ಕೊಚ್ಚಿ: ಹೊಸ ಮಾದರಿಯ ಸೈಬರ್ ಕ್ರೈಂಗೆ ಮುಂದಾಗಿರುವ ವಂಚಕರು ವಾಟ್ಸ್ಆಯಪ್ ಖಾತೆಯನ್ನು ಹೈಜಾಕ್ ಮಾಡಿ ಫೋನ್ ಕಾಲ್ ಅಥವಾ ಎಸ್ಎಂಎಸ್ ಮೂಲಕ ಒಟಿಪಿ ಪಡೆದು, ವಿವಿಧ ಅಪರಾಧಗಳನ್ನು ಎಸಗಲು ಮುಂದಾಗಿರುವುದಾಗಿ ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
0
samarasasudhi
ಫೆಬ್ರವರಿ 14, 2022
ಕೊಚ್ಚಿ: ಹೊಸ ಮಾದರಿಯ ಸೈಬರ್ ಕ್ರೈಂಗೆ ಮುಂದಾಗಿರುವ ವಂಚಕರು ವಾಟ್ಸ್ಆಯಪ್ ಖಾತೆಯನ್ನು ಹೈಜಾಕ್ ಮಾಡಿ ಫೋನ್ ಕಾಲ್ ಅಥವಾ ಎಸ್ಎಂಎಸ್ ಮೂಲಕ ಒಟಿಪಿ ಪಡೆದು, ವಿವಿಧ ಅಪರಾಧಗಳನ್ನು ಎಸಗಲು ಮುಂದಾಗಿರುವುದಾಗಿ ಕೇರಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
'ವಾಟ್ಸ್ಆಯಪ್ ಸಪೋರ್ಟ್ ಸರ್ವೆ' ಸೋಗಿನಲ್ಲಿ ವಂಚಕರು ಫೋನ್ ಕಾಲ್ ಮೂಲಕ ಹಗರಣ ನಡೆಸಲು ಮುಂದಾಗಿದ್ದಾರೆ. ವಂಚಕರು ಸಂಭಾಷಣೆಯ ಸಮಯದಲ್ಲಿಯೇ ಕರೆ ಮಾಡಿದವರ ಸಂಖ್ಯೆಯಲ್ಲಿ ನಕಲಿ ವ್ಯಾಟ್ಸ್ಆಯಪ್ ಖಾತೆಯನ್ನು ರಚಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ. ಇದೇ ಸಂದರ್ಭದಲ್ಲಿ ಒಟಿಪಿ ಕೇಳುತ್ತಾರೆ. ಒಂದು ವೇಳೆ ಒಟಿಪಿ ನೀಡಿದರೆ, ಅವರು ನಿಮ್ಮ ವಾಟ್ಸ್ಆಯಪ್ ಒಳಗೆ ಪ್ರವೇಶಿಸಿ ಅಲ್ಲಿರುವ ಎಲ್ಲ ದಾಖಲೆಗಳನ್ನು ಕದಿಯಲಿದ್ದಾರೆ.
ನಕಲಿ ವಾಟ್ಸ್ಆಯಪ್ ಖಾತೆಗಳನ್ನು ಹಣಕಾಸು ವಂಚನೆಗೆ ಬಳಸಲಾಗುತ್ತಿದೆ. ನಕಲಿ ಖಾತೆಯ ಮೂಲಕ ಬಳಕೆದಾರರ ನಿಕಟ ಸ್ನೇಹಿತರು ಮತ್ತು ಸಂಬಂಧಿಕರನ್ನು ತಲುಪುತ್ತಾರೆ ಮತ್ತು ಆರ್ಥಿಕ ಸಹಾಯವನ್ನು ಕೇಳುತ್ತಾರೆ. ಆದರೆ, ಅಧಿಕೃತ ಖಾತೆಯಿಂದಲೇ ವಿನಂತಿ ಬಂದಂತೆ ನಂಬಿ ಅನೇಕ ಜನರು ಹಣವನ್ನು ವರ್ಗಾಯಿಸುತ್ತಾರೆ.
ಇಷ್ಟೇ ಅಲ್ಲದೆ, ವಂಚಕರು ಅಶ್ಲೀಲ ಪೋಸ್ಟರ್‌ಗಳನ್ನೂ ಕಳುಹಿಸುತ್ತಿದ್ದಾರೆ. ಈ ವಂಚನೆಯಲ್ಲಿ ಯಾರಾದರೂ ಸಿಕ್ಕಿಬಿದ್ದಿರುವುದು ಕಂಡು ಬಂದಲ್ಲಿ ಕೂಡಲೇ ಇ-ಮೇಲ್ ಮೂಲಕ ವಾಟ್ಸ್ಆಯಪ್ ಕಸ್ಟಮರ್ ಕೇರ್ಗೆ ದೂರು ನೀಡಬೇಕು ಎಂದು ಪೊಲೀಸರು ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಒಟಿಪಿ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ ಮತ್ತು ವಾಟ್ಸ್ಆಯಪ್ ಎರಡು-ಹಂತದ ಪರಿಶೀಲನೆ' ಅನ್ನು ಆನ್ ಮಾಡಿ ಎಂದು ಪೊಲೀಸರು ಗ್ರಾಹಕರನ್ನು ವಿನಂತಿಸಿದ್ದಾರೆ.