HEALTH TIPS

ಈ ಬೀದಿ ಗಾಯಕರಿಗೆ ಲತಾ ಮಂಗೇಶ್ಕರ್ ನೆರವಾದದ್ದು ಹೇಗೆ ಗೊತ್ತೇ ?

           ಕೋಝಿಕ್ಕೋಡ್ : ತಮ್ಮ ಅಪೂರ್ವ ಗಾಯನದ ಮೂಲಕ ವಿಶ್ವಾದ್ಯಂತ ಕೋಟ್ಯಂತರ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕಿದ್ದ ಲತಾ ಮಂಗೇಶ್ಕರ್ ಅವರ ಸಾವಿನ ಸುದ್ದಿ ಕೋಝಿಕ್ಕೋಡ್‌ನ ಕುಟುಂಬವೊಂದಕ್ಕೆ ಬರಸಿಡಿಲಿನಂತೆ ಬಂದೆರಗಿದೆ.

            ಕೋಝಿಕ್ಕೋಡ್‌ನ ಮಾವೂರಿನ ಬೀದಿಗಾಯಕ ಬಾಬುಬಾಯ್ ಮತ್ತು ಪತ್ನಿ ಲತಾ, ಅವರು ಮಂಗೇಶ್ಕರ್ ಅವರನ್ನು ಮುಂಬೈ ಆಸ್ಪತ್ರೆಗೆ ಸೇರಿಸಿದ ದಿನದಿಂದ ಅವರ ಅರೋಗ್ಯಕ್ಕಾಗಿ ಪ್ರತಿದಿನ ಪ್ರಾರ್ಥಿಸುತ್ತಿದ್ದರು.

            ಕೋಝಿಕ್ಕೋಡ್‌ನ ಬೀದಿಗಳಲ್ಲಿ ಮೂರು ದಶಕಗಳಿಂದ ಹಾಡುತ್ತಾ ಬದುಕು ನಡೆಸುತ್ತಿರುವ ಈ ದಂಪತಿಗೆ ಆರು ಮಕ್ಕಳನ್ನು ಬೆಳೆಸಲು ನೆರವಾದದ್ದು ಲತಾ ಮಂಗೇಶ್ಕರ್ ಅವರ ಹಾಡುಗಳು.

ಗಾನಕೋಗಿಲೆ ಇವರ ಪಾಲಿಗೆ ಆರಾಧ್ಯ ದೇವತೆ. ಲತಾ ಮಂಗೇಶ್ಕರ್ ಅವರ ಹಾಡುಗಳೇ ಇವರನ್ನು ಕತರ್‌ನಲ್ಲಿ ದೋಹಾ ಮೂಲದ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ನಡೆದ ಒಂದು ವಾರ ಅವಧಿಯ ಸಂಗೀತ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದವು ಹಾಗೂ ದುಬೈನಲ್ಲಿ ನಡೆದ ಬಾಲಿವುಡ್ ಮ್ಯೂಸಿಕಲ್ ನೈಟ್‌ನಲ್ಲಿ ಭಾಗವಹಿಸುವ ಅವಕಾಶವೂ ಲತಾ ಹಾಡುಗಳಿಂದಾಗಿ ಲಭಿಸಿತು ಎಂದು ಈ ದಂಪತಿ ಹೇಳುತ್ತಾರೆ.

             "ಹೃದಯ ಸಮಸ್ಯೆಯಿಂದಾಗಿ ನಮ್ಮ 20 ವರ್ಷದ ಮಗನನ್ನು ಕೋಝಿಕ್ಕೋಡ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ ದಿನವೇ ಲತಾಜಿ ಅವರ ದೇಹಸ್ಥಿತಿ ಗಂಭೀರವಾದ ಸುದ್ದಿಯೂ ನಮಗೆ ತಿಳಿಯಿತು. ಅಂದಿನಿಂದ ಇಂದಿನವರೆಗೂ ಇಬ್ಬರ ಆರೋಗ್ಯಕ್ಕಾಗಿ ನಾವು ಪ್ರಾರ್ಥಿಸುತ್ತಿದ್ದೆವು. ಇಬ್ಬರೂ ನಮ್ಮ ಜೀವನದಲ್ಲಿ ಮುಖ್ಯವಾಗಿದ್ದರು. ರವಿವಾರ ಬೆಳಗ್ಗೆ ಲತಾ ಸಾವಿನ ಸುದ್ದಿ ಕೇಳುತ್ತಿದ್ದಂತೆ ಅಕ್ಷರಶಃ ನಮ್ಮ ಹೃದಯವೂ ಒಡೆದು ಹೋಯಿತು. ನಮ್ಮ ಜೀವನದ ಕೊನೆಯವರೆಗೂ ಲತಾಜಿ ಹಾಡಿದ ಹಾಡುಗಳನ್ನು ನಾವು ಹಾಡುತ್ತೇವೆ. ಅವರು ನಮ್ಮ ಭಾಗ್ಯದೇವತೆ ಹಾಗೂ ಬದುಕಿನ ಸೆಲೆಯಾಗಿದ್ದರು" ಎಂದು ಬಾಬುಬಾಯ್ ಅವರ ಪತ್ನಿ ಲತಾ ವಿವರಿಸಿದರು.

            ನನ್ನ ತಂದೆ ತಾಯಿ ನನಗೆ ಈ ಗಾನಕೋಗಿಲೆಯ ಹೆಸರನ್ನೇ ಇಟ್ಟಿರುವುದು ನನ್ನ ಅದೃಷ್ಟ. ತಂದೆ ತಾಯಿ ಇಬ್ಬರೂ ಗುಜರಾತ್‌ನಿಂದ ಉದ್ಯೋಗ ಅರಸಿಕೊಂಡು ಬಂದು ಇಲ್ಲಿ ನೆಲೆ ನಿಂತವರು. ಆದರೆ ಬೀದಿಗಾಯಕರಾಗಿ ಜೀವನ ಕಳೆಯಬೇಕಾಯಿತು. ಲತಾಜಿ, ಕಿಶೋರ್ ಕುಮಾರ್ ಹಾಗೂ ಮೊಹ್ಮದ್ ರಫಿಯವರ ಹಾಡುಗಳನ್ನು ಅವರು ಹಾಡುತ್ತಿದ್ದರು. ನಾನು 1962ರಲ್ಲಿ ಹುಟ್ಟಿದಾಗ ಯಾವುದೇ ಬೇರೆ ಯೋಚನೆ ಮಾಡದೇ ತಾಯಿ ನನಗೆ ಭಾರತದ ಗಾಯಕೋಗಿಲೆಯ ಹೆಸರಾದ ಲತಾ ಎಂಬ ಹೆಸರಿಟ್ಟರು ಎಂದು ಬಣ್ಣಿಸಿದರು.

            ಹತ್ತನೇ ವಯಸ್ಸಿನಲ್ಲಿದ್ದಾಗ ತಾಯಿ ನನಗೆ ಮೊದಲು ಕಲಿಸಿದ ಹಾಡು ಲತಾಜಿಯವರ "ಶೋರ್" ಚಿತ್ರದ 'ಏಕ್ ಪ್ಯಾರ್ ಕಾ ನಗ್ಮಾ ಹೈ' ಹಾಡು ಎಂದು ನೆನಪಿಸಿಕೊಂಡರು. ಪತಿ ಕೂಡಾ ಲತಾಜಿಯವರ ಅಭಿಮಾನಿ ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries