೀಡಿತರ ಪೈಕಿ ಕಾಯಿಲೆ ಉಲ್ಬಣಿಸುವ ಅಪಾಯ ಎದುರಿಸುತ್ತಿರುವವರಿಗಾಗಿ ಮೂಗಿನಲ್ಲಿ ಸಿಂಪಡಣೆ ಮಾಡಬಹುದಾದ (ನೇಜಲ್ ಸ್ಪ್ರೆ) 'ಫ್ಯಾಬಿಸ್ಪ್ರೆ' ಎಂಬ ಔಷಧವನ್ನು ದೇಶದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.

           ಗ್ಲೆನ್‌ಮಾರ್ಕ್ ಫಾರ್ಮಾಸ್ಯೂಟಿಕಲ್ಸ್‌ ಹಾಗೂ ಕೆನಡಾ ಮೂಲದ ಸ್ಯಾನೊಟೈಜ್ ರಿಸರ್ಜ್ ಅಂಡ್ ಡೆವಲೆಪ್‌ಮೆಂಟ್‌ ಕಾರ್ಪ್ ಕಂಪನಿಗಳು ಈ ಕುರಿತು ಘೋಷಿಸಿವೆ. 'ನೈಟ್ರಿಕ್‌ ಆಕ್ಸೈಡ್‌' ಒಳಗೊಂಡಿರುವ ಈ ಔಷಧ ವೈರಸ್‌ ನಾಶಕವಾಗಿ ಕೆಲಸ ಮಾಡುವುದು ಸಾಬೀತಾಗಿದೆ ಎಂದೂ ತಿಳಿಸಿವೆ.

             ಭಾರತದಲ್ಲಿ ಈ ಔಷಧವನ್ನು ತಯಾರಿಸಲು ಹಾಗೂ ಮಾರಾಟಕ್ಕೆ ಗ್ಲೆನ್‌ಮಾರ್ಕ್‌ ಕಂಪನಿಗೆ ಡಿಸಿಜಿಐ ಇತ್ತೀಚೆಗೆ ಅನುಮೋದನೆ ನೀಡಿತ್ತು.

            ಈ ಔಷಧವು ಸೂಕ್ಷ್ಮಾಣುಜೀವಿ ನಿರೋಧಕ ಗುಣಗಳನ್ನು ಹೊಂದಿದ್ದು, ಕೋವಿಡ್‌ಗೆ ಕಾರಣವಾಗುವ 'ಸಾರ್ಸ್‌-ಕೋವ್-2' ವೈರಸ್‌ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಈ ಔಷಧವನ್ನು ಮೂಗಿನ ಹೊಳ್ಳೆಗಳಲ್ಲಿ ಸಿಂಪಡಿಸಿದಾಗ ಅದು, ವೈರಸ್‌ನ ದಾಳಿಗೆ ರಾಸಾಯನಿಕವಾಗಿ ಹಾಗೂ ಭೌತಿಕವಾಗಿ ತಡೆಗೋಡೆಯಂತೆ ಕೆಲಸ ಮಾಡುತ್ತದೆ. ಇದರಿಂದ, ಕೊರೊನಾ ವೈರಸ್‌ ವೃದ್ಧಿಯಾಗದಂತೆ ಹಾಗೂ ಶ್ವಾಸಕೋಶ ಪ್ರವೇಶಿಸಿ ಸೋಂಕು ಹರಡದಂತೆ ತಡೆಗಟ್ಟುತ್ತದೆ ಎಂದು ಕಂಪನಿಗಳು ಹೇಳಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries