ಕಾಸರಗೋಡು: ಕಾಸರಗೋಡು ಬಿ ಇ ಎಂ ಪ್ರೌಢ ಶಾಲೆಯ 1994-95 ನೇ ತಂಡದ ಹಳೆವಿದ್ಯಾರ್ಥಿ ಸಂಘದ ವತಿಯಿಂದ ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿರುವ ಮಣಿಯಂಪಾರೆಯ ಶಿವಪ್ಪ ನಾಯ್ಕ ಅವರಿಗೆ 75000 ರೂಗಳ ಆರ್ಥಿಕ ನೆರವನ್ನು ನೀಡಲಾಯಿತು.
ಮಣಿಯಂಪಾರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಣೆ ಉದ್ಘಾಟನೆಯನ್ನು ಸಮಿತಿ ಅಧ್ಯಕ್ಷ ಸಜಿತ್ ಕುಮಾರ್ ಕೆ ಟಿ ನೆರವೇರಿಸಿದರು. ಕೋಶಾಧಿಕಾರಿ ಗಣೇಶ್ ಕೇಳುಗುಡ್ಡೆ ವಿಷಯ ಮಂಡಿಸಿದರುಉಪಾಧ್ಯಕ್ಷ ದಿನೇಶ್ ಆಚಾರ್ಯ, ಸಮಿತಿ ಸದಸ್ಯರಾದ ಮೋಹನ್ ಕುಮಾರ್ ಶೆಟ್ಟಿ, ಮಮತಾ ಪೈ, ಮನೋಜ್ ಉಪಸ್ಥಿತರಿದ್ದರು. ಪ್ರಧಾನಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಮಿತಿ ಸದಸ್ಯೆ ಪೂರ್ಣಿಮಾ ಮಲ್ಯ ವಂದಿಸಿದರು. ಸೆಮಿ ವರ್ಚುವಲ್ ಮೂಲಕ ನಡೆದ ಕಾರ್ಯಕ್ರಮವನ್ನು ಅನಿಲ್ ಮೈಸೂರು ನಿಯಂತ್ರಿಸಿದರು. ಸದಸ್ಯೆ ಪೂರ್ಣಿಮಾ ರಾವ್ ಕಾರ್ಯಕ್ರಮ ನಿರೂಪಿಸಿದರು.




